Metro: ಟಿಕೆಟ್‌ ಇಲ್ಲದೆ ಮೆಟ್ರೋ ನಿಲ್ದಾಣಕ್ಕೆ ನುಗ್ಗಿದ ಜನ, ವಿಡಿಯೋ ವೈರಲ್‌

ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ನಿಯಂತ್ರಣಕ್ಕಾಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಟೈಟ್‌ ಸೆಕ್ಯುರಿಟಿ ಜೊತೆಗೆ ಸಿಸಿಟಿವಿ ಕ್ಯಾಮೆರಾಗಳೂ ಇವೆ. ಇವುಗಳ ಕಣ್ತಪ್ಪಿಸಿ ಟಿಕೆಟ್‌ ಕೂಡ ಪಡೆಯದೇ ಮೆಟ್ರೋ ನಿಲ್ದಾಣದೊಳಗೆ ಎಂಟ್ರಿ ಕೊಡಬಹುದಾ? ಎನ್ನುವ ಪ್ರಶ್ನೆಯನ್ನು ಮುಂದಿಟ್ಟಿದೆ ಇತ್ತೀಚಿನ ಒಂದು ಘಟನೆ. ಮೆಟ್ರೋ ನಿಲ್ದಾಣಕ್ಕೆ ಟಿಕೆಟ್‌ ಇಲ್ಲದೆ ಯುವಕರ ಗುಂಪೊಂದು ನುಗ್ಗಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಯುವಕರ ಗುಂಪು ಭದ್ರತಾ ನಿಯಮಗಳನ್ನು ಲೆಕ್ಕಿಸದೆ ಮೆಟ್ರೋ ನಿಲ್ದಾಣಕ್ಕೆ ಪ್ರವೇಶ ದ್ವಾರಗಳನ್ನು ದಾಟಿಕೊಂಡು ಬಂದಿದ್ದಾರೆ. ಈ ಘಟನೆ ದೆಹಲಿ ಮೆಟ್ರೊ ನಿಲ್ದಾಣದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಮೆಟ್ರೋ ನಿಲ್ದಾಣದಲ್ಲಿ ಜಾತ್ರೆಯಂತೆ ಜನ ಸೇರಿದ್ದು, ಈ ವೇಳೆ ಅಲ್ಲಿ ಟಿಕೆಟ್‌ ಚೆಕ್‌ ಮಾಡುವ ಯಂತ್ರಗಳ ಮೇಲೆ ಹಾರಿಕೊಂಡು ಯುವಕರ ಗುಂಪು ನಿಲ್ದಾಣದೊಳಕ್ಕೆ ಬಂದಿದೆ.

Video Of Crowd Entering Delhi Metro Without Tickets Goes Viral

ಆದರೆ ಈ ಘಟನೆ ನಡೆದಿರುವುದು ಯಾವಾಗ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ, ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಸಖತ್‌ ವೈರಲ್‌ ಆಗಿದೆ. ಆದರೆ ಹಲವರು ಈ ಘಟನೆ ನಡೆದಿರುವುದು ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಎಂದು ಹೇಳಲಾಗುತ್ತಿದೆ. ಜನರ ಗುಂಪೊಂದು ಏಕಾಏಕಿ ಮೆಟ್ರೋ ನಿಲ್ದಾಣಕ್ಕೆ ನುಗ್ಗಿದೆ. ಅಲ್ಲಿದೆ ಯಾವುದೇ ಟಿಕೆಟ್ ಪಡೆಯದೆ, ಸೆಕ್ಯುರಿಟಿ ಚೆಕ್ ಇಲ್ಲದೇ ಪುಂಡಾಟ ಮೆರೆದಿದ್ದಾರೆ.

ಸಾಮಾನ್ಯವಾಗಿ ಬೆಂಗಳೂರಿನಲ್ಲಿರುವ ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆಗಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಲ್ಲಿ ಟಿಕೆಟ್‌ ತೋರಿಸಿದರಷ್ಟೇ ರೈಲು ಬರುವ ಜಾಗಕ್ಕೆ ಪ್ರವೇಶಿಸಲು ಅವಕಾಶವಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದರೂ ಅಲ್ಲಿ ಅದನ್ನು ಕಂಟ್ರೋಲ್‌ ಮಾಡುವ ವ್ಯವಸ್ಥೆ ಇದೆ. ಹೀಗಾಗಿ ಇಂತಹ ಯಾವುದೇ ಘಟನೆಗಳಿಗೆ ಬೆಂಗಳೂರಿನ ಮೆಟ್ರೋದಲ್ಲಿ ಅವಕಾಶವಿಲ್ಲ. ಆದರೆ, ವೈರಲ್‌ ಆಗಿರುವ ವಿಡಿಯೋದಲ್ಲಿ ಯಾವ ಭದ್ರತಾ ಸಿಬ್ಬಂದಿಯೂ ಕಾಣುತ್ತಿಲ್ಲ. ನಿಲ್ದಾಣದ ತುಂಬೆಲ್ಲ ಪ್ರಯಾಣಿಕರೇ ಇದ್ದಾರೆ.

Video Of Crowd Entering Delhi Metro Without Tickets Goes Viral

ಯಾವುದೇ ಗಲಾಟೆ ನಡೆದಾಗ ಇರುವ ವಾತಾವರಣ ಕಂಡುಬಂದಿದೆ. ವಿಡಿಯೋದಲ್ಲಿ ಮುಸ್ಲಿಂ ಸಮುದಾಯದ ಗುಂಪು ಕೂಡ ಇದ್ದು, ಇವರ ಬಗ್ಗೆ ಹಲವರು ಬೊಟ್ಟು ಮಾಡಿದ್ದಾರೆ. ಯಾವುದೋ ಶುಕ್ರವಾರದಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬರುವಾಗ ಈ ಘಟನೆ ನಡೆದಿದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ವಿಡಿಯೋದಲ್ಲಿ ಕಾಣುವಂತೆ ಬಹುತೇಕರು ಯುವಕರೇ ಆಗಿದ್ದು, ಟಿಕೆಟ್‌ ಚಿಕ್‌ ಇನ್‌ ಯಂತ್ರಗಳ ಮೇಲೆ ಹಾರಿಕೊಂಡು ನಿಲ್ದಾಣದ ಒಳಗೆ ಪ್ರವೇಶಿಸಿದ್ದಾರೆ.

ಬಳಿಕ ಮೆಟ್ರೋ ನಿಲ್ದಾಣದಲ್ಲಿ ಜೋರಾಗಿ ಕೂಗುತ್ತಾ, ಅಲ್ಲಿದ್ದವರಲ್ಲಿ ಆತಂಕ ಕೂಡ ಮೂಡಿಸಿದ್ದಾರೆ. ಮೆಟ್ರೋ ಅನ್ನು ಟಿಕೆಟ್‌ ಇಲ್ಲದೆ ಪ್ರವೇಶಿಸಿದ್ದೇವೆ ಎಂಬ ಖುಷಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹಲವರು ಹಂಚಿಕೊಂಡಿದ್ದು, ಈ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ. ಇಷ್ಟು ಮಂದಿ ಮೆಟ್ರೋ ನಿಲ್ದಾಣಕ್ಕೆ ಬಂದರೂ ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದರು ಎಂದು ಹಲವರು ಪ್ರಶ್ನೆ ಎತ್ತಿದ್ದಾರೆ. ಮೊದಲು ಈ ವಿಡಿಯೋ ಎಲ್ಲಿಯದ್ದು ಎಂಬುದನ್ನು ಪತ್ತೆ ಹಚ್ಚಿ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+