• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಸ್ಪತ್ರೆ ಭೇಟಿ ಸಂದರ್ಭದಲ್ಲಿ ನೀವು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು

|

ನವದೆಹಲಿ, ಅಕ್ಟೋಬರ್ 05: ಕೊವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಆಸ್ಪತ್ರೆಗೆ ಭೇಟಿ ನೀಡುವುದು ಕೂಡ ಅಪಾಯಕಾರಿಯಾಗಿದ್ದು, ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.

ಕೊರೊನಾ ಲಾಕ್‌ಡೌನ್ ಅನ್‌ಲಾಕ್ ಪ್ರಕ್ರಿಯೆ ಚಾಲ್ತಿಯಲ್ಲಿದೆ, ದಿನಕ್ಕೊಂದು ಸೇವೆಗಳು ಆರಂಭವಾಗುತ್ತಿದೆ, ಅಂಗಡಿ, ಮಳಿಗೆ, ಮಾಲ್‌ಗಳು ಯಥಾಸ್ಥಿತಿಗೆ ಮರಳುತ್ತಿವೆ.

ಸೋಂಕಿನ ಭಯದಿಂದಾಗಿ ಕೆಲವು ಶಸ್ತ್ರ ಚಿಕಿತ್ಸೆ, ರೂಟಿನ್ ಚೆಕ್‌ಅಪ್‌ಗಳನ್ನು ಮಾಡಿಸಲು ಸಾಧ್ಯವಾಗುತ್ತಿಲ್ಲ, ಅದಕ್ಕಾಗಿ ಹಲವು ಮಂದಿ ಕೊರೊನಾವಿಲ್ಲದೆಯೂ ಸಾವನ್ನಪ್ಪುತ್ತಿದ್ದಾರೆ.

ಕೊರೊನಾ ಸೋಂಕಿತರು ಈ 2 ವಸ್ತುಗಳ ವಾಸನೆ ಗ್ರಹಿಸಲು ಸಾಧ್ಯವಿಲ್ಲ

ಹೀಗಾಗಿ ಆಸ್ಪತ್ರೆಗಳು ಇತರೆ ಆರೋಗ್ಯ ಸಮಸ್ಯೆಯನ್ನು ನಿಭಾಯಿಸಲು ಸಜ್ಜುಗೊಂಡಿವೆ.ಒಪಿಡಿಯಿಂದ ಹಿಡಿದು ಸಾಮಾನ್ಯ ಸೇವೆಗಳು ಮತ್ತೆ ಹಳೆಯ ಸ್ಥಿತಿಗೆ ಮರಳಿವೆ. ಆದರೆ ಆಸ್ಪತ್ರೆಗೆ ಭೇಟಿ ನೀಡುವುದು ಸುರಕ್ಷಿತವೋ ಇಲ್ಲವೋ ಎಂಬ ಗೊಂದಲ ಎಲ್ಲಾ ರೋಗಿಗಳಲ್ಲೂ ಇದೆ.

ಆಸ್ಪತ್ರೆಗೆ ಭೇಟಿ ನೀಡುವಾಗ ರೋಗಿಗಳಿಗೆ ಸುರಕ್ಷತಾ ಮಾರ್ಗಸೂಚಿಗಳು ಹೀಗಿವೆ.

