'ನನಗೀಗ 23 ವರ್ಷ, ಗರ್ಲ್ ಫ್ರೆಂಡ್ ಇದ್ರೆ ತಪ್ಪೇನು?' : ಹಾರ್ದಿಕ್

Posted By:
Subscribe to Oneindia Kannada
   ವಿಡಿಯೋ ಬಗ್ಗೆ ಮಾತನಾಡಿದ ಹಾರ್ದಿಕ್ | Hardik Patel reacts to his sex video | Oneindia Kannada

   ಅಹಮದಾಬಾದ್, ನವೆಂಬರ್ 14: ಗುಜರಾತ್ ಅಸೆಂಬ್ಲಿ ಚುನಾವಣೆ ಅಖಾಡದಲ್ಲಿ ವಿಡಿಯೋಗಳ ಸುದ್ದಿ ಸದ್ದಿಯಿಂದ ಮತದಾರ ಹೈರಾಣಾಗದಿದ್ದರೆ ಸಾಕು. ಹಾರ್ದಿಕ್ ಪಟೇಲ್ ವಿಡಿಯೋಗಳು ಜನಪ್ರಿಯತೆ ಗಳಿಸುತ್ತಿದ್ದು, ಸೆಕ್ಸ್ ವಿಡಿಯೋ ಮೊದಲ ಬಾರಿಗೆ ಹಾರ್ದಿಕ್ ಪಟೇಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

   22ರ ಯುವಕನದ್ದಲ್ಲ, 22 ವರ್ಷದ ಅಭಿವೃದ್ಧಿಯ ವಿಡಿಯೋ ಬೇಕು: ಹಾರ್ದಿಕ್

   ಪಾಟಿದಾರ್ ಮುಖಂಡ ಹಾರ್ದಿಕ್ ಪಟೇಲ್ ಸೆಕ್ಸ್ ವಿಡಿಯೋ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಗುಜರಾತ್ ಚುನಾವಣೆ ಹತ್ತಿರ ಬರುತ್ತಿರುವಾಗಲೇ ಈ ರೀತಿ ಸೆಕ್ಸ್ ವಿಡಿಯೋ, ಬಿಯರ್ ಕುಡಿಯುವ ವೈರಲ್ ಆಗಿರುತ್ತಿರುವುದು ಪಾಟಿದಾರ್ ಸಮುದಾಯಕ್ಕೆ ಇರುಸು ಮುರುಸು ಉಂಟು ಮಾಡುತ್ತಿರುವುದಂತೂ ನಿಜ.

   Videos are fake, Can’t a 23-year-old have girlfriends? asks Hardik Patel

   ಸೆಕ್ಸ್ ವಿಡಿಯೋ ಬಗ್ಗೆ ಮಾತನಾಡಿರುವ ಹಾರ್ದಿಕ್, ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ, ಇಂಥ ನೂರು ವಿಡಿಯೋ ಬಂದರೂ ನನ್ನ ಹೋರಾಟ ನಿಲ್ಲಲ್ಲ.ಬಿಜೆಪಿ ಮಾಡಿರೋ ಷಡ್ಯಂತ್ರ ನಾನು ಬಲಿಯಾಗಲ್ಲ ಎಂದಿದ್ದಾರೆ.

   ನನ್ನನ್ನೇ ಹೋಲುವ ವ್ಯಕ್ತಿಯೊಬ್ಬನನ್ನು ಹಾಕಿಕೊಂಡು ನಕಲಿ ವಿಡಿಯೋ ಮಾಡಲಾಗಿದೆ. ಇದನ್ನು ವಿದೇಶದಲ್ಲಿರುವ ಫೊರೆನ್ಸಿಕ್ ತಜ್ಞರಿಗೆ ಕಳಿಸಿ, ವರದಿ ತರೆಸಿಕೊಂಡಿದ್ದೇನೆ. ಒಂದು ವೇಳೆ ಆ ವಿಡಿಯೋದಲ್ಲಿ ನಾನೇ ಇದ್ದರೂ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

   'ಸೆಕ್ಸ್ ಮೂಲಭೂತ ಹಕ್ಕು', ಹಾರ್ದಿಕ್ ಬೆಂಬಲಕ್ಕೆ ಜಿಗ್ನೇಶ್ ಮೇವಾನಿ

   ನನಗೀಗ 23 ವರ್ಷದ ಯುವಕ, ಗೆಳತಿಯರನ್ನು ಹೊಂದಿದ್ದರೆ ತಪ್ಪೇನಿದೆ? 23 ವರ್ಷದ ಯುವಕನ ಬದಲು 50 ವರ್ಷದವರು ಗರ್ಲ್ಸ್ ಫ್ರೆಂಡ್ಸ್ ಹೊಂದಲು ಸಾಧ್ಯಾನಾ? ಎಂದು ಕೇಳಿದ್ದಾರೆ.

   ನಾನು ಕಿಂಗ್ ಮೇಕರ್ ಅಲ್ಲ, ನಾನು ಜನರ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಜನರ ದನಿಯಾಗಿದ್ದೇನೆ. ನನಗೆ ಸಂಸದ, ಶಾಸಕನಾಗುವ ಆಸೆಯಿಲ್ಲ ಎಂದಿದ್ದಾರೆ.

   ರೇಷ್ಮಾ ಬಗ್ಗೆ: ವರುಣ್ ಪಟೇಲ್ ಹಾಗೂ ರೇಷ್ಮಾ ಅಗಲಿ ಯಾರು ನಮ್ಮನ್ನು ತೊರೆದರೂ ಹೋರಾಟ ನಿಲ್ಲಲ್ಲ. ಕಾಂಗ್ರೆಸ್ ಪಕ್ಷ ಮೀಸಲಾತಿ ಬಗ್ಗೆ ಹೊಂದಿರುವ ನಿಲುವನ್ನು ಮೆಚ್ಚಿ, ಅವರ ಬೆಂಬಲಕ್ಕೆ ನಿಂತಿದ್ದೇನೆ. ನನಗೆ ಯಾವ ಅಸೆಂಬ್ಲಿ ಟಿಕೆಟ್ ಆಶ್ವಾಸನೆ ಕೊಟ್ಟಿಲ್ಲ ಎಂದು ಭಾವ್ನಗರ್ ನ ಜಾಥಾ ನಂತರ ಹೇಳಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The Patidar leader says the video won’t harm his movement as he describes the Gujarat Assembly Election battle as BJP vs Hardik Patel.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