Vande Bharat Express: ಶೀಘ್ರದಲ್ಲೇ ಎರಡು ಹೊಸ ವಂದೇ ಭಾರತ್ ರೈಲುಗಳ ಕಾರ್ಯಾಚರಣೆ- ಮಾರ್ಗ, ಸಮಯ, ವಿವರ
Vande Bharat Express: ಇತ್ತೀಚಿನ ದಿನಗಳಲ್ಲಿ ವಂದೇ ಭಾರತ್ ರೈಲುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಶೀಘ್ರದಲ್ಲೇ ಎರಡು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ. ಎರಡನೆಯದು ಕೊಲ್ಲಾಪುರದಿಂದ ಮುಂಬೈಗೆ ಸಂಚರಿಸಲಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್
ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ (ಐಸಿಎಫ್) ನಿರ್ಮಿಸಲ್ಪಟ್ಟಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಭಾರತೀಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 75 ನೇ ಗಣರಾಜ್ಯೋತ್ಸವದಂದು ನೌಕರರನ್ನು ಉದ್ದೇಶಿಸಿ ಮಾತನಾಡಿದ ಜನರಲ್ ಮ್ಯಾನೇಜರ್ ಬಿಜಿ ಮಲ್ಯ, 'ಐಸಿಎಫ್ ಎರಡು ಪ್ರಮುಖ ಯೋಜನೆಗಳನ್ನು ಹೊಂದಿದೆ. ಮೊದಲನೆಯದು ವಂದೇ ಮೆಟ್ರೋ ಯೋಜನೆಯಾಗಿದ್ದು, ಇದು ಸಂಪೂರ್ಣ ಹವಾನಿಯಂತ್ರಿತ ಇಂಟರ್-ಸಿಟಿ ರೈಲು ಸೇವೆಯಾಗಿದೆ. ಎರಡನೆಯದು ಈ ವರ್ಷದ ಮಾರ್ಚ್ ವೇಳೆಗೆ ವಂದೇ ಮೆಟ್ರೋದ ಮೊದಲ ಮಾದರಿಯನ್ನು ಹೊರತರುತ್ತಿದೆ' ಎಂದು ಹೇಳಿದ್ದಾರೆ.

ಯೋಜನೆಯು ಪ್ರಾಥಮಿಕ ಹಂತದಲ್ಲಿರುವುದರಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗ ಮತ್ತು ಸಮಯವನ್ನು ಇನ್ನೂ ನಿಗದಿಪಡಿಸಲಾಗಿಲ್ಲ. ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಸೂಕ್ತ ಮಾರ್ಪಾಡುಗಳೊಂದಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಹೊರತರಲಾಗುವುದು ಎಂದು ಅವರು ಹೇಳದ್ದಾರೆ. ಪೂರೈಕೆ ಪ್ರಕ್ರಿಯೆಯಲ್ಲಿನ ಹಲವಾರು ತೊಂದರೆಗಳ ಹೊರತಾಗಿಯೂ, ಐಸಿಎಫ್ ಕಳೆದ ವರ್ಷ 50 ನೇ ವಂದೇ ಭಾರತ್ ರೈಲುಗಳನ್ನು ತಯಾರಿಸಿದೆ. ಇದು ಗಮನಾರ್ಹ ಸಾಧನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೊಲ್ಲಾಪುರದಿಂದ ಮುಂಬೈ ವಂದೇ ಭಾರತ್ ರೈಲು: ವಿವರಗಳು