ವೈದ್ಯರ ಬಳಿ ಹೋಗುವ ಮೊದಲೇ ಅಪಾಯಿಂಟ್‌ಮೆಂಟ್ ಪಡೆದುಕೊಳ್ಳಿ

ವೈದ್ಯರ ಬಳಿ ಹೋಗುವ ಮೊದಲೇ ಅಪಾಯಿಂಟ್‌ಮೆಂಟ್ ಪಡೆದುಕೊಳ್ಳಿ

ಮನೆಯಿಂದ ಹೊರಡುವ ಮುನ್ನವೇ ಇಂದು ವೈದ್ಯರು ಸಿಗುತ್ತಾರೋ ಇಲ್ಲವೋ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಿ, ಅಪಾಯಿಂಟ್‌ಮೆಂಟ್ ಪಡೆದುಕೊಳ್ಳಿ. ಕ್ಯೂನಲ್ಲಿ ನಿಲ್ಲುವುದು ತಪ್ಪುತ್ತದೆ. ಆನ್‌ಲೈನ್ ಅಥವಾ ದೂರವಾಣಿಯಲ್ಲಿ ಕಾಯ್ದಿರಿಸಬೇಕೆ ಎಂದು ತಿಳಿಯಲು ಆಸ್ಪತ್ರೆಗೆ ಮೊದಲು ಕರೆ ಮಾಡಿ ಪರೀಕ್ಷಿಸಿಕೊಳ್ಳಿ. ಮಾಸ್ಕ್ ಧರಿಸಿ, ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್ ಬಳಕೆ ಮಾಡಿ, ಕೈಗವಸು ಮತ್ತು ಒದ್ದೆಯಾದ ವರೆಸುವ ಬಟ್ಟೆಯನ್ನು ಒಯ್ಯಿರಿ. ನಿಮ್ಮ ಸ್ವಂತ ನೀರಿನ ಬಾಟಲಿಯನ್ನು ಮನೆಯಿಂದ ಕೊಂಡೊಯ್ಯುವುದು ಉತ್ತಮ.

ನಿಮ್ಮ ಜೊತೆ ಮತ್ತೊಬ್ಬ ಆರೋಗ್ಯವಂತ ವ್ಯಕ್ತಿ ಇರಲಿ

ನಿಮ್ಮ ಜೊತೆ ಮತ್ತೊಬ್ಬ ಆರೋಗ್ಯವಂತ ವ್ಯಕ್ತಿ ಇರಲಿ

ಆಸ್ಪತ್ರೆಗೆ ನಿಮ್ಮೊಂದಿಗೆ ಹೋಗಲು, ಮತ್ತು ಜನದಟ್ಟಣೆ ತಪ್ಪಿಸಲು ಇನ್ನೊಬ್ಬ ಆರೋಗ್ಯವಂತ ವ್ಯಕ್ತಿ ಮಾತ್ರ ಬರಬೇಕು ಎಂದು ಶಿಫಾರಸು ಮಾಡಲಾಗಿದೆ. ಕೆಮ್ಮು ಮತ್ತು ಶೀತದ ಯಾವುದೇ ರೋಗಲಕ್ಷಣಗಳಿದ್ದವರು ಒಳಾಂಗಣದಲ್ಲಿಯೇ ಇರಬೇಕು. ಗರ್ಭಿಣಿಯರು ವಯಸ್ಸಾದವರು ಮತ್ತು ಮಕ್ಕಳು ಆಸ್ಪತ್ರೆಗೆ ಭೇಟಿ ನೀಡುವುದನ್ನು ತಪ್ಪಿಸಬೇಕು, ತುರ್ತು ಅತಗ್ಯವಿದ್ದರೆ ಮಾತ್ರ ಬರಬೇಕು.

ನಿಮ್ಮ ಸ್ವಂತ ವಾಹನದಲ್ಲೇ ಹೋಗಿ

ನಿಮ್ಮ ಸ್ವಂತ ವಾಹನದಲ್ಲೇ ಹೋಗಿ

ನೀವು ಆಸ್ಪತ್ರೆ ಪ್ರಯಾಣಕ್ಕಾಗಿ ನಿಮ್ಮ ಸ್ವಂತ ವಾಹನದಲ್ಲಿಯೇ ಹೋಗಿ. ನೀವು ಸಾರ್ವಜನಿಕ ಸಾರಿಗೆಯನ್ನು ತೆಗೆದುಕೊಳ್ಳಬೇಕಾದರೆ ನಿಮ್ಮೊಂದಿಗೆ ಬರುವ ವ್ಯಕ್ತಿಯೊಂದಿಗೆ ಕ್ಯಾಬ್, ಆಟೋ ರಿಕ್ಷಾವನ್ನು ಮೊದಲೇ ಬುಕ್ ಮಾಡುವುದು ಉತ್ತಮ. ನೀವು ವಾಹನದಲ್ಲಿ ಕೂಡ ಯಾವುದೇ ವಸ್ತುವನ್ನು ಮುಟ್ಟಿದರೆ, ಅಥವಾ ಮುಟ್ಟದೇ ಇದ್ದರೂ ಕೂಡ ನಿಮ್ಮ ಕೈಗಳನ್ನು ಶುಚಿಯಾಗಿ ತೊಳೆದುಕೊಳ್ಳಿ, ಸ್ಯಾನಿಟೈಸರ್ ಬಳಕೆ ಮಾಡಿ. ಆಸ್ಪತ್ರೆಯಲ್ಲಿ ಅಥವಾ ಮನೆಯಿಂದ ಹೊರಗೆ ಬಂದಾಗ ಬಾಯಿ, ಮುಖವನ್ನು ಪದೇ ಪದೇ ಮುಟ್ಟಿಕೊಳ್ಳಬೇಡಿ.

