ವೈರಲ್ ವಿಡಿಯೋ: ನರೇಂದ್ರ ಮೋದಿ ಫಿಟ್ನೆಸ್ ಸೀಕ್ರೆಟ್!

Recommended Video

      ಮೋದಿಯವರ ಹೊಸ ವಿಡಿಯೋ ಫುಲ್ ವೈರಲ್ | Oneindia kannada

      ನವದೆಹಲಿ, ಜೂನ್ 13: ಒಂದು ದಿನವೂ ವಿಶ್ರಾಂತಿಯಿಲ್ಲದೆ ಕೆಲಸ ಮಾಡುವ ಪ್ರಧಾನಿ ನರೇಂದ್ರ ಮೊದಿಯವರ ಆರೋಗ್ಯದ ಗುಟ್ಟೇನು? ತಮ್ಮ ಈ ಪರಿ ಎನರ್ಜಿ, ಸ್ಟ್ಯಾಮಿನಾದ ಸೀಕ್ರೆಟ್ ಏನು ಎಂಬುದಕ್ಕೆ ಉತ್ತರವಾಗಿ ವಿಡಿಯೋವೊಂದನ್ನು ಸ್ವತಃ ಮೋದಿಯವರೇ ಟ್ವಿಟ್ಟರ್ ನಲ್ಲಿ ಹರಿಬಿಟ್ಟಿದ್ದಾರೆ.

      ಪ್ರಧಾನಿ ಮೋದಿಯವರ ಈ ಫಿಟ್ನೆಸ್ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಖಾದಿ ಜುಬ್ಬ, ಸೂಟು ಬೂಟ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೋದಿಯವರು ಈ ವಿಡಿಯೋದಲ್ಲಿ ವ್ಯಾಯಾಮದ ಬಟ್ಟೆ ಧರಿಸಿ, ಹೆಗಲಿಗೊಂದು ಟವಲ್ ಹಾಕಿ ಡಿಫರೆಂಟ್ ಆಗಿ ಕಾಣುತ್ತಾರೆ!

      "ಯೋಗದ ಜೊತೆಯಲ್ಲಿ ಇವು ನನ್ನ ಬೆಳಗ್ಗಿನ ವ್ಯಾಯಾಮದ ಭಾಗಗಳು. ಪಂಚಮಹಾಭೂತಗಳಾದ ಭೂಮಿ, ಅಗ್ನಿ, ಗಾಳಿ, ನೀರು ಮತ್ತು ಆಕಾಶದ ಸನ್ನಿಧಿಯಲ್ಲಿ ನನ್ನ ವ್ಯಾಯಾಮ ನಡೆಯುತ್ತದೆ. ಈ ಪ್ರಕ್ರಿಯೆ ಮನಸ್ಸನ್ನು ಹೆಚ್ಚು ತಾಜಾಗೊಳಿಸುತ್ತೆ ಮತ್ತು ಮತ್ತಷ್ಟು ಶುದ್ಧೀಕರಿಸುತ್ತದೆ. ಇದರೊಂದಿಗೆ ಪ್ರಾಣಾಯಾಮವನ್ನೂ ನಾನು ಮಾಡುತ್ತೇನೆ" ಎಂದು ಬರೆದುಕೊಂಡಿರುವ ಮೋದಿ, ಹಮ್ ಫಿಟ್ ತೋ ಇಂಡಿಯಾ ಫಿಟ್ ಎಂಬ ಹ್ಯಾಶ್ ಟ್ಯಾಗ್ ನಲ್ಲಿ ವಿಡಿಯೋವನ್ನೂ ಅಪ್ಲೋಡ್ ಮಾಡಿದ್ದಾರೆ.

      Viral video: PM Modis fitness secret

      ಅಪ್ಲೋಡ್ ಮಾಡಿದ ಎರಡು ತಾಸುಗಳಲ್ಲಿ ಈ ಟ್ವೀಟ್ ಅನ್ನು 19 ಸಾವಿರ ಜನ ಮೆಚ್ಚಿದ್ದರೆ, 7 ಸಾವಿರ ಜನ ರಿಟ್ವೀಟ್ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಜನ ಇದಕ್ಕೆ ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ದೇಶದ ಪ್ರಧಾನಿಯ ಫಿಟ್ನೆಸ್ ಮಂತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+