Vande Bharat Sleeper Express: ವಂದೇ ಭಾರತ್ ಸ್ಲೀಪರ್ ರೈಲು ಕಾರ್ಯಾಚರಣೆಗೆ ಸಜ್ಜು, ಟಿಕೆಟ್ ದರ, ವೇಳಾಪಟ್ಟಿ
Sleeper Vande Bharat Express: ಭಾರತೀಯ ರೈಲ್ವೆ ಇಲಾಖೆಯು ದೇಶದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲು (Vande Bharat Express Sleeper Train) ಕಾರ್ಯಾಚರಣೆ ಆರಂಭಕ್ಕೆ ಸಜ್ಜಾಗಿದೆ. ಇದು ವಂದೇ ಭಾರತ್ ರೈಲಿನ ರೂಪಾಂತರದ ರೈಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಿಂದ ಪಾಟ್ನಾ ನಗರದವರೆಗೆ ತನ್ನ ಮೊದಲ ಸೇವೆ ನೀಡುವ ಬಗ್ಗೆ ಇಲಾಖೆ ಅಪ್ಡೇಟ್ ನೀಡಿದೆ.
ಬಹುದೂರದ ಪ್ರಯಾಣದ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾದ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲು ದೆಹಲಿ ಮತ್ತು ಪಾಟ್ನಾ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಕನಿಷ್ಠ ಪ್ರಯಾಣದ ಸಮಯದಲ್ಲಿ ಸಾರ್ವಜನಿಕರಿಗೆ ಆರಾಮದಾಯಕ ಮತ್ತು ಸುಗಮ ಪ್ರಯಾಣ ಖಚಿತಪಡಿಸುತ್ತದೆ. ದೂರದ ಗಮ್ಯಸ್ಥಾನ ತಲುಪಲು ಪ್ರಯಾಣಿಕರಿಗೆ ಕಡಿಮೆ ಸಮಯದಲ್ಲಿ ಐಶಾರಾಮಿ ಅನುಭವ ಸಹಿತ ಉತ್ತಮ ಸೇವೆ ಒದಗಿಸಲಿದೆ ಎಂದು ಇಲಾಖೆ ತಿಳಿಸಿದೆ. ನೈಟ್ ಟ್ರಾವೆಲ್ ಇಷ್ಟಪಡುವವರಿಗೆ ಈ ರೈಲು ಸೂಕ್ತ ಎನಿಸುತ್ತದೆ.

ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ವಿವರ
ಇತರ ರೈಲುಗಳಿಗಿಂತ ಈ ದೆಹಲಿ-ಪಾಟ್ನಾ ಸ್ಲೀಪರ್ ವಂದೇ ಭಾರತ್ ರೈಲು ಆಧುನಿಕ ವ್ಯವಸ್ಥೆ ಹೊಂದಿದೆ. ಅತೀ ಕಡಿಮೆ ಸಮಯದಲ್ಲಿ 1000 ಕಿ.ಮೀ ದೂರದ ರಾತ್ರಿ ಪ್ರಯಾಣವನ್ನು ಕ್ರಮಿಸುತ್ತದೆ. ಕೇವಲ 08 ಗಂಟೆಗಲ್ಲಿ ಗಮ್ಯಸ್ಥಾನ ತಲುಪುತ್ತದೆ. ಈ ವೇಳೆ ರೈಲಿನ ವೇಗ ಪ್ರತಿ ಗಂಟೆಗೆ ಗರಿಷ್ಠ 160 ಕಿಲೋ ಮೀಟರ್ ಇರಲಿದೆ. ವಾರದಲ್ಲಿ ಏಳು ದಿನಗಳಲ್ಲಿ ಆರು ದಿನ ಕಾರ್ಯಾಚರಣೆ ಮಾಡಲಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.
ಟಿಕೆಟ್ ದರ, ರೈಲು ಸೇವೆ ಆರಂಭ ದಿನಾಂಕ?
ಪಾಟ್ನಾ-ದೆಹಲಿ ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಟಿಕೆಟ್ ದರದ ಬಗ್ಗೆ ಅಧಿಕೃತ ಮಾಹಿತಿ ತಿಳಿಸಬೇಕಿದೆ. ಒಂದು ಅಂದಾಜಿನ ಪ್ರಕಾರ ಫಸ್ಟ್ ಕ್ಲಾಸ್ ಎಸಿ ಕೋಚ್ ಟಿಕೆಟ್ ದರ ಅಂದಾಜು 2000-3000 ರೂಪಾಯಿ ನಿಗದಿ ಆಗಬಹುದು. 16 ಬೋಗಿಗಳು ಈ ರೈಲು ಸಂಚಾರ 2026 ಜನವರಿ ಆರಂಭದಲ್ಲಿ ಶುರುವಾಗಬಹುದು ಎಂದು ಹೇಳಲಾಗುತ್ತಿದೆ. ಇದು ನಿಜವಾದಲ್ಲಿ ರೈಲ್ವೆ ಇಲಾಖೆ ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟಂತಾಗುತ್ತದೆ.
ಸ್ಲೀಪರ್ ವಂದೇ ಭಾರತ್ ರೈಲಿನ ವೈಶಿಷ್ಟ್ಯತೆಗಳು
ದೇಶದ ಮೊದಲ ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅತ್ಯುತ್ತಮ ದರ್ಜೆಯ ಮೂಲ ಸೌಕರ್ಯಗಳನ್ನು ಒಳಗೊಂಡಿದೆ. ಉತ್ತಮ ಅನುಭವ ನೀವು ಸ್ಲೀಪರ್ ಬರ್ತ್‌ಗಳು, ಆಧುನಿಕ ರೀತಿಯಲ್ಲಿ ವಿನ್ಯಾಸ ಮಾಡಿದ ಒಳಾಂಗಣ, ಆಟೋ ಸೆನ್ಸರ್‌ಗಳೊಂದಿಗೆ ಬಾಗಿಲು ಕೆಲಸ ಮಾಡುತ್ತವೆ. ಬಯೋ-ಡೈಜೆಸ್ಟರ್ ಶೌಚಾಲಯಗಳು, ಸೂಕ್ತ ಬೆಳಕು ನೀಡುವ ಕಿಟಕಿಗಳ ವ್ಯವಸ್ಥೆ ಇದೆ. ಇದೆಲ್ಲ ಕಾರಣದಿಂದ ಪ್ರಯಾಣಿಕರಿಗೆ ಈ ರೈಲು ವಿಶೇಷ ಅನ್ನಿಸುತ್ತದೆ.
ರೈಲಿನಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಇದೆ. ರೈಲಿನ ಕಾರ್ಯ ದಕ್ಷತೆ, ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿರುವ ರೈಲ್ವೆ ಅಧಿಕಾರಿಗಳು ದೀರ್ಘ ಪ್ರಯಾಣದ ಜನರಿಗೆ ಇದೊಂದು ಉತ್ತಮ ಆಯ್ಕೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೆಹಲಿ-ಪಾಟ್ನಾ ಮಾರ್ಗದಲ್ಲಿ ಸೇವೆ ಆರಂಭಿಸಿದ ಬಳಿಕ ಭವಿಷ್ಯದಲ್ಲಿ ಇತರ ಮಾರ್ಗಗಳಲ್ಲೂ ಈ ರೈಲಿನ ಸೇವೆ ನಿರೀಕ್ಷಿಸಬಹುದಾಗಿದೆ.












Click it and Unblock the Notifications