ಡಿಜಿಟಲ್ ವಹಿವಾಟಿಗೆ ಒತ್ತು ನೀಡಿ

ಡಿಜಿಟಲ್ ವಹಿವಾಟಿಗೆ ಒತ್ತು ನೀಡಿ

ಕ್ಯಾಬ್ , ಟ್ಯಾಕ್ಸಿ ಇನ್ನಿತರೆ ಸಾರಿಗೆ ಬಳಸಿದರೆ ಡಿಜಿಟಲ್ ವಹಿವಾಟಿಗೆ ಹೆಚ್ಚು ಒತ್ತು ನೀಡಿ, ನಗದು ಹಣ ನೀಡಬೇಡಿ,ಇರಿಂದ ಕಾಗದದಿಂದ ಬರುವ ಅಪಾಯ ಕಡಿಮೆಯಾಗುತ್ತದೆ.

ಆಸ್ಪತ್ರೆಯಲ್ಲಿರಬೇಕಾದಾಗ ನೀವು ಅನುಸರಿಸಬೇಕಾದ ಕ್ರಮಗಳು

ಆಸ್ಪತ್ರೆಯಲ್ಲಿರಬೇಕಾದಾಗ ನೀವು ಅನುಸರಿಸಬೇಕಾದ ಕ್ರಮಗಳು

ಆಸ್ಪತ್ರೆಯಲ್ಲಿರುವಾಗ ನೀವು ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ನಿಮ್ಮ ಹಾಗೂ ಇನ್ನೊಬ್ಬ ವ್ಯಕ್ತಿಯ ನಡುವೆ ಕನಿಷ್ಠ ಎರಡು ಅಡಿ ಜಾಗ ದೂರದಲ್ಲಿರಿ. ಕೊರೊನಾ ಸೋಂಕಿತರನ್ನು ವಾರ್ಡ್‌ನಲ್ಲಿರಿಸಿದ್ದರೂ ಕೂಡ ನೀವು ಸೋಂಕಿತ ಜನರೊಂದಿಗೆ ಸಂಪರ್ಕಕ್ಕೆ ಬರುವ ಸಾಧ್ಯತೆ ಇದೆ. ಸಾಮಾಜಿಕ ದೂರ ಮತ್ತು ಸುರಕ್ಷತೆ ಅಭ್ಯಾಸ ಮಾಡುವುದು ಉತ್ತಮ, ವೈದ್ಯರನ್ನು ಭೇಟಿಯಾಗುವ ಮೊದಲು ಮತ್ತು ಭೇಟಿಯಾದ ಬಳಿಕ ನಿಮ್ಮ ಕೈಗಳನ್ನು ಸೋಪ್ ಹಾಗೂ ನೀರಿನಿಂದ ತೊಳೆಯಿರಿ.

ಎಲ್ಲಾ ಆರೋಗ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ

ಎಲ್ಲಾ ಆರೋಗ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ

ಸುಮ್ಮನೆ ವೈದ್ಯರು ಹಾಗೂ ನಿಮ್ಮ ಸಮಯವನ್ನು ಆಸ್ಪತ್ರೆಯಲ್ಲಿ ವ್ಯರ್ಥಮಾಡಬೇಡಿ, ನಿಮ್ಮ ಆರೋಗ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ, ನಿಮ್ಮ ಸಲಹೆಗಾರರೊಂದಿಗೆ ಹಂಚಿಕೊಳ್ಳಬೇಕಾದ ಎಲ್ಲಾ ವಿಷಯವನ್ನು ಹಂಚಿಕೊಳ್ಳಿರಿ, ರೋಗ ನಿರ್ಣಯ ಮತ್ತು ಚಿಕಿತ್ಸೆಗಾಗಿ ನಿಮ್ಮ ವೈದ್ಯಕೀಯ ಇತಿಹಾಸ ಅಥವಾ ಸ್ಥಿತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಹಂಚಿಕೊಳ್ಳಿ.

English summary
Basic safety guidelines for patients while visiting a hospital during the COVID-19 crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X