ಫಲ ನೀಡಿದ ಜಿಮ್‌!ಸರಿಯಾಗಿ ಪಾರ್ಕ್‌ ಆಗದ ಮಿನಿ SUVಯನ್ನು ಎತ್ತಿ ಫುಟ್‌ಪಾತ್‌ ಮೇಲಿರಿಸಿದ ವ್ಯಕ್ತಿ:ವೈರಲ್‌ ಆಗುತ್ತಿದೆ ವಿಡಿಯೋ

ಮಾರ್ಗದ ಅಕ್ಕಪಕ್ಕದಲ್ಲಿ ಪಾದಚಾರಿಗಳಿಗೆ ಸಂಚರಿಸುವುದಕ್ಕೆ ಜಾಗವೇ ಇಲ್ಲದಂತೆ ವಾಹನಗಳನ್ನು ಪಾರ್ಕ್‌ ಮಾಡುವುದು ಇತ್ತೀಚಿನ ದಿನಗಳಲ್ಲಿ ಎಲ್ಲಾ ನಗರಗಳಲ್ಲಿಯೂ ಕಾಮನ್‌ ಆಗಿದೆ. ಕೆಲವರು ಸರಿಯಾದ ರೀತಿಯಲ್ಲಿ ಪಾರ್ಕ್‌ ಮಾಡುತ್ತಾರೆ. ಇನ್ನು ಕೆಲವರು ಅತ್ತ ಪಾದಾಚಾರಿಗಳಿಗೂ ನಡೆದಾಡಲು ಆಗಬಾರದು ಇತ್ತ ಬೇರೆ ವಾಹನಗಳಿಗೂ ಓಡಾಡಲು ಆಗಬಾರದು ಎನ್ನುವ ರೀತಿಯಲ್ಲಿ ತಮ್ಮ ಗಾಡಿಯನ್ನು ನಿಲ್ಲಿಸಿ ಹೋಗುತ್ತಾರೆ. ಹೀಗಾಗುವಾಗ ಎಲ್ಲರಿಗೂ ಸಮಸ್ಯೆಯಾಗುತ್ತದೆ.

ಇನ್ನು ನೋ ಪಾರ್ಕಿಂಗ್‌ ಜಾಗದಲ್ಲಿ ಪಾರ್ಕ್‌ ಮಾಡುವವರೂ ಇದ್ದಾರೆ. ಹೀಗೆ ಸಾಮಾನ್ಯವಾಗಿ ರಸ್ತೆಗೆ ಅಡ್ಡಿಯಾಗಿ ನಿಲ್ಲಿಸಿದ ವಾಹನಗಳನ್ನು ಪೊಲೀಸರು ಕ್ರೇನ್ ಮೂಲಕ ಎತ್ತಿಕೊಂಡು ಹೋಗುತ್ತಾರೆ. ನಂತರ ವಾಹನದ ಮಾಲೀಕ ದಂಡ ಕಟ್ಟಿ ತನ್ನ ಗಾಡಿಯನ್ನು ಬಿಡಿಸಿಕೊಂಡು ಬರಬೇಕಾಗುತ್ತದೆ.

Viral Video

ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ಪಾರ್ಕ್‌ ಮಾಡಿರುವುದು ಸರಿಯಾಗಿಲ್ಲ ಎಂದಾದರೆ ಅಥವಾ ವಾಹನ ನಿಲುಗಡೆ ಸಮಸ್ಯೆಯಾದರೆ ಚಾಲಕರು ಮತ್ತೆ ಕಾರಿನೊಳಗೆ ಕುಳಿತು ಸರಿಯಾದ ರೀತಿಯಲ್ಲಿ ಪಾರ್ಕ್‌ ಮಾಡುತ್ತಾರೆ. ಆದರೆ, ಪುಣೆಯ ವ್ಯಕ್ತಿಯೊಬ್ಬರು ತಮ್ಮ ಅದ್ಭುತ ಶಕ್ತಿಯ ಮೂಲಕ ಪಾರ್ಕಿಂಗ್ ಸಮಸ್ಯೆಯನ್ನು ಬಗೆಹರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಆಫೀಸ್ ಮೀಟಿಂಗ್‌ಗೆ ಲೇಟ್, ಮೊದಲ ದಿನ ಶಾಲೆಗೆ ಹೋದ ಮಗುವಿನ ಜೊತೆಗಿರಿ ಎಂದು ರಜೆ ಕೊಟ್ಟ ಬಾಸ್
ಆಫೀಸ್ ಮೀಟಿಂಗ್‌ಗೆ ಲೇಟ್, ಮೊದಲ ದಿನ ಶಾಲೆಗೆ ಹೋದ ಮಗುವಿನ ಜೊತೆಗಿರಿ ಎಂದು ರಜೆ ಕೊಟ್ಟ ಬಾಸ್

