ಆವಾಜ್ ಹಾಕಿದ ಅಪ್ಪ; ಅಮಿತ್ ಶಾ ವಿಡಿಯೋ ಈ ಕಾರಣಕ್ಕೆ ವೈರಲ್!

ನವದೆಹಲಿ, ಸೆಪ್ಟೆಂಬರ್ 30: ಅಪ್ಪ ಯಾವತ್ತಿದ್ರೂ ಅಪ್ಪನೇ.. ಇಂಥ ಕಾಮೆಂಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ರಾಶಿರಾಶಿ ಬಂದು ಬೀಳುತ್ತಿದೆ. ಅಸಲಿಗೆ ಸಾಮಾಜಿಕ ಜಾಲತಾಣದಲ್ಲಿ ಇಂಥದೊಂದು ಚರ್ಚೆಯನ್ನು ಹುಟ್ಟು ಹಾಕಿದ್ದು, ನೆಟ್ಟಿಗರ ಕಣ್ಣು ಕುಕ್ಕಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಸಂಬಂಧಿಸಿದ ವಿಡಿಯೋ.

ಒಬ್ಬರು ಕೇಂದ್ರ ಗೃಹ ಸಚಿವರು, ಇನ್ನೊಬ್ಬರು ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ. ಈ ತಂದೆ-ಮಗನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗುತ್ತಿದೆ.

ಅಸಲಿಗೆ ಆಗಿದ್ದು ಇಷ್ಟೇ. ಇತ್ತೀಚಿಗೆ ನಡೆದ ಖಾಸಗಿ ಪೂಜಾ ಕಾರ್ಯಕ್ರಮವೊಂದರಲ್ಲಿ ಅಮಿತ್ ಶಾ ಹಾಗೂ ಪುತ್ರ ಜಯ್ ಶಾ ಭಾಗವಹಿಸಿದ್ದರು. ಈ ವೇಳೆ ಪೂಜೆಯ ಮೇಲೆ ಗಮನ ಹರಿಸದ ಜಯ್ ಶಾ, ಅಕ್ಕಪಕ್ಕದಲ್ಲಿ ನೋಡುತ್ತಾ ನಿಂತಿದ್ದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಅಮಿತ್ ಶಾ, ಪೂಜೆಯ ಕಡೆಗೆ ಗಮನ ಹರಿಸುವಂತೆ ಗದರಿದ್ದಾರೆ. ಇದೇ ವಿಡಿಯೋದ ಬಗ್ಗೆ ನೆಟ್ಟಿಗರು ಭಿನ್ನ-ವಿಭಿನ್ನ ಕಾಮೆಂಟ್ ಅನ್ನು ಹಾಕುತ್ತಿದ್ದಾರೆ. ಅದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Viral Video: How amit Shah tells BCCI secretary Jay Shah to focus on puja

4 ಲಕ್ಷ ವ್ಯೂವ್ಸ್, 30,000 ಲೈಕ್ಸ್:

ಬಿಸಿಸಿಐ ಕಾರ್ಯದರ್ಶಿ ಆಗಿರುವ ಜಯ್ ಶಾಗೆ ತಂದೆ ಅಮಿತ್ ಶಾ ಆವಾಜ್ ಹಾಕಿರುವ ವಿಡಿಯೋವನ್ನು ದೇಖ್ ಭಾಯ್ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಇದುವರೆಗೂ 4 ಲಕ್ಷ ವ್ಯೂವ್ಸ್ ಅನ್ನು ಪಡೆದಿದ್ದು, 30,000 ಲೈಕ್ಸ್ ಅನ್ನು ಪಡೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+