ವಿಡಿಯೋ: ಕೋತಿಗಳನ್ನು ಬೆದರಿಸಲು ಕರಡಿ ವೇಷ ತೊಟ್ಟ ಪೊಲೀಸರು
ಡೆಹ್ರಾಡೂನ್, ಮಾರ್ಚ್.09: ಕೋತಿಗಳು ಸಾರ್ ಕೋತಿಗಳು.. ದಿನ ಬೆಳಗಾದ್ರೆ ಸಾಕು ಕೋತಿಗಳ ಕಾಟ ಶುರುವಾಗಿ ಬಿಡುತ್ತಿತ್ತು. ನೆಮ್ಮದಿಯಿಂದ ಬದುಕುವುದೇ ಕಷ್ಟಸಾಧ್ಯ ಅನ್ನುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೋತಿಗಳ ಕಾಟಕ್ಕೆ ಸಾಮಾನ್ಯ ಜನರಷ್ಟೇ ಅಲ್ಲ, ಸ್ವತಃ ಪೊಲೀಸರೇ ರೋಸಿ ಹೋಗಿದ್ದರು.
ಉತ್ತರಾಖಂಡ್ ನಲ್ಲಿ ಇರುವ ಇಂಡೋ-ಟಿಬೆಟಿಯನ್ ಗಡಿ ರಕ್ಷಣಾ ಪಡೆಯ ಶಿಬಿರದ ಸುತ್ತ ಕೋತಿಗಳ ಹಾವಳಿ ಹೆಚ್ಚಾಗಿತ್ತು. ಇದಕ್ಕೆಲ್ಲ ಮುಕ್ತ ಹಾಡುವುದಕ್ಕೆ ಪೊಲೀಸರು ಮಾಡಿದ ಹೊಸ ಐಡಿಯಾ ಇದೀಗ ಸಾಮಾಜಿತ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಅಚ್ಚರಿ ಎನಿಸಿದರೂ ಇದು ಸತ್ಯವಾದ ಘಟನೆ. ಉತ್ತರಾಖಂಡ್ ದಲ್ಲಿರುವ ಮಿರ್ತಿ ಶಿಬಿರದ ಬಳಿ ಕೋತಿಗಳನ್ನು ಓಡಿಸುವುದಕ್ಕಾಗಿ ಇಂಡೋ-ಟಿಬೆಟಿಯನ್ ಗಡಿ ರಕ್ಷಣಾ ಪಡೆಯ ಪೊಲೀಸರೇ ಕರಡಿಗಳ ವೇಷ ತೊಟ್ಟು ಹೊರ ಬಂದಿದ್ದಾರೆ.
#WATCH: 2 Indo-Tibetan Border Police personnel at ITBP Camp-Mirthi, Uttarakhand dressed in 'bear' costume to scare away monkeys on the premises. (Source-ITBP) pic.twitter.com/YeZXaXAgze
— ANI (@ANI) March 9, 2020

ಕರಡಿ ವೇಷ ತೊಟ್ಟವರ ಕಂಡು ಬೆದರಿದ ಕೋತಿಗಳು:
ಕರಡಿಯ ವೇಷ ತೊಟ್ಟು ಬಂದ ಪೊಲೀಸರನ್ನು ಕಂಡು ಕೋತಿಗಳು ದಿಕ್ಕಾಪಾಲಾಗಿ ಓಡಿವೆ. ಕರಡಿಗಳೇ ಬಂದವು ಎಂದು ಹೆದರಿ ಶಿಬಿರದ ಸುತ್ತ ಹಾವಳಿ ಇಡುತ್ತಿದ್ದ ಮಂಗಗಳು ಮಂಗಮಾಯವಾಗಿವೆ. ಪೊಲೀಸರು ಮಾಡಿರುವ ಈ ಡಿಫರೆಂಟ್ ಐಡಿಯಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.












Click it and Unblock the Notifications