ಭಾವುಕ ವಿಡಿಯೋ: ಮುದ್ದುಮಗಳ ಮುಗ್ಧದನಿಯಲ್ಲಿ ಇಣುಕುವ ಹುತಾತ್ಮ ಅಪ್ಪ
ಮುದ್ದಿನ ತಂದೆ ಉಗ್ರರ ಗುಂಡೇಟಿಗೆ ಬಲಿಯಾಗಿ ಮೂರು ವರ್ಷದ ನಂತರ, ತಂದೆಯೊಂದಿಗಿನ ಸಂಭಾಷಣೆಯನ್ನು ಮುಗ್ಧ ಮಗಳು ನೆನಪಿಸಿಕೊಳ್ಳುತ್ತಿರುವ ಭಾವುಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
"ಸೇನೆ ಅಂದ್ರೆ ಏನು? ಸೈನಿಕರ ಕೆಲಸವೇನು?" ಎಂಬುದನ್ನು ತನಗೆ ತಂದೆಯೇ ಹೇಳಿಕೊಟ್ಟಿದ್ದಾಗಿ ತನ್ನ ತೊದಲು ದನಿಯಲ್ಲಿ ಈ ಪುಟ್ಟ ಕಂದ ಉಲಿಯುತ್ತಿದ್ದರೆ ಕಣ್ಣೀರುಕ್ಕುತ್ತದೆ... ತಂದೆ ಕಟ್ಟಿಕೊಟ್ಟ ಸಂಸ್ಕಾರ, ದೇಶಭಕ್ತಿಯ ಕಿಚ್ಚು ಆ ಪುಟ್ಟ ಕಣ್ಗಳಲ್ಲಿ ಮಿನುಗುತ್ತದೆ.
A year after Akshay's martyrdom, Naina recollects conversations with her papa.
— Meghna Girish (@megirish2001) February 11, 2019
Here she teaches us what 'Army is...'
This random video captures innocence and faith.
Love is an emotion.
Her papa's love for the Army and Countrymen also stays within her.
Jai Hind. @adgpi pic.twitter.com/kWecbp1Tax
2016 ರ ನವೆಂಬರ್ 29 ರಂದು ಮೇ. ಅಕ್ಷಯ್ ಗಿರೀಶ್ ಕುಮಾರ್ ಮತ್ತು ಮೇ.ಗೋಸಾವಿ ಕುನಾಲ್ ಮನ್ನಂದಿರ್ ಎಂಬುವವರನ್ನು ನಾಗೋತ್ರಾ ಎಂಬಲ್ಲಿ ಉಗ್ರರು ಗುಂಡಿಕ್ಕಿ ಕೊಂದಿದ್ದರು.

ತಂದೆ ಉಗ್ರರ ಗುಂಡೇಟಿಗೆ ಬಲಿಯಾದರೂ, ಈ ವಿಡಿಯೋ ನೋಡಿದ ಮೇಲೆ, ಮಗಳ ಮುಗ್ಧ ದನಿಯಲ್ಲಿ, ಆಕೆಯ ಎದೆಯೊಳಗಿನ ರಾಷ್ಟ್ರಪ್ರೇಮದ ಕಿಚ್ಚಿನಲ್ಲಿ ಇಂದಿಗೂ ಜೀವಂತವಾಗಿದ್ದಾರೆ ಎನ್ನಿಸುವುದು ಸುಳ್ಳಲ್ಲ.












Click it and Unblock the Notifications