Vijay Deverakonda: ಜಮ್ಮು - ಕಾಶ್ಮೀರ, ಪಾಕಿಸ್ತಾನದ ಬಗ್ಗೆ ನಟ ವಿಜಯ್ ದೇವರಕೊಂಡ ವಿಡಿಯೋ ವೈರಲ್, ಮುಗಿಯದ ಟ್ರೋಲ್
Vijay Deverakonda: ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರು ಈಚೆಗೆ "ಕಾಫಿ ವಿತ್ ಕರಣ್ 9' ಶೋನಲ್ಲಿ ಭಾಗವಹಿಸಿದ ನಂತರ ಹಲವು ಕಾರಣಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ. ಈ ರೀತಿ ಇರುವಾಗಲೇ ಜಮ್ಮು ಮತ್ತು ಕಾಶ್ಮೀರ, ಪಾಕಿಸ್ತಾನದ ಬಗ್ಗೆ ನಟ ವಿಜಯ್ ದೇವರಕೊಂಡ ಅವರು ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಟ ವಿಜಯ ದೇವರಕೊಂಡ ಅವರ ರೀತಿಯಲ್ಲಿ ಯಾವ ಬಾಲಿವುಡ್ ನಟ ಸಹ ಮಾತನಾಡುವುದಕ್ಕೆ ಸಾಧ್ಯವಿಲ್ಲ ಎಂದು ನೆಟ್ಟಗರು ಹೇಳಿದ್ದಾರೆ. ವಿಜಯ್ ದೇವರಕೊಂಡ ಅವರ ವೈರಲ್ ವಿಡಿಯೋದಲ್ಲಿ ಏನಿದೆ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಈಚೆಗೆ ಅವರು ಮತ್ತೆ ನೆಗೆಟಿವ್ ಟ್ರೆಂಡಿಂಗ್ ಹಾಗೂ ಟ್ರೋಲ್ ಆಗುತ್ತಿರುವುದು ಯಾಕೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ನಟ ವಿಜಯ್ ದೇವರಕೊಂಡ ಅವರು ದೇಶದ ಜನರು ಒಂದಾಗಿ ಇರಬೇಕು ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಜಮ್ಮು ಮತ್ತು ಕಾಶ್ಮೀರ ಹಾಗೂ ಪಾಕಿಸ್ತಾನ ದೇಶದ ಬಗ್ಗೆ ಮಾತನಾಡಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Vijay Deverakonda: ವಿಜಯ್ ದೇವರಕೊಂಡ ನೆಗೆಟಿವ್ ಟ್ರೆಂಡ್ ಆಗುತ್ತಿರುವುದು ಯಾಕೆ ?
ಇನ್ನು ವಿಜಯ್ ದೇವರಕೊಂಡ ಅವರ "ಕಾಫಿ ವಿತ್ ಕರಣ್ (ಸೀಸನ್ 9)' ಶೋನಲ್ಲಿ ಮಾತನಾಡಿರುವ ವಿಷಯ ಇದೀಗ ಟ್ರೋಲ್ ಆಗುತ್ತಿದೆ. ರೆಡ್ ಫ್ಲ್ಯಾಗ್ (Red Flag) ವಿವಾದ ಹಾಗೂ ಟ್ರೋಲಿಂಗ್ ಎಂಬ ಚರ್ಚೆಯು ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.
ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅವರು ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಅವರು ತಮ್ಮ ಮದುವೆ ಹಾಗೂ ಪ್ರಪೋಸಲ್ ದಿನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಈ ವೇಳೆ ವಿಜಯ್ ದೇವರಕೊಂಡ ಅವರು, "ರಶ್ಮಿಕಾ ನನ್ನನ್ನು ಮದುವೆಯಾಗಲು ಒಪ್ಪಿಕೊಳ್ಳುವ ಮುನ್ನ ಸುಮಾರು ಒಂದು ವರ್ಷದ ಅವಧಿಯಲ್ಲಿ 100 ಕ್ಕೂ ಹೆಚ್ಚು ಬಾರಿ ಪ್ರಪೋಸ್ ಮಾಡಬೇಕಾಯಿತು' ಎಂದಿದ್ದರು. ಈ ಹೇಳಿಕೆಗೆ ನೆಟ್ಟಿಗರಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ವಿಜಯ್ ದೇವರಕೊಂಡ ಅವರನ್ನು ಅಹಂಕಾರಿ ಮತ್ತು ರೆಡ್ ಫ್ಲ್ಯಾಗ್ (ರಿಲೇಷೆನ್ ಶಿಪ್‌ಗೆ ಯೋಗ್ಯವಲ್ಲದ) ವ್ಯಕ್ತಿ ಎನ್ನುವ ಅಭಿಪ್ರಾಯವು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ.
Vijay Deverakonda: ಪಾಕಿಸ್ತಾನ - ಜಮ್ಮು ಮತ್ತು ಕಾಶ್ಮೀರದ ಬಗ್ಗೆ ವಿಜಯ್ ದೇವರಕೊಂಡ ಮಾತು
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ಸಂದರ್ಶನದ ವಿಷಯವು ವಿವಾದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಈ ಹಿಂದೆ ವಿಜಯ್ ದೇವರಕೊಂಡ ಪಾಕಿಸ್ತಾನ - ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಮಾತನಾಡಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕಾಶ್ಮೀರದಲ್ಲಿ ನಡೆಯುತ್ತಿರುವ ವಿಷಯಗಳಿಗೆ ಪರಿಹಾರವೆಂದರೆ ಅವರಿಗೆ (ಭಯೋತ್ಪಾದಕರಿಗೆ) ಶಿಕ್ಷಣ ನೀಡುವುದು ಮತ್ತು ಅವರು ಬ್ರೈನ್ ವಾಶ್ ಆಗದಂತೆ ನೋಡಿಕೊಳ್ಳುವುದು. ಅವರು ಏನು ಸಾಧಿಸುತ್ತಾರೆ ಅಂತ ಪ್ರಶ್ನೆ ಮಾಡಿದ್ದಾರೆ. ಮುಂದುವರಿದು ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರಿದ್ದು, ಕಾಶ್ಮೀರಿಗಳು ನಮ್ಮವರು. ಎರಡು ವರ್ಷಗಳ ಹಿಂದೆ, ನಾನು ಕಾಶ್ಮೀರದಲ್ಲಿ ಕುಶಿ ಸಿನಿಮಾದ ಚಿತ್ರೀಕರಣ ಅಲ್ಲಿ ಮಾಡಿದ್ದೇನೆ. ಅವರೊಂದಿಗೆ (ಸ್ಥಳೀಯರೊಂದಿಗೆ) ನನಗೆ ತುಂಬಾ ಒಳ್ಳೆಯ ನೆನಪುಗಳಿವೆ ಎಂದಿದ್ದಾರೆ.
ಪಾಕಿಸ್ತಾನವನ್ನು ತೀವ್ರವಾಗಿ ಟೀಕಿಸಿರುವ ಅವರು, ಆ ದೇಶದಲ್ಲಿ ಏನೇನು ಉಳಿದಿಲ್ಲ ದೇಶದ ಜನ ಅತೃಪ್ತರಾಗಿದ್ದಾರೆ. ಅಲ್ಲಿ ವಿದ್ಯುತ್ ಮತ್ತು ನೀರು ಇಲ್ಲ. ಪಾಕಿಸ್ತಾನಿಗಳು ಸ್ವತಃ ತಮ್ಮ ಸರ್ಕಾರದಿಂದ ಬೇಸತ್ತಿರುವುದರಿಂದ ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡುವ ಅಗತ್ಯವೇ ಇಲ್ಲ. ಅಲ್ಲಿನ ಜನರೇ ಅವರ ವಿರುದ್ಧ ತಿರುಗಿ ಬೀಳುವ ಕಾಲ ದೂರವಿಲ್ಲ ಅಂತಲೂ ಹೇಳಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications
