Virat Kohli: ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಂ ಪೋಸ್ಟ್ ಭಾರೀ ವೈರಲ್
Virat Kohli: ನಿನ್ನೆ ನಡೆದ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಗೆದ್ದು ಬೀಗಿದೆ. ಇನ್ನು ಈ ಐತಿಹಾಸಿಕ ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಂ ಇಂಡಿಯಾ ತಂಡ ಸಂಭ್ರಮದಲ್ಲಿ ಮಿಂದೆದಿದ್ದು, ಬಳಿಕ ಎಲ್ಲಾ ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಿಗೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದರು. ಈ ನಡುವೆಯೇ ಇದೀಗ ಕೊಹ್ಲಿ ಇನ್ಸ್ಟಾಂ ಪೋಸ್ಟ್‌ವೊಂದು ಭಾರೀ ವೈರಲ್ ಆಗುತ್ತಿದೆ.
ವೆಸ್ಟ್ ಇಂಡೀಸ್‌ನ ಕೆನ್ಸಿಂಗ್ಟನ್ ಓವನ್‌ನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 76 ರನ್ ಗಳಿಸುವ ಮೂಲಕ ಭಾರತ 176 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಬಳಿಕ ಈ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡವು 8 ವಿಕೆಟ್‌ಗಳ ನಷ್ಟಕ್ಕೆ 169 ರನ್‌ಗಳನ್ನು ಗಳಿಸುವ ಮೂಲಕ ಭಾರತಕ್ಕೆ ಶರಣಾಯಿತು. ಬಳಿಕ ವಿಶ್ವಕಪ್ ಹಿಡಿದು ಭಾರತದ ತಂಡ ಆಟಗಾರರು ಸಂಭ್ರಮಿಸಿದರು.

ಕೈತಪ್ಪಿ ಹೋಗಿದ್ದ ಕೊನೆಗೆ ಕೈವಶವಾಗುತ್ತಿದ್ದಂತೆ ರೋಹಿತ್ ಶರ್ಮಾ ಅವರು ಕ್ರೀಡಾಂಗಣದಲ್ಲೇ ನೆಲಕ್ಕೆ ತಲೆ ಮಾಡಿ ಕಣ್ಣೀರಿಡುತ್ತಾ ಸಂತೋಷಭಾಷ್ಪವನ್ನು ಹೊರಹಾಕಿದರು. ಅಲ್ಲದೆ, ಕೊಹ್ಲಿ ತಬ್ಬಿಕೊಂಡು ಕೆಲವೊತ್ತು ಭಾವುಕರಾದ ಕ್ಷಣ ಕಂಡುಬಂದಿತು. ಬಳಿಕ ಕೊಹ್ಲಿ ಭಾರತದ ತ್ರಿವರ್ಣ ಧ್ವಜ ಹಿಡಿದು ರೋಹಿತ್ ಶರ್ಮಾ ಜೊತೆ ಫೋಟೋಗೆ ಪೋಸ್ ನೀಡಿದರು. ಈ ಕ್ಷಣವಂತೂ ಕಣ್ಣಲ್ಲಿ ಕಣ್ಣೀರು ತರಿಸುವಂತಿತ್ತು. ಇದರ ನಡುವೆಯೇ ಇದೀಗ ಕೊಹ್ಲಿ ಇನ್ಸ್ಟಾ ಭಾವುಕ ಸಂದೇಶದ ಪೋಸ್ಟ್‌ವೊಂದು ಭಾರೀ ವೈರಲ್ ಆಗುತ್ತಿದೆ
ಕಿಂಗ್ ಕೊಹ್ಲಿ ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ "ಇದಕ್ಕಿಂತ ಒಳ್ಳೆಯ ದಿನದ ಕನಸು ಕಾಣಲು ಸಾಧ್ಯವೇ ಇರಲಿಲ್ಲ. ದೇವರು ದೊಡ್ಡವನು ಮತ್ತು ನಾನು ಕೃತಜ್ಞತೆಯಿಂದ ತಲೆ ಬಾಗಿಸುತ್ತೇನೆ. ಕೊನೆಗೂ ಜೈ ಹಿಂದ್ ಮಾಡಿದೆವು," ಎಂದು ಬರೆದುಕೊಂಡಿದ್ದಾರೆ. ಇನ್ನೂ ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಆನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ, ಒಟ್ನೀಲ್ ಬಾರ್ಟ್‌ಮನ್, ಜೆರಾಲ್ಡ್ ಕೋಟ್ಜೆ ಫಾರ್ಟುಯಿನ್, ರಯಾನ್ ರಿಕೆಲ್ಟನ್.












Click it and Unblock the Notifications