ಸ್ಮಾರ್ಟ್ ಬೋರ್ಡ್ ಪುಸ್ತಕ ಬೇಡ್ವೇ ಬೇಡ : ಮರಳಿನ ಮೇಲೆಯೇ ಬರೆಯೋ ಮಕ್ಕಳು ; 85 ವರ್ಷದ ಅಜ್ಜಿಯೇ ಟೀಚರ್

ಇದು ಸ್ಮಾರ್ಟ್ ಯುಗ. ಇಲ್ಲಿ ಎಲ್ಲವೂ ಸ್ಮಾರ್ಟ್. ಸ್ಮಾರ್ಟ್ ಪೋನ್, ಸ್ಮಾರ್ಟ್ ಟಿವಿ, ಸ್ಮಾರ್ಟ್ ಬೋರ್ಡ್, ಸ್ಮಾರ್ಟ್ ಕ್ಲಾಸ್ ರೂಂ. ಶಾಲೆಗೆ ಅಡ್ಮಿಶನ್ ಮಾಡುವಾಗ ಪೋಷಕರು ಮೊದಲು ನೋಡುವುದೇ ಸ್ಮಾರ್ಟ್ ಬೋರ್ಡ್ ಇದೆಯಾ, ಕಂಪ್ಯೂಟರ್ ಇದೆಯಾ ಎನ್ನುವುದನ್ನು. ಇಷ್ಟಿದ್ದರೆ ನಮ್ಮ ಮಕ್ಕಳು ಆ ಶಾಲೆಯಲ್ಲಿ ಕಲಿತು ಟಾಪರ್ ಆಗಿಯೇ ಬಿಡುತ್ತಾರೆ ಎನ್ನುವ ಲೆಕ್ಕ. ಇದು ಎಷ್ಟು ಸತ್ಯವೋ, ಎಷ್ಟು ಬರೀ ನಂಬಿಕೆಯೋ ದೇವನೇ ಬಲ್ಲ.

85 ವರ್ಷದ ಅಜ್ಜಿಯೇ ಟೀಚರ್ :

ಆದರೆ ಇಲ್ಲೊಂದು ಶಾಲೆ ಇದೆ. ಇಲ್ಲಿ ಸ್ಮಾರ್ಟ್ ಬೋರ್ಡ್, ಸ್ಮಾರ್ಟ್ ಕ್ಲಾಸ್ ರೂಂ ಬಿಡಿ ಬ್ಲಾಕ್ ಬೋರ್ಡ್ ಕೂಡಾ ಇಲ್ಲ. ಅಷ್ಟೇ ಯಾಕೆ ನೋಟ್ ಬುಕ್ಕಿಗೂ ಜಾಗ ಇಲ್ಲ. ಆದರೂ ಇಲ್ಲಿಯ ಮಕ್ಕಳು ತುಂಬಾ ಖುಷಿಯಿಂದ ಶಾಲೆಗೆ ಬರ್ತಾರೆ, ಪಾಠ ಕಲೀತಾರೆ. ಇಲ್ಲಿಗೆ ಬರುವ ಮಕ್ಕಳು ಬ್ಯಾಗ್ ತುಂಬಾ ಬುಕ್ ಹೊತ್ತು ಕೊಂಡು ಬರುವ ಅಗತ್ಯವಿಲ್ಲ. ಫ್ಯಾನ್ಸಿ ಪೆನ್ಸಿಲ್, ಪೆನ್, ಯಾವುದೂ ಬೇಡ. ಇನ್ನೊಂದು ವಿಶೇಷ ಎಂದರೆ ಇಲ್ಲಿ ಪಾಠ ಹೇಳಿ ಕೊಡುವುದು 85 ವರ್ಷದ ಅಜ್ಜಿ.

