ಇಡೀ ದಿನ ಬೆನ್ನ ಮೇಲೆ ಮಗು ಕಟ್ಟಿಕೊಂಡೇ ಮಹಿಳೆ ಕೆಲಸ : ವೈರಲ್ ಆಗ್ತಾ ಇದೆ ಮಾರ್ಡನ್ ಝಾನ್ಸಿ ವಿಡಿಯೋ

Viral Video: ಅಮ್ಮನನ್ನು ಸುಮ್ಮನೆ ದೇವರು ಎಂದು ಹೇಳುವುದಿಲ್ಲ. ತಾಯಿ ಮಗುವಿನ ಮೇಲೆ ಪ್ರೀತಿ, ಮಮತೆಯ ಹೊಳೆಯನ್ನೇ ಹರಿಸುತ್ತಾಳೆ. ಪ್ರೀತಿ ಮೂರ್ತಿಯಾಗಿರುವ ಅಮ್ಮ ತನ್ನ ಮಗುವಿನ ವಿಷಯ ಬಂದಾಗ ಚಂಡಿ ಚಾಮುಂಡಿಯಾಗುವುದಕ್ಕೂ ರೆಡಿಯಾಗುತ್ತಾಳೆ. ಮನೆ, ಕೆಲಸ ಜವಾಬ್ದಾರಿ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ತಾಯಿಗೆ ಮಗುವೇ ಎಲ್ಲಾ. ಮಗವಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತಾಳೆ.

Viral Video Women Carrying Baby On Back And Works In Petrol Bunk Ladak Mother Video Goes Viral Many Came For Help

ಆಧುನಿಕ ಝಾನ್ಸಿಯ Viral Video :

ತನ್ನ ಪುಟ್ಟ ಕಂದಮ್ಮನನ್ನು ಬೆನ್ನ ಹಿಂದೆ ಹೊತ್ತುಕೊಂಡೇ ಬ್ರಿಟಿಷರ ವಿರುದ್ದ ಹೋರಾಡಿದ ಜಾನ್ಸಿ ಲಕ್ಷ್ಮೀ ಬಾಯಿಯ ಬಗ್ಗೆ ಗೊತ್ತೇ ಇದೆ. ಇದೀಗ ಲಡಾಖ್ ನಲ್ಲಿನ ಈ ಆಧುನಿಕ ಝಾನ್ಸಿ ಸುದ್ದಿಯಾಗಿದ್ದಾರೆ. ದಿನ ಪೂರ್ತಿ ಮಗುವನ್ನು ಬೆನ್ನ ಮೇಲೆ ಹೊತ್ತುಕೊಂಡೇ ಕೆಲಸ ಮಾಡುವ ಮಹಾತಾಯಿ ಆಕೆ. ಈ ರೀತಿ ಮಗುವನ್ನು ಕೆಲಸಕ್ಕೆ ಕರೆದುಕೊಂಡು ಬಂದು ಜೊತೆಯಲ್ಲಿಯೇ ಇರಿಸಿಕೊಳ್ಳುವ ಅನಿವಾರ್ಯತೆ ಏನಿದೆಯೋ ಗೊತ್ತಿಲ್ಲ. ಆದರೆ ಇದೀಗ ಈ ಮಹಿಳೆಯ ವಿಡಿಯೋ ಮಾತ್ರ ಎಲ್ಲಾ ಕಡೆ ಸದ್ದು ಮಾಡುತ್ತಿದೆ.

ಮಗುವೇ ಅಮ್ಮನ ಸರ್ವಸ್ವ :

ತಾಯಿಯ ಪ್ರೀತಿ ಮತ್ತು ಧೈರ್ಯಕ್ಕೆ ಮಿತಿಯೇ ಇಲ್ಲ. ಮಹಿಳೆ ಕೆಲಸಕ್ಕೆ ಹೋಗುವುದು ಖಂಡಿತಾ ದೊಡ್ಡ ವಿಷಯ ಅಲ್ಲ. ಆದರೆ ಮನೆಯಲ್ಲಿ ಸಣ್ಣ ಮಗು ಇದ್ದರೆ ಮನೆಯ ಎಲ್ಲಾ ಕೆಲಸ, ಜವಾಬ್ದಾರಿ ಮುಗಿಸಿಕೊಂಡು ಮತ್ತೆ ಕೆಲಸಕ್ಕೆ ಹೋಗುವುದು ಸುಲಭ ಅಲ್ಲವೇ ಅಲ್ಲ. ಅದು ಕೂಡಾ ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂದಾಗ ಅದೊಂದು ಸಾಹಸವೇ.