ಕಳೆದ ವಾರ, ಮಹಾರಾಷ್ಟ್ರ ರಾಜ್ಯ ರೈಲ್ವೇ ಸಚಿವ ರಾವ್ಸಾಹೇಬ್ ದಾನ್ವೆ ಅವರು ಕೊಲ್ಲಾಪುರದಿಂದ ಮುಂಬೈಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. ಇದಕ್ಕೂ ಮೊದಲು, ಕೊಲ್ಹಾಪುರದಿಂದ ಮುಂಬೈ ಮಾರ್ಗವಾಗಿ ಚಲಿಸುವ ಹೊಸ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್ (ಎಲ್‌ಹೆಚ್‌ಬಿ ಕೋಚ್) ರೈಲು ಸೇವೆಯನ್ನು ದನ್ವೆ ಅವರು ಉದ್ಘಾಟಿಸಿದರು. ಮುಂಬೈನಿಂದ ಆಡಿಯೋ ದೃಶ್ಯ ಮಾಧ್ಯಮದ ಮೂಲಕ ಹಸಿರು ಬಾವುಟ ತೋರಿಸಿದರು. ಹೆಚ್ಚಿನ ವಿವರಗಳನ್ನು ನೀಡಿದ ದನ್ವೆ ಅವರು, ಹಟಕನಂಗಲೆಯಿಂದ ಇಚಲಕರಂಜಿವರೆಗಿನ ಎಂಟು ಕಿಲೋಮೀಟರ್ ರಸ್ತೆ ಸಮೀಕ್ಷೆಗೆ ಡಿಪಿಆರ್ ಸಿದ್ಧಪಡಿಸಿದ್ದು, ಸಮೀಕ್ಷಾ ಕಾರ್ಯವೂ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೊಲ್ಹಾಪುರದಿಂದ ಮುಂಬೈಗೆ ಪ್ರಾರಂಭವಾಗುವ ಮಾರ್ಗ ಮತ್ತು ಸಮಯವನ್ನು ಇನ್ನೂ ನಿಗದಿಪಡಿಸಲಾಗಿಲ್ಲ. ಏಕೆಂದರೆ ಯೋಜನೆಯು ಪ್ರಾಥಮಿಕ ಹಂತದಲ್ಲಿದೆ ಮತ್ತು ಸಮೀಕ್ಷೆಯ ನಂತರ ಎಲ್ಲವೂ ಸ್ಪಷ್ಟವಾಗಲಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು
ಭಾರತೀಯ ರೈಲ್ವೆಯಿಂದ ನಿರ್ವಹಿಸಲ್ಪಡುವ ವಂದೇ ಭಾರತ್ ಎಕ್ಸ್‌ಪ್ರೆಸ್ ಅರೆ-ಹೈ-ಸ್ಪೀಡ್ ಮಧ್ಯಮ-ದೂರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸೇವೆಯಾಗಿದ್ದು, ಇದು ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿದೆ. ಈ ರೈಲು ಹವಾನಿಯಂತ್ರಿತ ಚೇರ್ ಕಾರ್ ಸೇವೆಯಾಗಿದ್ದು, 800 ಕಿಮೀ (500 ಮೈಲಿ) ಗಿಂತ ಕಡಿಮೆ ಅಂತರದಲ್ಲಿರುವ ಅಥವಾ ಅಸ್ತಿತ್ವದಲ್ಲಿರುವ ಸೇವೆಗಳೊಂದಿಗೆ ಪ್ರಯಾಣಿಸಲು ಹತ್ತು ಗಂಟೆಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುವ ನಗರಗಳನ್ನು ಸಂಪರ್ಕಿಸುತ್ತದೆ. ಮೊದಲ ರೈಲನ್ನು 15 ಫೆಬ್ರವರಿ 2019 ರಂದು ಉದ್ಘಾಟಿಸಲಾಯಿತು.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಎಂಟು ಅಥವಾ ಹದಿನಾರು ಕೋಚ್‌ಗಳನ್ನು ಹೊಂದಿರುವ ಸ್ವಯಂ ಚಾಲಿತ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್‌ಗಳಾಗಿವೆ. ಈ ರೈಲುಗಳನ್ನು ರಿಸರ್ಚ್ ಡಿಸೈನ್ ಮತ್ತು ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ ವಿನ್ಯಾಸಗೊಳಿಸಿದೆ. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ ಇವುಗಳು ತಯಾರಿಸಲ್ಪಟ್ಟಿದೆ.












Click it and Unblock the Notifications