ನೋಟಿಸ್‌ಗೆ ಉತ್ತರ ನೀಡಲು ಸಮಯ ಕೇಳಿದ ವಿಜಯ್ ಮಲ್ಯ
ನವದೆಹಲಿ, ಸೆಪ್ಟೆಂಬರ್ 3: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ಆರೋಪ ಎದುರಿಸುತ್ತಿರುವ ಮದ್ಯದ ದೊರೆ ವಿಜಯ್ ಮಲ್ಯ ಜಾರಿ ನಿರ್ದೇಶನಾಲಯದ ನೋಟಿಸ್‌ಗೆ ಪ್ರತಿಕ್ರಿಯೆ ನೀಡಲು ಕಾಲಾವಕಾಶ ಕೋರಿದ್ದಾರೆ.
ಮಲ್ಯ ಅವರ ಮಾರಿಷಸ್ ವಿಳಾಸವನ್ನು ನೀಡಿದ್ದರೂ, ಇದುವರೆಗೂ ಅಂತಹ ಯಾವುದೇ ನೋಟಿಸ್ ತಲುಪಿಲ್ಲ ಎಂದು ಮಲ್ಯ ಪರ ವಕೀಲರು ವಾದಿಸಿದರು.
ಇದಕ್ಕೆ ಪ್ರತಿಯಾಗಿ ವಾದ ಮಂಡಿಸಿದ ಜಾರಿ ನಿರ್ದೇಶನಾಲಯದ ಪರ ವಕೀಲರು, ಮಲ್ಯ ಅವರಿಗೆ ಪ್ರತಿಕ್ರಿಯೆ ನೀಡಲು ಹೆಚ್ಚು ಸಮಯ ನೀಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಆರ್ಥಿಕ ಅಪರಾಧ ಕಾನೂನಿನ ಅಡಿ ಒಂದು ವಾರಕ್ಕಿಂತ ಹೆಚ್ಚು ಸಮಯ ನೀಡಲು ನ್ಯಾಯಾಲಯಕ್ಕೂ ಅಧಿಕಾರವಿಲ್ಲ ಎಂದರು.

ಆರ್ಥಿಕ ಅಪರಾಧಿಯಾಗಿರುವ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡುವ ಸಂಬಂಧ ಲಂಡನ್‌ನ ವೆಸ್ಟ್ ಮಿನಿಸ್ಟರ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಮುಂಬೈನ ಆರ್ಥರ್ ಜೈಲಿನ ಸ್ಥಿತಿ ಚೆನ್ನಾಗಿಲ್ಲ. ಅಲ್ಲಿ ಸೌಲಭ್ಯಗಳಿಲ್ಲದ ಕಾರಣ ತಮ್ಮನ್ನು ಅಲ್ಲಿಗೆ ಕಳುಹಿಸಬಾರದು ಎಂದು ಮಲ್ಯ ತಕರಾರು ತೆಗೆದಿದ್ದರು.
ಈ ಸಂಬಂಧ ಸಿಬಿಐ ಆರ್ಥರ್ ಜೈಲಿನ ವಿಡಿಯೋವನ್ನು ಲಂಡನ್ ಕೋರ್ಟ್‌ಗೆ ಸಲ್ಲಿಸಿದೆ.












Click it and Unblock the Notifications