ಮುಂಬೈ ಲೋಕಲ್ ರೈಲಿನಲ್ಲಿ ಬೆತ್ತಲೆ ಮಲಗಿದ ವ್ಯಕ್ತಿ; ವಿಡಿಯೋ ವೈರಲ್
ಮುಂಬೈ ಜನವರಿ 11: ಮುಂಬೈ ಲೋಕಲ್ ರೈಲಿನಲ್ಲಿ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಮಲಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಡಿದ ಮತ್ತಿನಲ್ಲಿದ್ದ ನಗ್ನ ವ್ಯಕ್ತಿಯೊಬ್ಬ ರೈಲಿನ ಪ್ರವೇಶದ್ವಾರದ ಬಳಿ ನೆಲದ ಮೇಲೆ ಮಲಗಿರುವುದು ಕಂಡುಬಂದಿದೆ. ಒಳ ಉಡುಪನ್ನು ಹೊರತುಪಡಿಸಿ ಮನುಷ್ಯನ ಮೇಲೆ ಯಾವುದೇ ಬಟ್ಟೆ ಇಲ್ಲದೆ ವ್ಯಕ್ತಿ ಮಲಗಿರುವುದು ಕಂಡು ಬಂದಿದೆ. ರೈಲಿನ ಪ್ರಯಾಣಿಕರೊಬ್ಬರು ಈ ವಿಡಿಯೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ರೈಲಿನ ನಂಬರ್ ಕೂಡ ಪ್ರಯಾಣಿಕರು ಹಂಚಿಕೊಂಡಿದ್ದಾರೆ.
ವಿಡಿಯೊವನ್ನು ಇಲ್ಲಿ ವೀಕ್ಷಿಸಿ:
TRAIN NUMBER 90685: चर्चगेट - विरार SLOW
— Ankit Kr Singh (@Ankit9262) January 10, 2023
ये शराबी फुल नशे में
06:40PM भायंदर मैं जो आता है उसी में सोया है विरार स्लो लोकल ट्रेन का वीडियो है@RailMinIndia@WesternRly@rpfwr1 pic.twitter.com/wx5TBCcXbI
ರೈಲಿನಲ್ಲಿ ಆರಾಮವಾಗಿ ಕುಳಿತುಕೊಂಡಿದ್ದ ಕುಡಿದ ವ್ಯಕ್ತಿಯೊಬ್ಬ ತನ್ನ ಬಟ್ಟೆ ಬಿಚ್ಚಿ ನೆಲದ ಮೇಲೆ ಮಲಗಿಕೊಂಡಿದ್ದಾನೆ. ಉಳಿದ ಪ್ರಯಾಣಿಕರು ಆತನಿಗೆ ಮಾತನಾಡಿಸುತ್ತಾರೆ. ಆದರೆ ವಿಪರೀತ ಕುಡಿದ ವ್ಯಕ್ತಿ ಸಹ ಪ್ರಯಾಣಿಕರಿಗೆ ಪ್ರತಿಕ್ರಿಯಿಸಲು ವಿಫಲನಾಗುತ್ತಾನೆ. ಜೊತೆಗೆ ವ್ಯಂಗ್ಯವಾಗಿ ನಗುತ್ತಾನೆ. ಅರೆಬರೆ ಕಣ್ಣು ತೆಗೆದು ಸಹ ಪ್ರಯಾಣಿಕರತ್ತ ನೋಡುತ್ತಾನೆ. ವಿಡಿಯೋವನ್ನು ಟ್ವೀಟ್ ಮಾಡಿರುವ ಪ್ರಯಾಣಿಕರು ರೈಲಿನ ಸಂಖ್ಯೆ 90685 ಮತ್ತು ಸ್ಥಳ-ಭಯಂದರ್ ಎಂದು ನಮೂದಿಸಿದ್ದಾರೆ.

ಪ್ರಯಾಣಿಕರು ಅಧಿಕಾರಿಗಳಿಗೆ ವಿಡಿಯೋ ಟ್ಯಾಗ್ ಮಾಡಿದ್ದಾರೆ. ಇಂತಹ ಘಟನೆಗಳು ಅಪಘಾತಗಳಿಗೆ ಕಾರಣವಾಗುವುದರಿಂದ ಆತಂಕಕ್ಕೆ ಕಾರಣವಾಗಿದೆ ಎಂದು ಘಟನೆಯ ಬಗ್ಗೆ ಪ್ರಯಾಣಿಕರೊಬ್ಬರು ಟ್ವೀಟ್ ಮಾಡಿದ್ದಾರೆ. @Ankit9262 ಅವರು ರೈಲು ಸಂಖ್ಯೆ- 90685 ಮತ್ತು ರೈಲು ಸಮಯ 06:40pm ಅನ್ನು ಉಲ್ಲೇಖಿಸಿದ್ದಾರೆ ಮತ್ತು ರೈಲ್ವೆ ಸಚಿವಾಲಯ ಮತ್ತು ಪಶ್ಚಿಮ ರೈಲ್ವೆಯಂತಹ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿ ರೈಲಿನಿಂದ ಬೀಳುವ ಅಥವಾ ಸಹಪ್ರಯಾಣಿಕನೊಂದಿಗೆ ಜಗಳಕ್ಕೆ ಬೀಳುವ ಸಾಧ್ಯತೆಗಳ ಬಗ್ಗೆ ಎಚ್ಚರಿಸಲಾಗಿದೆ.












Click it and Unblock the Notifications