Condom Viral Video: ಕಾಂಡೋಮ್ ಬಗ್ಗೆ ಜಾಗೃತಿ ಮೂಡಿಸಲು ಹೋಗಿ ಎಡವಟ್ಟು, ವೈರಲ್ ವಿಡಿಯೋದಲ್ಲಿ ಏನಿದೆ ?
ಸೋಷಿಯಲ್ ಮೀಡಿಯಾದಲ್ಲಿ ಈಗೆಲ್ಲ ಕೆಲವೊಂದು ವಿಷಯಗಳು ಕ್ಷಣಾರ್ಧದಲ್ಲಿ ವೈರಲ್ ಆಗುವುದಿದೆ. ಇದೀಗ ಕಾಂಡೋಮ್, ಎಚ್‌ಐವಿ ಹಾಗೂ ಏಡ್ಸ್ ಬಗ್ಗೆ ಜಾಗತಿ ಮೂಡಿಸುವುದಕ್ಕೆ ಹೋಗಿ, ಮುಜುಗರಕ್ಕೆ ಒಳಗಾಗಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಪುರುಷರ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೂ ವೈರಲ್ ವಿಡಿಯೋದಲ್ಲಿ ಏನಿದೆ ಎನ್ನುವುದನ್ನು ನೋಡೋಣ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕಾಂಡೋಮ್ ವಿಚಾರಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಸಮಸ್ತಿಪುರ ಆಸ್ಪತ್ರೆಯ ವೈರಲ್ ವಿಡಿಯೋ ಭಾರೀ ಸಂಚಲನ ಸೃಷ್ಟಿ ಮಾಡಿದೆ. ವಿಶ್ವ ಏಡ್ಸ್ ದಿನದಂದು ಬಿಹಾರದ ಸಮಸ್ತಿಪುರದ ಸದರ್ ಆಸ್ಪತ್ರೆಯಲ್ಲಿ ಜಾಗೃತಿ ಅಭಿಯಾನ ನಡೆದಿತ್ತು. ಆದರೆ, ಈ ಜಾಗೃತಿ ಅಭಿಯಾನವು ಹಾಸ್ಯದ ಕಾರ್ಯಕ್ರಮವಾಗಿ ಬದಲಾಗಿದೆ. ಇಲ್ಲಿನ ಜನರಲ್ ನರ್ಸಿಂಗ್ ಹೋಮ್‌ವೊಂದರ ವಿದ್ಯಾರ್ಥಿಗಳು ಆಸ್ಪತ್ರೆ ಆವರಣದಿಂದ ಪ್ರಮುಖ ಬೀದಿಗಳಲ್ಲಿ ಏಡ್ಸ್, ಎಚ್‌ಐವಿ ಹಾಗೂ ಕಾಂಡೋಮ್ ಜಾಗೃತಿ ಜಾಥಾ ಭಾರೀ ವೈರಲ್ ಆಗಿದೆ.

ಜಾಗೃತಿ ವಿಡಿಯೋ ಹೋಗಿ ಬೇರೆಯದ್ದೇ ಆಗಿದೆ. ಈ ರೀತಿಯಲ್ಲಾ ಯಾರಾದರೂ ಕಾಂಡೋಮ್ ಬಗ್ಗೆ ಜಾಗೃತಿ ಮೂಡಿಸುತ್ತಾರೆಯೇ ಎಂದು ಜನ ಈಗ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಗಂಡ ಅಲೆಮಾರಿಯಾಗಿದ್ದರೆ, ಕಾಂಡೋಮ್‌ಗಳು ಮಾತ್ರ ಆಸರೆ. ವಿದೇಶಕ್ಕೆ ಹೋಗಬೇಡ... ಏಡ್ಸ್ ತರಬೇಡ ಎಂದು ಈ ವಿದ್ಯಾರ್ಥಿಗಳು ಘೋಷಣೆ ಕೂಗಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇನ್ನು KHOJ News ಎನ್ನುವ ಸ್ಥಳೀಯ ಮಾಧ್ಯಮ ಮಾಡಿರುವ ಸುದ್ದಿಯ ವಿಡಿಯೋ ಇದಾಗಿದೆ.
ವಿದ್ಯಾರ್ಥಿಗಳು ಎತ್ತಿರುವ ಈ ಘೋಷಣೆಗಳು ಕೇವಲ ಹಾಸ್ಯ ಅಥವಾ ವ್ಯಂಗ್ಯವಾಗಿರಲಿಲ್ಲ, ಬದಲಿಗೆ ಹಾಜರಿದ್ದವರಿಗೆ ಗಂಭೀರ ಸಂದೇಶವನ್ನು ನೀಡಿತು ಎಂದೂ ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಜಾಗೃತಿ ಮೂಡಿಸುವಂತ ಒಳ್ಳೆಯ ಕೆಲಸವನ್ನು ಇಷ್ಟೊಂದು ಕೆಟ್ಡದಾಗಿ ಯಾರಾದರೂ ಮಾಡಲು ಸಾಧ್ಯವೇ ಎಂದು ಪ್ರಶ್ನೆ ಸಹ ಮಾಡಿದ್ದಾರೆ.
अगर पति आवारा है, कंडोम ही सहारा है
— Einstein Yadav (@GYdv28) December 2, 2025
सदर अस्पताल समस्तीपुर 📍😅 pic.twitter.com/VOYaLWHZ85
ವ್ಯಾಪಕ ಟೀಕೆ: ಇನ್ನು ಕಾಂಡೋಮ್ ಜಾಗೃತಿ ವಿಚಾರದಲ್ಲಿ ಕೂಗಿರುವ ಘೋಷಣೆಗಳಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ರೀತಿ ಪುರುಷರನ್ನು ಗುರಿಯಾಗಿಸಿಕೊಂಡು ಹಾಗೂ ಮಹಿಳೆಯರಿಗೂ ಅವಮಾನ ಆಗುವ ರೀತಿಯಲ್ಲಿ ಘೋಷಣೆಗಳನ್ನು ರಚಿಸಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಪ್ರಚಾರ ಮತ್ತು ಜಾಗೃತಿಯ ಹೆಸರಿನಲ್ಲಿ ಇಷ್ಟೊಂದು ಕೆಟ್ಟ ಸಂದೇಶ ಹಂಚಿಕೊಳ್ಳಬಾರದು. ಅದರಲ್ಲೂ ವಿದ್ಯಾರ್ಥಿಗಳಿಂದ ಈ ರೀತಿಯ ಸ್ಲೋಗನ್ ಹೇಳಿಸಿರುವುದು ತಪ್ಪು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ ಸೋಷಿಯಲ್ ಮೀಡಿಯಾದಲ್ಲಿ ಕಳೆದ ಮೂರು ದಿನಗಳಿಂದಲೂ ಈ ವೈರಲ್ ವಿಡಿಯೋ ಹಲವು ಚರ್ಚೆಗೆ ಕಾರಣವಾಗಿದೆ.












Click it and Unblock the Notifications