ವಿಡಿಯೋ: ಮನೆಯಲ್ಲೇ ಹೇರ್ ಕಟ್ ಮಾಡಿಕೊಳ್ಳುವ ಸುಲಭದ ವಿಧಾನ
ಬೆಂಗಳೂರು, ಮೇ 18: ಎರಡು ತಿಂಗಳಿಂದ ಹೇರ್ ಸಲೂನ್ ಇಲ್ಲ ಎಂದು ಶಪಿಸುತ್ತಿದ್ದೀರಾ ಇಲ್ಲಿದೆ ನೋಡಿ ಮನೆಯಲ್ಲಿಯೇ ಹೇರ್ ಕಟ್ ಮಾಡುವ ಸುಲಭ ವಿಧಾನ.
ಯಾರದ್ದೇ ಸಹಾಯವಿಲ್ಲದೆ ಟ್ರಿಮರ್, ಕತ್ತರಿ ಯಾವುದೂ ಇಲ್ಲದೆ ಕೂದಲು ಕಟ್ ಮಾಡಬಹುದಾಗಿದೆ. ದಿನಪತ್ರಿಕೆಯನ್ನು ಕಟ್ ಮಾಡಿ ಕೂದಲು ಬೀಳದ ರೀತಿಯಲ್ಲಿ ಅಂಗಿಯ ರೀತಿ ಮೈಮೇಲೆ ಹಾಕಿಕೊಳ್ಳಿ.
ಒಂದು ಬ್ಲೇಡ್ ತೆಗೆದುಕೊಳ್ಳಿ, ಹಾಗೆ ಒಂದು ಬಾಚಣಿಗೆ ಹಾಗೂ ಕ್ಲಿಪ್ ಸಹಾಯದಿಂದ ಕೂದಲು ಕಟ್ ಮಾಡಿಕೊಳ್ಳಬಹುದು. ಅನೂಪ್ ಖಾಪ್ಲೆ ಎನ್ನುವವರು ಈ ವಿಡಿಯೋ ಮಾಡಿದ್ದಾರೆ.
This is some next level jugaad 💇🏽♂️ pic.twitter.com/koNq5DildI
— Anup Kaphle (@AnupKaphle) May 17, 2020

ಆದರೆ ಬ್ಲೇಡ್ ತುಂಬಾ ಹರಿತವಾಗಿರುವುದರಿಂದ ಕಿವಿಯ ಬಳಿ ಕೂದಲು ಕಟ್ ಮಾಡುವಾಗ ಜಾಗ್ರತೆ ವಹಿಸಬೇಕಾಗಿದೆ. ಸುಲಭವಾಗಿ ಕೂದಲು ಕಟ್ ಮಾಡುವ ವಿಧಾನವನ್ನು ವಿಡಿಯೋ ನೋಡಿ ಕಲಿತುಕೊಳ್ಳಿ.












Click it and Unblock the Notifications