Viral Video 85 Year Old Kerala Grandmother Teaching Kids With Sand And Stick Instead Board And Book Viral Video

ಬರೀ ಮರಳು ಕೋಲು ಇದ್ದರೆ ಸಾಕು :

ಬೋರ್ಡ್ ಇಲ್ಲ, ಸ್ಲೇಟ್, ಪುಸ್ತಕ ಬೇಡ ಹಾಗಿದ್ದರೆ ಮಕ್ಕಳು ಓದುವುದು ಬರೆಯುವುದಾದರೂ ಹೇಗೆ? ಅಲ್ಲೇ ಇರುವುದು ವಿಶೇಷ. ಇಲ್ಲಿ ಬೇಕಾಗಿರುವುದು ಮರಳು, ಮರದ ಕೋಲು ಮತ್ತು ಮಕ್ಕಳಿಗೆ ಕಲಿಸುವ ಉತ್ಸಾಹ. 85 ವರ್ಷದ ಅಜ್ಜಿ ಟೀಚರಿನ ಈ ವೀಡಿಯೊ ಇತ್ತೀಚಿನ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ. ಅಜ್ಜಿ ಮಕ್ಕಳಿಗೆ ಕಲಿಸುವ ರೀತಿ ಎಲ್ಲರಿಗೂ ಇಷ್ಟವಾಗುತ್ತಿದೆ.

ಸೋಶಿಯಲ್ ಮಿಡಿಯಾದಲ್ಲಿ ವೈರಲ್ :

ಈ ವಿಡಿಯೋವನ್ನು ಸೋಶಿಯಲ್ ಮಿಡಿಯಾ ಪ್ಲಾಟ್ ಫಾರಂ ಎಕ್ಸ್ ನ @iAkankshaP ಅಕೌಂಟಿನಲ್ಲಿ ಶೇರ್ ಮಾಡಲಾಗಿದೆ. ವೀಡಿಯೊದ ಟೈಟಲಿನಲ್ಲಿ ಹಿರಿಯ ಶಿಕ್ಷಕಿ ಕೇರಳದ 85 ವರ್ಷದ ಇಂದಿರಾ ಅಮ್ಮ ಎಂದು ಬರೆಯಲಾಗಿದೆ. ಅಂದ ಹಾಗೆ ಇಂದಿರಮ್ಮನನ್ನು ಜನ ಪ್ರೀತಿಯಿಂದ ಅಮ್ಮಮ್ಮ ಅಂತ ಕರೆಯುತ್ತಾರೆ. ವೀಡಿಯೊದಲ್ಲಿ (video), ಅವರು ಸಣ್ಣ ಮಕ್ಕಳ ನಡುವೆ ಕುಳಿತು ಅವರಿಗೆ ಕಲಿಸುತ್ತಿರುವುದನ್ನು ನೋಡಬಹುದು. ಬಕೆಟಿನಲ್ಲಿ ಮರಳು ತರುವ ಅಜ್ಜಿ ಮಕ್ಕಳ ಮುಂದೆ ನೆಲದ ಮೇಲೆ ಮರಳನ್ನು ಹರಡುತ್ತಾರೆ. ಮರದ ಕೋಲಿನಿಂದ ಮರಳಿನ ಮೇಲೆ ಅಕ್ಷರ ಮತ್ತು ಸಂಖ್ಯೆ ಬರೆಯುತ್ತಾರೆ. ತಪ್ಪಾದರೆ ಅಲ್ಲಿಯೇ ಒರೆಸಿ ಬಿಡುತ್ತಾರೆ. ಮಕ್ಕಳು ಕೂಡಾ ಅಜ್ಜಿಯನ್ನೇ ಕಾಪಿ ಮಾಡುತ್ತಾರೆ.

ಪ್ರೀತಿಯ ಅಮ್ಮಮ್ಮನ ಪಾಠ :

ಅಮ್ಮಮ್ಮ ( mother) ಮಕ್ಕಳಿಗೆ ಪ್ರೀತಿಯಿಂದ ವಿವರಿಸುತ್ತಾರೆ. ಒಂದು ಮಗುವಿಗೆ ಸರಿಯಾಗಿ ಅಕ್ಷರ ಬರೆಯಲು ಅಗುವುದಿಲ್ಲ ಎಂದರೆ ಅಜ್ಜಿ ಮತ್ತೆ ಮತ್ತೆ ಹೇಳಿಕೊಡುತ್ತಾರೆ. ಬೈಯ್ಯುವುದಿಲ್ಲ, ಕೂಗುವುದಿಲ್ಲ, ಕಿರುಚಾಡುವುದಿಲ್ಲ ಪ್ರೀತಿಯಿಂದ ಮಕ್ಕಳಿಗೆ ಹೇಳಿಕೊಡುತ್ತಾರೆ. ಮಕ್ಕಳಿಗೂ ಅಜ್ಜಿಯ ಪಾಠ ಎಂದರೆ ಬಲು ಇಷ್ಟ. ಈ ತರಗತಿಯಲ್ಲಿ, ಮಕ್ಕಳಿಗೆ ಮಲಯಾಳಂ, ಹಿಂದಿ, ಇಂಗ್ಲಿಷ್ ಮತ್ತು ಗಣಿತವನ್ನು ಕಲಿಸುತ್ತಾರೆ. ಇಲ್ಲಿ ಯಾವುದಕ್ಕೂ ದುಬಾರಿ ಹಣ ಖರ್ಚು ಮಾಡಬೇಕಿಲ್ಲ ಎನ್ನುವುದೇ ವಿಶೇಷ. ಮರಳು ಮತ್ತು ಮರದ ಕೋಲು ಇದ್ದರೆ ಸಾಕು.

10 ವರ್ಷಗಳಿಂದ ಮಕ್ಕಳಿಗೆ ಪಾಠ :

ಮಾಹಿತಿಯ ಪ್ರಕಾರ, ಇಂದಿರಾ ಅಮ್ಮ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ. ಅವರು ಕಳೆದ 10 ವರ್ಷಗಳಿಂದ ಮಕ್ಕಳಿಗೆ ಪಾಠ ಹೇಳಿಕೊಳ್ಳುತ್ತಿದ್ದಾರೆ. ಇವರ ಈ ವಿಧಾನ ಕೇರಳದ ಸಾಂಪ್ರದಾಯಿಕ ಬೋಧನಾ ವಿಧಾನ ಅಶಾನ್ ಕಲರಿಗೆ ಸಂಬಂಧಿಸಿದೆ. ಇಲ್ಲಿ, ಮರಳು ಅಥವಾ ಜೇಡಿಮಣ್ಣಿನ ಮೇಲೆ ಪತ್ರಗಳನ್ನು ಬರೆಯುವ ಮೂಲಕ ಮಕ್ಕಳಿಗೆ ಕಲಿಸಲಾಗುತ್ತದೆ. ಈ ವಿಧಾನವು ಹಳೆಯದಾಗಿರಬಹುದು. ಆದರೆ ಇದು ಮಕ್ಕಳಿಗೆ ತತುಂಬಾ ಇಂಟರೆಸ್ಟಿಂಗ್ ಆಗಿದೆ. ಮಕ್ಕಳು ಈ ಮರಳಿನ ಮೇಲೆ ಅಕ್ಷರ ಬರೆಯುತ್ತಾರೆ, ಒರೆಸುತ್ತಾರೆ.

ಸೋಷಿಯಲ್ ಮೀಡಿಯಾದಲ್ಲಿ ಜನರ ಕಾಮೆಂಟ್ :

ಅಮ್ಮನ ಈ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಲೈಕ್ ಸಿಗುತ್ತಿದೆ. ಈ ವಿಡಿಯೋ ನೋಡಿದ ಜನರು ಅವರ ಕಠಿಣ ಪರಿಶ್ರಮ, ತಾಳ್ಮೆ ಮತ್ತು ಮಕ್ಕಳ ಮೇಲಿನ ಪ್ರೀತಿಯನ್ನು ಹೊಗಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+