ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿಗೆ ಜರ್ಮನ್ ತಂತ್ರಜ್ಞಾನ ಬಳಕೆಯ ಹೆಸರು ಕೊಟ್ಟ ಗುತ್ತಿಗೆದಾರ- ಗ್ರಾಮಸ್ಥರ ಆಕ್ರೋಶ
ಮಹಾರಾಷ್ಟ್ರದಲ್ಲಿ ಕಳಪೆ ಮಟ್ಟದ ರಸ್ತೆ ಕಾಮಗಾರಿಗೆ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದು, ವಿಡಿಯೋ ವೈರಲ್ ಆಗಿದೆ. ರಸ್ತೆ ಮೇಲೆ ಹಾಕಲಾದ ಡಾಂಬರ್ ಅನ್ನು ಗ್ರಾಮಸ್ಥರು ಬರಿ ಕೈಯಿಂದಲೇ ಮುಟ್ಟಿ ಹರಡಿರುವ ವಿಡಿಯೋ ವೈರಲ್ ಆಗಿದೆ. ಗುತ್ತಿಗೆದಾರ ಕಳಪೆ ಗುಣಮಟ್ಟದ ಕಾಮಗಾರಿನ್ನು ಮಾಡಿ ಜರ್ಮನ್ ತಂತ್ರಜ್ಞಾನವನ್ನು ಬಳಸಿಕೊಳ್ಳುವುದಾಗಿ ಹೇಳಿಕೊಂಡಿದ್ದು ಗ್ರಾಮಸ್ಥರು ಇನ್ನಷ್ಟು ಕೆಂಡಾಮಂಡಲರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದೆ.
ಗ್ರಾಮಸ್ಥರು ತಮ್ಮ ಕೈಗಳಿಂದ ಹೊಸದಾಗಿ ನಿರ್ಮಿಸಲಾದ ರಸ್ತೆಯನ್ನು ಎತ್ತುತ್ತಿರುವುದನ್ನು ಕಾಣಬಹುದು. ಹಲವಾರು ಟ್ವಿಟರ್ ಹ್ಯಾಂಡಲ್‌ಗಳು ಹೇಳಿಕೊಂಡಂತೆ ಮಹಾರಾಷ್ಟ್ರದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. 38 ಸೆಕೆಂಡುಗಳ ಕ್ಲಿಪ್‌ನಲ್ಲಿ ಕಾರ್ಪೆಟ್ ತರಹದ ವಸ್ತುವನ್ನು ರಸ್ತೆಯ ಕೆಳಗೆ ಹಾಕಲಾಗಿದೆ. ಇದರ ಮೇಲೆ ಜಲ್ಲಿ ಕಲ್ಲನ್ನು ಹಾಕಲಾಗಿದೆ. ಇದನ್ನು ಸ್ಥಳೀಯ ಗುತ್ತಿಗೆದಾರರು ನಿರ್ಮಿಸಿದ್ದಾರೆ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.

ವಿಡಿಯೋ ಕ್ಲಿಪ್‌ನಲ್ಲಿ ರಾಣಾ ಠಾಕೂರ್ ಎಂದು ಹೆಸರಿನ ಸ್ಥಳೀಯ ಗುತ್ತಿಗೆದಾರನ ಕಳಪೆ ಕಾಮಗಾರಿಯನ್ನು ಗ್ರಾಮಸ್ಥರು ಟೀಕಿಸುತ್ತಿದ್ದಾರೆ. ಡಾಂಬರು ಕೆಳಗೆ ಕಾರ್ಪೆಟ್ ಹಾಕಿಕೊಂಡು ಕೆಲಸ ಮಾಡಲಾಗಿದೆ. ಇದು ಎಂಥಾ ರಸ್ತೆ ಡಾಂಬರೀಕರಣ ಎಂದು ಗ್ರಾಮಸ್ಥರು ಹಿಡಿ ಶಾಪ ಹಾಕಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ-
When Kaleen Bhaiya ventures into Road construction 😂😂 The contractor made a fake road— with carpet as a base! #Maharashtra #India #Wednesdayvibe pic.twitter.com/6MpHaL5V6x
— Rohit Sharma 🇺🇸🇮🇳 (@DcWalaDesi) May 31, 2023
ಫ್ರೀ ಪ್ರೆಸ್ ಜರ್ನಲ್ ಪ್ರಕಾರ, ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಅಂಬಾಡ್ ತಾಲೂಕಿನ ಕರ್ಜತ್-ಹಸ್ತ್ ಪೋಖಾರಿಯಲ್ಲಿ ಈ ಘಟನೆ ನಡೆದಿದೆ. ಈ ರಸ್ತೆಯನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಪ್ರಧಾನಿ ಗ್ರಾಮೀಣ ರಸ್ತೆ ಯೋಜನೆ) ಅಡಿಯಲ್ಲಿ ನಿರ್ಮಿಸಲಾಗಿದೆ. ರಸ್ತೆ ನಿರ್ಮಾಣಕ್ಕೆ ಜರ್ಮನ್ ತಂತ್ರಜ್ಞಾನವನ್ನು ಬಳಸಿಕೊಳ್ಳುವುದಾಗಿ ಗುತ್ತಿಗೆದಾರ ಹೇಳಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಆದರೆ ವೀಡಿಯೋದಲ್ಲಿ ನೇರವಾಗಿ ರಸ್ತೆ ಮೇಲಿನ ಡಾಂಬರಿಕರಣವನ್ನು ಪರಿಶೀಲಿಸಿದಾಗ ಗುತ್ತಿಗೆದಾರನ ನಿಜ ಬಣ್ಣ ಬಯಲಾಗಿದೆ. ಇದರಿಂದ ಸ್ಥಳೀಯರು ಮಹಾರಾಷ್ಟ್ರ ಸರ್ಕಾರವನ್ನು ಟೀಕಿಸಿದ್ದಾರೆ. ಫ್ರೀ ಪ್ರೆಸ್ ಜರ್ನಲ್ ಪ್ರಕಾರ ಕಳಪೆ ಕಾಮಗಾರಿಯನ್ನು ಅನುಮೋದಿಸಿದ ಇಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಮೇಕ್ ಇನ್ ಇಂಡಿಯಾ ವೆಬ್‌ಸೈಟ್ ಪ್ರಕಾರ, ಭಾರತ ಸುಮಾರು 63.32 ಲಕ್ಷ ಕಿಲೋಮೀಟರ್‌ಗಳ ವಿಶ್ವದ ಎರಡನೇ ಅತಿದೊಡ್ಡ ರಸ್ತೆ ಜಾಲವನ್ನು ಹೊಂದಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ರಸ್ತೆ ನಿರ್ಮಾಣವನ್ನು ಕಾರ್ಯಗತಗೊಳಿಸಲು ವಿವಿಧ ಏಜೆನ್ಸಿಗಳನ್ನು ಹೊಂದಿದೆ: ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೋಕೋಪಯೋಗಿ ಇಲಾಖೆಗಳು, ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್, ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಮತ್ತು ಇಂಡಿಯನ್ ಅಕಾಡೆಮಿ ಆಫ್ ಹೈವೇ ಇಂಜಿನಿಯರ್ಸ್ (IAHE). ಆದರೆ ಇವರು ಮಾಡು ರಸ್ತೆ ಕಾಮಗಾರಿಗಳು ಜನಾಕ್ರೋಶಕ್ಕೆ ಗುರಿಯಾಗಿವೆ.












Click it and Unblock the Notifications