ಚುಮ್ಮಾ ದೇ ಎಂದು ಹಾವಿಗೆ ಮುತ್ತು ಕೊಡಲು ಹೋದ: ಮುಂದೇನಾಯ್ತು ಗೊತ್ತಾ?

ಶಿವಮೊಗ್ಗ ಅಕ್ಟೋಬರ್ 03: ಸಮ್ಮನೆ ಇದ್ದ ಹಾವಿಗೆ ಕೆಣಕೋದು ಅಂದ್ರೆ ಇದೇ ಇರಬೇಕು. ಇಲ್ಲೊಬ್ಬ ವ್ಯಕ್ತಿ ಹಾವಿಗೆ ಮುತ್ತುಕೊಡಲು ಹೋಗಿ ಕಚ್ಚಿಸಿಕೊಂಡಿದ್ದಾನೆ. ಹಾವು ಕಚ್ಚಿದ ರೀತಿ ನೋಡಿದರೆ ವ್ಯಕ್ತಿ ಬೇರೆ ಯಾರಿಗಾದರು ಮುತ್ತು ಕೊಡುವಂತೆ ಕೇಳಲು ಯೋಚಿಸಬೇಕು. ಹಾವು ವ್ಯಕ್ತಿಯ ತುಟಿಗೆ ಕಚ್ಚಿದೆ. ನಾಗರ ಹಾವು ಹಚ್ಚಿದ ಕೂಡಲೇ ವ್ಯಕ್ತಿ ತುಟಿಯಿಂದ ರಕ್ತ ಸುರಿಯಲಾರಂಬಿಸಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.

ಶಿವಮೊಗ್ಗದಿಂದ ಆಘಾತಕಾರಿ ವಿಡಿಯೋವೊಂದು ಬಹಿರಂಗಗೊಂಡಿದೆ. ಇಲ್ಲಿ ವ್ಯಕ್ತಿಯೊಬ್ಬ ನಾಗರ ಹಾವಿಗೆ ಚುಂಬಿಸಲು ಹೋಗಿ ಕಚ್ಚಿಸಿಕೊಂಡಿದ್ದಾನೆ. ವ್ಯಕ್ತಿಯು ನಾಗರಹಾವಿಗೆ ಚುಂಬಿಸಲು ಪ್ರಾರಂಭಿಸಿದ ತಕ್ಷಣ, ನಾಗರಹಾವು ಅವನ ತುಟಿಗಳಿಗೆ ಕಚ್ಚಿದೆ. ನಾಗರಹಾವು ಕಚ್ಚಿದ ತಕ್ಷಣ ತುಟಿಗಳಿಂದ ರಕ್ತಸ್ರಾವವಾಗತೊಡಗಿದೆ. ಆತನ ಆರೋಗ್ಯವೂ ಹದಗೆಡಲಾರಂಭಿಸಿದೆ. ಈ ಘಟನೆಯ ವಿಡಿಯೋ ಮಾಡುತ್ತಿದ್ದ ಹಾಗೂ ಅದನ್ನು ನೋಡಲು ನೆರೆದಿದ್ದವರು ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.

Video: Cobra bit a man who went for a kiss

ಅಲೆಕ್ಸ್ ಎಂಬ ವ್ಯಕ್ತಿ ನಾಗರಹಾವಿಗೆ ಮುತ್ತುಕೊಡಲು ಹೋದವರು. ಬಳಿಕ ಆತನನ್ನು ತಕ್ಷಣವೇ ಮೆಕ್‌ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ವೈದ್ಯರು ಅವರಿಗೆ ಚಿಕಿತ್ಸೆ ನೀಡಿದ್ದು, ಬಳಿಕ ಅಲೆಕ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಇದ್ದಿದ್ದರೆ ಯುವಕನ ಪ್ರಾಣವೂ ಹೋಗುವ ಸಾಧ್ಯತೆ ಇತ್ತು ಎನ್ನುತ್ತಾರೆ ವೈದ್ಯರು.

ಮದುವೆ ಮನೆಯಲ್ಲಿ ಎರಡು ನಾಗರ ಹಾವುಗಳು ಕಾಣಿಸಿಕೊಂಡಿದ್ದ ಪರಿಣಾಮ ಅಲೆಕ್ಸ್ ಮತ್ತು ರೋನಿ ಎಂಬ ಇಬ್ಬರು ಯುವಕರಿಗೆ ಕರೆ ಮಾಡಲಾಗಿತ್ತು. ಅಲೆಕ್ಸ್ ಮತ್ತು ರೋನಿ ಎಂಬ ಇಬ್ಬರು ಯುವಕರು ಶಿವಮೊಗ್ಗದಲ್ಲಿ ಹಾವುಗಳ ರಕ್ಷಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಯುವಕರು ವಸತಿ ಪ್ರದೇಶಗಳಿಂದ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುತ್ತಾರೆ. ಇತ್ತೀಚೆಗಷ್ಟೇ ಮದುವೆ ಮನೆಯಲ್ಲಿ ಎರಡು ನಾಗರ ಹಾವು ಕಾಣಿಸಿಕೊಂಡಿರುವ ಮಾಹಿತಿ ಅಲೆಕ್ಸ್ ಗೆ ಬಂದಿತ್ತು. ಅಲೆಕ್ಸ್ ಅವರು ರೋಮಿ ಅವರೊಂದಿಗೆ ಸ್ಥಳಕ್ಕಾಗಮಿಸಿ ಹಾವುಗಳನ್ನು ಹಿಡಿದರು.

Video: Cobra bit a man who went for a kiss

ಅಲೆಕ್ಸ್ ನಾಗರಹಾವನ್ನು ಹಿಡಿದ ನಂತರ, ಅವನು ಅದರೊಂದಿಗೆ ಆಟವಾಡಲು ಪ್ರಾರಂಭಿಸಿದನು. ಅಲೆಕ್ಸ್ ಆಟದಲ್ಲಿಯೇ ನಾಗರಹಾವಿಗೆ ಚುಂಬಿಸಲು ಪ್ರಾರಂಭಿಸಿದನು, ಆಗ ನಾಗರಹಾವು ಅವನ ತುಟಿಗಳಿಗೆ ಕಚ್ಚಿದೆ. ನಾಗರಹಾವು ಕಚ್ಚಿದ ತಕ್ಷಣ ಅಲೆಕ್ಸ್‌ನ ತುಟಿಗಳು ರಕ್ತಸ್ರಾವವಾಗತೊಡಗಿದವು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದ ಪರಿಣಾಮ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+