ಕಿಲಾಡಿ ಮಂಗ, ಆಭರಣ ಮಳಿಗೆಯಿಂದ ಹಣ ದೋಚಿತು!

Posted By:
Subscribe to Oneindia Kannada

ಗುಂಟೂರು, ಜೂನ್ 05: ಆಂಧ್ರಪ್ರದೇಶದಲ್ಲಿ ಮಂಗವೊಂದು ಆಭರಣ ಮಳಿಗೆಯಿಂದ ಹಣ ದೋಚಿದ ಘಟನೆ ವರದಿಯಾಗಿದೆ. ಇಲ್ಲಿ ತನಕ ಜನರ ಕೈಯಿಂದ ತಿಂಡಿ, ಬ್ಯಾಗ್ ಕದಿಯುತ್ತಿದ್ದ ಮಂಗ ಈಗ ವೃತ್ತಿಪರ ಕಳ್ಳರ ಸಾಲಿಗೆ ಸೇರಿಕೊಂಡಿದೆ. ಕಿಲಾಡಿ ಮಂಗನ ಕೈಚಳಕವನ್ನು ಸಿಸಿಟಿವಿಯಲ್ಲಿ ನೋಡಿದ ಮಳಿಗೆ ಸಿಬ್ಬಂದಿ ಗಾಬರಿಯಿಂದ ಹೌಹಾರಿದ್ದಾರೆ.

ಆಂಧ್ರಪ್ರದೇಶದ ಗುಂಟೂರಿನ ಪಿಡುಗೂರಾಲದ ಜ್ಯುವೆಲ್ಲರಿ ಅಂಗಡಿಯಲ್ಲಿ ಮಂಗವೊಂದು 10 ಸಾವಿರ ರು ನಗದು ಕದ್ದು ಪರಾರಿಯಾಗಿದೆ. ಗಲ್ಲಾಪೆಟ್ಟಿಗೆ ಬಳಿಗೆ ಬರುವ ಮೊದಲು ಅತ್ತ ಇತ್ತ ನೋಡಿ ಹಣವನ್ನು ಎತ್ತಿಕೊಂಡಿದೆ. ಮಂಗನನ್ನು ತಡೆಯಲು ಹೋದರೂ ಆಗಲಿಲ್ಲ.

ತರಬೇತಿ ಪಡೆದ ಸಾಕಿದ ಕೋತಿಗಳು ಕಳ್ಳತನ ಮಾಡುವ ದೃಶ್ಯಗಳನ್ನು ಸಿನಿಮಾಗಳಲ್ಲಿ ನೋಡಿರಬಹುದು. ಆದರೆ, ನಿಜ ಜೀವನದಲ್ಲಿ ಈ ರೀತಿ ಘಟನೆ ನಡೆದಿರುವುದು ಹಲವರ ಹುಬ್ಬೇರಿಸಿದೆ.


ಮಂಗನ ಕಾಟ ದೇಶದ ಅನೇಕ ಕಡೆ ಕಂಡು ಬರುವುದು ಸರ್ವೇಸಾಮಾನ್ಯ. ಮಂಗನನ್ನು ಹಿಡಿಯಲು ಅಥವಾ ಹೊಡೆಯಲು ಹೋದರೆ ಪ್ರಾಣಿ ದಯಾ ಸಂಘದವರು ತಡೆಯೊಡ್ಡುವ ಪ್ರಕ್ರಿಯೆ ಮುಂದುವರೆಯುತ್ತಾ ಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The monkey entered into the jewelry shop and took away Rs. 10,000 cash from the cash drawer. The staffs present at the shop were shocked to see the incident.
Please Wait while comments are loading...