ವೈರಲ್ ವಿಡಿಯೋ:ಮತ್ತೆ ಸಣ್ಣದೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿತೇ ಭಾರತ?
Recommended Video
ಶ್ರೀನಗರ, ಸೆಪ್ಟೆಂಬರ್ 09: ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ಬಾರ್ಡರ್ Action ಟೀಂ(BAT)ನ ಕೆಲ ಸಿಬ್ಬಂದಿ ಮತ್ತು ಉಗ್ರರನ್ನು ಭಾರತೀಯ ಸೇನೆ ಸದೆಬಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆ ಆಗಸ್ಟ್ ಮೊದಲ ವಾರದಲ್ಲೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾದ ಕೆರನ್ ಸೆಕ್ಟರ್ ನಲ್ಲಿನ ದಟ್ಟಾರಣ್ಯದ ಮೂಲಕ ಭಾರತಕ್ಕೆ ಪ್ರವೇಶಿಸಲು ಯತ್ನಿಸಿದ್ದ ಹಲವು ಉಗ್ರರನ್ನು ಹೊಡೆದುರುಳಿಸಲಾಗಿದ್ದು, ಉಗ್ರರ ಶವ ಮತ್ತು ಅವರಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳು ವಿಡಿಯೋದಲ್ಲಿ ಕಾಣಿಸುತ್ತಿವೆ.
ಬ್ಯಾಟ್ ಸಿಬ್ಬಂದಿ ಮತ್ತು ಉಗ್ರರ ಕನಿಷ್ಠ ಐದು ಶವಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಿಡಿಯೋದಲ್ಲಿ ನೋಡಬಹುದು.

ಭಾರತದ ಹಲವೆಡೆ ಉಗ್ರ ದಾಳಿಯಾಗಬಹುದು ಎಂದು ಗುಪ್ತಚರ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.
#WATCH: Indian Army foiled an infiltration attempt by a Pakistani BAT(Border Action Team) squad along the Line of Control in Keran Sector of Kupwara in the 1st week of Aug. Bodies of eliminated Pakistani Army regulars/terrorists along with equipment seen in video.#JammuAndKashmir pic.twitter.com/kXKsJskVs0
— ANI (@ANI) September 9, 2019
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ಭಾರತ ರದ್ದುಗೊಳಿಸಿದ ನಂತರ ಗಡಿಯಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಕಾಶ್ಮೀರದಲ್ಲಿ ಶಾಂತಿ ಕದಡುವ ಮೂಲಕ ಅಂತಾರಾಷ್ಟ್ರೀಯ ಸಂಸ್ಥೆಗಳ ಗಮನ ಸೆಳೆಯಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ಭಾರತ ಆರೋಪಿಸಿದ್ದು, ಉಭಯ ದೇಶಗಳ ನಡುವೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.
ಅದೂ ಅಲ್ಲದೆ, ಪಾಕಿಸ್ತಾನ ತಾನು ಬಂಧಿಸಿದ್ದ ಜಾಗತಿಕ ಉಗ್ರ ಮಸೂದ್ ಅಝರ್ ನನ್ನು ಗುಟ್ಟಾಗಿ ಬಿಡುಗಡೆ ಮಾಡಿದ ಸುದ್ದಿ ವರದಿಯಾಗಿದ್ದು, ಮತ್ತೊಮ್ಮೆ ಪಾಕಿಸ್ತಾನ ವಿಶ್ವದ ಕೆಂಗಣ್ಣಿಗೆ ಗುರಿಯಾಗಿದೆ. ಮಸೂದ್ ಅಝರ್ ಬಿಡುಗಡೆಯ ಬೆಳವಣಿಗೆಯ ನಂತರ ಭಾರತ ಗಡಿಯಲ್ಲಿ ಮತ್ತಷ್ಟು ಭದ್ರತೆಯನ್ನು ಹೆಚ್ಚಿಸಿದೆ.












Click it and Unblock the Notifications