ವೈರಲ್ ಆಗುತ್ತಿದೆ ತಾಯಿ ಮಗುವಿನ ವಿಡಿಯೋ :

ಇದೀಗ ಲಡಾಖಿನ ಈ ವಿಡಿಯೋ ವೈರಲ್ ಆಗುತ್ತಿದೆ. ಇಲ್ಲಿ ಮಹಿಳೆಯೊಬ್ಬಳು ತನ್ನ ಪುಟ್ಟ ಮಗುವನ್ನು ಬೆನ್ನಿಗೆ ಕಟ್ಟಿ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುತ್ತಿರುವ ವಿಡಿಯೋ ಇದು. ಪ್ರಿಯಾಂಕಾ ಪರದೇಸಿ ಎನ್ನುವ ಎಂಬ ಮಹಿಳೆ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಪ್ರಿಯಾಂಕ ತನ್ನ ಪತಿಯೊಂದಿಗೆ ಪೆಟ್ರೋಲ್ ಪಂಪ್ ಹೋಗಿದ್ದರು. ಅಲ್ಲಿ ಮಹಿಳೆಯೊಬ್ಬರು ತನ್ನ ಬೆನ್ನಿನ ಮೇಲೆ ಮಗುವನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿರುವುದನ್ನು ನೋಡ್ತಾರೆ. ಈ ಆಶ್ಚರ್ಯಕರ ದೃಶ್ಯವನ್ನು ಅವರು ತಕ್ಷಣ ವಿಡಿಯೋ ಮಾಡಿದ್ದಾರೆ.

93 ಮಿಲಿಯನ್ ಜನರಿಂದ ವೀಕ್ಷಣೆ :

ಈ ವೀಡಿಯೊವನ್ನು ಇದುವರೆಗೆ ಸುಮಾರು 93 ಜನ ನೋಡಿದ್ದಾರೆ. ವಿಡಿಯೋ (video) ನೋಡಿದವರಲ್ಲಿ ಅನೇಕ ಮಂದಿ ಮಹಿಳೆಗೆ ನೆರವಾಗಲು ಮುಂದಾಗಿದ್ದಾರೆ. ಪ್ರಿಯಾಂಕಾ ಪ್ರಕಾರ, ಹಲವಾರು ಜನ ಅವರನ್ನು ಈ ಬಗ್ಗೆ ಸಂಪರ್ಕಿಸಿದ್ದಅರೆ. ಕೆಲವರು ಈಗಾಗಲೇ ಹಣದ ಸಹಾಯ ಮಾಡಿದ್ದಾರೆ. ಇದೀಗ ಪ್ರಿಯಾಂಕ ವೀಡಿಯೊ ಕಾಲ್ ಮಾಡುವ ಮೂಲಕ ಮಹಿಳೆಯನ್ನು ಸಂಪರ್ಕಿಸಿದ್ದಾರೆ. ಜನ ಅವರಿಗೆ ಸಹಾಯ ಮಾಡಲು ಮುಂದೆ ಬಂದಿರುವ ವಿಷಯ ತಿಳಿಸಿದ್ದಾರೆ. ಜನ ಮಹಿಳೆಗೆ ಸಹಾಯ ಆಗಲಿ ಎನ್ನುವ ಉದ್ದೇಶದಿಂದ ಹಣ ಕಳುಹಿಸುತ್ತಿದ್ದು, ಆ ಮೊತ್ತವನ್ನು ಮಹಿಳೆಗೆ ನೀಡುವುದಾಗಿ ಹೇಳಿದ್ದಾರೆ. ಆ ಹಣವನ್ನು ಮಗುವಿನ ಹೆಸರಿನಲ್ಲಿ ಠೇವಣಿ ಮಾಡುವಂತೆಯೂ ಹೇಳಿದ್ಧಾರೆ.

ಸಹಾಯಕ್ಕೆ ಮುಂದಾಗುತ್ತಿರುವ ಜನ :

ತನ್ನ ಜೀವನದ ಒಂದು ಸಣ್ಣ ಕ್ಷಣವು ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರನ್ನು ತಲುಪಬಹುದು ಎಂದು ಮಹಿಳೆ (woman) ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಜನರು ತನ್ನ ಕಷ್ಟಕ್ಕೆ ಸ್ಪಂದಿಸುತ್ತಿರುವ ಬಗ್ಗೆ ಮಹಿಳೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ವೈರಲ್ ಆಗುತ್ತಿರುವ ವಿಡಿಯೋಗೆ ಜನ ಬೇರೆ ಬೇರೆ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಅವರನ್ನು ಆಧುನಿಕ ಝಾನ್ಸಿ ಕಾ ರಾಣಿ ಎಂದು ಕರೆದಿದ್ದಾರೆ. ಮಹಿಳೆಯ ಕಠಿಣ ಪರಿಶ್ರಮ, ಧೈರ್ಯವನ್ನು ಹೊಗಳಿದ್ದಾರೆ. ಕೆಲವರು ಮಹಿಳೆಯನ್ನು ನಿಜವಾದ ಯೋಧೆ ಎಂದು ಕರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+