ಅಷ್ಟಕ್ಕೂ ನಡೆದದ್ದು ಏನು ?:

ಪುಣೆಯ ವಸತಿ ರಸ್ತೆಯೊಂದರಲ್ಲಿ ಮಿನಿ ಎಸ್‌ಯುವಿ (SUV) ವಾಹನವನ್ನು ಪಾರ್ಕ್ ಮಾಡಲಾಗಿತ್ತು. ಆದರೆ ಇಲ್ಲಿ ಪಾರ್ಕ್‌ ಮಾಡಿದ ರೀತಿ ಸರಿಯಾಗಿರಲಿಲ್ಲ. ಕಾರಿನ ಹಿಂದಿನ ಭಾಗ ರಸ್ತೆಗೆ ಬಂದು ನಿಂತಿತ್ತು. ಇದು ಆ ಕಾರಿಗೂ ಸಮಸ್ಯೆ ಉಂಟು ಮಾಡಬಹುದಿತ್ತು, ಮಾತ್ರವಲ್ಲ ಬೇರೆ ವಾಹನ ಸವಾರರಿಗೂ ಕಿರಿ ಕಿರಿಯಾಗಿರುತ್ತಿತ್ತು. ಪಾರ್ಕಿಂಗ್‌ ಸರಿಯಾಗಿಲ್ಲ ಎಂದು ಗಮನಿಸಿದ ವ್ಯಕ್ತಿಯೊಬ್ಬರು ಕಾರಿನ ಮಾಲೀಕರಿಗೆ, ಅಣ್ಣಾ, ಗಾಡಿ ಸರಿಯಾಗಿ ಪಾರ್ಕ್‌ ಆಗಿಲ್ಲ, ಸರಿ ಮಾಡಿ ಎಂದು ರಿಕ್ವೆಸ್ಟ್‌ ಮಾಡುತ್ತಾರೆ. ಆಗ ಆ ವಾಹನದ ಮಾಲೀಕ ಈಗ ಏನು ಮಾಡಬೇಕು ಎಂದು ಪ್ರಶ್ನೆ ಹಾಕುತ್ತಾರೆ. ಏನಾದರೂ ಮಾಡಿ ಯಾರಿಗೂ ಸಮಸ್ಯೆಯಾಗದಂತೆ ಸರಿಯಾಗಿ ಪಾರ್ಕ್‌ ಮಾಡಿ ಎಂದು ಆ ವ್ಯಕ್ತಿ ಮತ್ತೆ ಕೇಳಿಕೊಳ್ಳುತ್ತಾರೆ.

ಜಿಮ್ ಶಕ್ತಿಯ ಅಸಲಿ ಪ್ರದರ್ಶನ:

ತಕ್ಷಣವೇ ಆ ವ್ಯಕ್ತಿ ಕಾರಿನ ಬಳಿ ತೆರಳಿ, ತನ್ನ ಕೈಯಲ್ಲಿದ್ದ ಬ್ಯಾಗನ್ನು ಕಾರಿನ ಮೇಲೆ ಇಡುತ್ತಾರೆ. ನಂತರ ಕಾರನ್ನು ಹಿಡಿದು ಮೇಲೆತ್ತಿ ಹಿಂದಕ್ಕೆ ಸರಿಸುತ್ತಾರೆ. ಈ ರೀತಿ ಮಾಡುವಾಗ ಆ ವ್ಯಕ್ತಿ ಹೆಚ್ಚು ಶ್ರಮ ಹಾಕಿದ್ದಾರೆ ಎಂದು ಅನ್ನಿಸುವುದೇ ಇಲ್ಲ. ಅವರ ಅಸಾಧಾರಣ ಶಕ್ತಿಯಿಂದ ಕಾರು ರಸ್ತೆಯಿಂದ ಪಕ್ಕಕ್ಕೆ ಸರಿದು ಪಾದಚಾರಿ ಮಾರ್ಗ ಅಥವಾ ಫುಟ್‌ ಪಾತ್‌ ಮೇಲೆ ಸರಿಯಾಗಿ ಪಾರ್ಕ್‌ ಆಗುತ್ತದೆ. ಇಷ್ಟು ಮಾಡಿ ಮುಗಿಸಿದ ವ್ಯಕ್ತಿ ನಗುತ್ತಾ ಅಲ್ಲಿಂದ ತೆರಳುತ್ತಾರೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

'ಆಫರ್ ಲೆಟರ್ ನೋಡಿ ಫೇಕ್ ಎಂದೇ ಭಾವಿಸಿದ್ದೆ': ಗೂಗಲ್ ಉದ್ಯೋಗ ಗಿಟ್ಟಿಸಿಕೊಂಡ ಯುವತಿಯ ಸ್ಪೂರ್ತಿದಾಯಕ ಕಥೆ
'ಆಫರ್ ಲೆಟರ್ ನೋಡಿ ಫೇಕ್ ಎಂದೇ ಭಾವಿಸಿದ್ದೆ': ಗೂಗಲ್ ಉದ್ಯೋಗ ಗಿಟ್ಟಿಸಿಕೊಂಡ ಯುವತಿಯ ಸ್ಪೂರ್ತಿದಾಯಕ ಕಥೆ

ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರತಿಕ್ರಿಯೆ:

ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಬಳಕೆದಾರ 'karma____believer_'ಎನ್ನುವ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ಈ ವಿಡಿಯೋಗೆ ನೆಟ್ಟಿಗರು ಬಗೆಬಗೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ:

"ಇದು ಜಿಮ್ ಮಾಡಿದ ನಂತರದ ಸಣ್ಣ ವಾರ್ಮ್-ಅಪ್ ಅಷ್ಟೇ!" ಎಂದು ಒಬ್ಬರು ತಮಾಷೆ ಮಾಡಿದ್ದಾರೆ."ಪಾರ್ಕಿಂಗ್ ಕೌಶಲ್ಯ ಇಲ್ಲದಿರಬಹುದು, ಆದರೆ ಶಕ್ತಿ ಅದ್ಭುತವಾಗಿದೆ," ಎಂದು ಮತ್ತೊಬ್ಬರು ಬರೆದಿದ್ದಾರೆ. "ಈತನನ್ನು ನೋಡಿದರೆ ಆವೆಂಜರ್ಸ್‌ನ ಹಲ್ಕ್ ನೆನಪಾಗುತ್ತಾನೆ," ಎಂದು ಕೆಲವರು ತಮಾಷೆಯಾಗಿ ಹೊಗಳಿದ್ದಾರೆ."ಮಾರುತಿ ಸುಜುಕಿ ಆಗಿದ್ದರೆ ಇವರು ಅದನ್ನು ಎತ್ತಿ ಜಿಮ್‌ಗೇ ಒಯ್ಯುತ್ತಿದ್ದರು," ಎಂಬ ಕಾಮೆಂಟ್ ನೋಡುಗರನ್ನು ನಗೆಗಡಲಲ್ಲಿ ತೇಲಿಸಿದೆ.

ಒಟ್ಟಾರೆಯಾಗಿ, ಈ ವ್ಯಕ್ತಿಯ ಅಸಾಮಾನ್ಯ ಪಾರ್ಕಿಂಗ್ ಪರಿಹಾರ ಈಗ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದ್ದು, ಜನರನ್ನು ವಿಸ್ಮಯಗೊಳಿಸಿದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+