Vijay - Trisha: ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ: ವಿಜಯ್ ಕಾರ್ಯಕ್ರಮದಲ್ಲಿ ಮಿಂಚಿದ ನಟಿ ತ್ರಿಷಾ, ವೈರಲ್ ವಿಡಿಯೋ ಇಲ್ಲಿದೆ

Vijay - Trisha: ತಮಿಳುನಾಡಿನ ರಾಜಕೀಯವು ಇತ್ತೀಚಿನ ದಿನಗಳಲ್ಲಿ ದಿನಕ್ಕೊಂದು ಬದಲಾವಣೆಗೆ ಕಾರಣವಾಗುತ್ತಿದೆ. ಅದರಲ್ಲೂ ತಮಿಳುನಾಡಿನ ರಾಜಕೀಯಕ್ಕೆ ನಟ ವಿಜಯ್ ದಳಪತಿ ಪ್ರವೇಶ ಮಾಡಿ, ರಾಜಕೀಯ ಪಕ್ಷ ಪ್ರಾರಂಭಿಸಿದಾಗಿನಿಂದಲೂ ಅವರ ವೈಯಕ್ತಿ ಜೀವನದ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಇದೀಗ ಸ್ವಾತಂತ್ರ್ಯ ದಿನಾಚರಣೆಯಂದು ನಟ, ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಹಾಗೂ ನಟಿ ತ್ರಿಷಾ ಕೃಷ್ಣ ಅವರ ಆತ್ಮೀಯತೆ ಹಾಗೂ ಸ್ನೇಹದ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ. ಈಚೆಗಷ್ಟೇ ವಿಜಯ್ ಅವರ ಪತ್ನಿ ಸಂಗೀತಾ ಅವರು ಡಿವೋರ್ಸ್ ಕೇಸ್ ವಾಪಸ್ ಪಡೆದಿದ್ದರು. ಇದರಿಂದ ವಿಜಯ್ ಅವರ ವೈಯಕ್ತಿಕ ಜೀವನದಲ್ಲಿ ಎಲ್ಲವೂ ಸರಿ ಹೋಗುತ್ತಿದೆ ಎಂದೇ ಎಲ್ಲರು ಅಂದುಕೊಂಡಿದ್ದರು. ಆದರೆ ಸ್ವಾತಂತ್ರ್ಯ ದಿನಾಚರಣೆಯ ದಿನ ತಮಿಳುನಾಡಿನಲ್ಲಿ ನಡೆದಿರುವ ವಿಷಯವು ಮತ್ತೊಮ್ಮೆ ವಿಜಯ್ ಹಾಗೂ ತ್ರಿಷಾ ಅವರ ನಡುವಿನ ಆತ್ಮೀಯತೆಯ ವಿಷಯದ ಚರ್ಚೆಗೆ ಕಾರಣವಾಗಿದೆ.

ಶುಕ್ರವಾರ ಚೆನ್ನೈನ ಫೋರ್ಟ್ ಸೇಂಟ್ ಜಾರ್ಜ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಟಿ ತ್ರಿಷಾ ಕೃಷ್ಣನ್ ಅವರು ಭಾಗವಹಿಸಿದ್ದರು. ತಮಿಳುನಾಡಿನ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರು ಧ್ವಜಾರೋಹಣ ಸಮಾರಂಭ ಪ್ರಾರಂಭಿಸುವುದಕ್ಕೂ ಮುಂಚೆಯೇ ತ್ರಿಷಾ ಅವರು ಗಣ್ಯರಿಗೆ ಮೀಸಲಿರಿಸಿದ್ದ ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಕಾರ್ಯಕ್ರಮದ ಹಲವಾರು ವೀಡಿಯೊಗಳು ಇದೀಗ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ.

Vijay - Trisha

Vijay - Trisha: ಸಮಾರಂಭದಲ್ಲಿ ಮಿಂಚಿದ ತ್ರಿಷಾ

ಇನ್ನು ಈ ಸಮಾರಂಭದಲ್ಲಿ ಹಳದಿ ಸೀರೆಯಲ್ಲಿ ತ್ರಿಷಾ ಅವರು ಮಿಂಚಿದ್ದಾರೆ. ಮುಡಿಗೆ ಮಲ್ಲಿಗೆ ಹೂವಿನ ಹಾರ ಮೂಡಿದಿದ್ದರು. ನಟ, ಸಿಎಂ ವಿಜಯ್ ಅವರ ಆಗಮನಕ್ಕಾಗಿ ಕಾಯುತ್ತಿರುವಂತೆ ಇರುವ ವಿಡಿಯೋಗಳು ವೈರಲ್ ಆಗಿದೆ. ಮತ್ತೊಂದು ಕ್ಲಿಪ್‌ನಲ್ಲಿ, ನಟಿ ತ್ರಿಷಾ ಅವರ ತಾಯಿ ಉಮಾ ಕೃಷ್ಣನ್ ಅವರೊಂದಿಗೆ ಆಗಮಿಸಿದ್ದು, ವಿಜಯ್ ಅವರ ಪೋಷಕರಾದ ಎಸ್‌ಎ ಚಂದ್ರಶೇಖರ್ ಮತ್ತು ಶೋಭಾ ಚಂದ್ರಶೇಖರ್ ಅವರ ಪಕ್ಕದಲ್ಲಿ ಕುಳಿತಿರುವುದು ಕಂಡುಬಂದಿದೆ.

ಮೇ ತಿಂಗಳಲ್ಲಿ ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿಯೂ ಇದೇ ರೀತಿಯ ಕ್ಷಣ ಕಂಡುಬಂದಿತು, ಈ ಸಮಾರಂಭದಲ್ಲೂ ತ್ರಿಷಾ ಅವರು ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಅಲ್ಲದೆ ಇದಕ್ಕೂ ಮೊದಲು ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ಅವರನ್ನು ಪ್ರೀತಿಯಿಂದ ತಬ್ಬಿಕೊಂಡು ಗಮನ ಸೆಳೆದಿದ್ದರು.

ಚೆನ್ನೈನ ಫೋರ್ಟ್ ಸೇಂಟ್ ಜಾರ್ಜ್‌ನಲ್ಲಿ ನಡೆದ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಐತಿಹಾಸಿಕ ಮೊದಲ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಸಮಾರಂಭದಲ್ಲಿ ನಟಿ ತ್ರಿಶಾ ಕೃಷ್ಣನ್ ಭಾಗವಹಿಸಿರುವುದು ಈಗ ಚರ್ಚೆಗೆ ಕಾರಣವಾಗಿದೆ. ಅಲ್ಲದೆ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರ ಪೋಷಕರಾದ ಎಸ್. ಎ. ಚಂದ್ರಶೇಖರ್ ಮತ್ತು ಶೋಭಾ ಚಂದ್ರಶೇಖರ್ ಅವರೊಂದಿಗೆ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುವ ಮೂಲಕ ಅವರು ಸಾರ್ವಜನಿಕ ಮತ್ತು ಮಾಧ್ಯಮದ ಗಮನ ಸೆಳೆದಿದ್ದಾರೆ. ಇದೀಗ ಈ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+