Vande Bharat Express: ದೇಶದಲ್ಲಿ ವಂದೇ ಭಾರತ್ ರೈಲಿನ ಹವಾ: ಪ್ರಯಾಣಿಕರ ಸಂಖ್ಯೆ ಶೇ.34ರಷ್ಟು ಏರಿಕೆ

ನವದೆಹಲಿ: ಭಾರತೀಯ ರೈಲ್ವೆ ವ್ಯಾಪ್ತಿಯಲ್ಲಿ ಕ್ರಾಂತಿ ಸೃಷ್ಟಿಸಿದ ವಂದೇ ಭಾರತ್ ರೈಲುಗಳಿಗೆ (Vande Bharat Express Train) ಬೇಡಿಕೆ ಹೆಚ್ಚಾಗಿದೆ. ರೈಲ್ವೆ ಇಲಾಖೆ ಈಗಾಗಲೇ ಹೊಸ ಮಾರ್ಗ, ರೈಲು ಹಳಿ ಡಬ್ಲಿಂಗ್, ಬೋಗಿಗಳ ಹೆಚ್ಚಳ ಸೇರಿ ಇನ್ನಿತರ ಮೂಲಸೌಕರ್ಯ ಸುಧಾರಿಸುತ್ತಿದೆ. ಇದರ ನಡುವೆ ವೇಗದ ಹಾಗೂ ಐಶಾರಾಮಿ ಮತ್ತು ಆರಾಮದಾಯಕ ಅನುಭವ ನೀಡುವ ವಂದೇ ಭಾರತ್ ಮೆಲಿನ ಪ್ರಯಾಣಿಕರ ಅವಲಂಬನೆ ಹೆಚ್ಚಾಗಿದೆ. ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈ ಮೂಲದ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ತಯಾರಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಆಧುನಿಕ ಕೋಚ್‌ಗಳು, ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಹೊಂದಿವೆ. ಹೀಗಾಗಿಯೇ ಜನರು ಇದಕ್ಕೆ ಮಾರು ಹೋಗಿದ್ದಾರೆ. 2025-26ನೇ ಹಣಕಾಸು ವರ್ಷದಲ್ಲಿ, ವಂದೇ ಭಾರತ್ ಎಕ್ಸ್‌ಪ್ರೆಸ್ ವರ್ಷದಿಂದ ವರ್ಷಕ್ಕೆ ಸುಮಾರು ಶೇ. 34 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. 2025-2026ರಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕರ ಸಂಖ್ಯೆ ಸುಮಾರು 3.98 ಕೋಟಿಗೆ ಏರಿದೆ. ಈ ಹಿಂದಿನ 2024-25ನೇ ಹಣಕಾಸು ವರ್ಷದಲ್ಲಿ ಇದರ ಸಂಖ್ಯೆ 2.97 ಕೋಟಿಯಷ್ಟಿತ್ತು.

Vande Bharat Express

ಭಾರತದ ವಂದೇ ಭಾರತ್ ರೈಲುಗಳೆಷ್ಟು? 9.1 ಕೋಟಿ ಪ್ರಯಾಣಿಕರು!

ಹೆಚ್ಚುತ್ತಿರುವ ಈ ಪ್ರಯಾಣಿಕರ ಸಂಖ್ಯೆ ಕೇವಲ ಒಂದು ರಾಜ್ಯ, ಒಂದೆರಡು ಮಾರ್ಗದಲ್ಲಿ ಏರಿಕೆ ಆಗಿದ್ದಲ್ಲ. ದೇಶಾದ್ಯಂತ ಇರುವ ಎಲ್ಲ ವಂದೇ ಭಾರತ್ ರೈಲುಗಳಲ್ಲಿ ಹೆಚ್ಚಾಗಿರುವುದಾಗಿದೆ. ಸದ್ಯ ದೇಶದಲ್ಲಿ ಒಟ್ಟು 162 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ನಿತ್ಯ ಅನೇಕ ಮಾರ್ಗಗಳಲ್ಲಿ ಸಂಚಾರ ಮಾಡುತ್ತಿವೆ. ರೈಲ್ವೆ ಸಚಿವಾಲಯವೇ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭವಾದಾಗಿನಿಂದ 1 ಲಕ್ಷಕ್ಕೂ ಹೆಚ್ಚು ಟ್ರಿಪ್‌ಗಳಲ್ಲಿ 9.1 ಕೋಟಿಗೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ತಿಳಿಸಿದೆ.

ವಂದೇ ಭಾರತ್ ರೈಲಿನ ಟ್ರಾಫಿಕ್ ರೂಟ್ ಇದು

ಭಾರತೀಯ ರೈಲ್ವೆ ಇಲಾಖೆಯು ವೇಗದ ಹಾಗೂ ಸುರಕ್ಷಿತ, ಆರಾಮದಾಯಕ ಅನುಭವ ನೀಡುವ ಈ ವಂದೇ ಭಾರತ್ ರೈಲನ್ನು 2019ರಲ್ಲಿ ಪರಿಚಯಿಸಿತು. ನವದೆಹಲಿ-ವಾರಣಾಸಿ ಮಧ್ಯೆ ಮೊದಲ ವಂದೇ ಭಾರತ್ ರೈಲು ಸಂಚಾರವನ್ನು 2019ರ ಫೆಬ್ರವರಿ ಆರಂಭಿಸಿತ್ತು. ಈ ಮಾರ್ಗವು ಅತ್ಯಂತ ಜನದಟ್ಟಣೆಯ ಮಾರ್ಗವಾಗಿದ್ದು, ಈ ರೈಲಿನಲ್ಲಿನ ಜನರು ಹೆಚ್ಚಾಗಿ ತುಂಬಿರುತ್ತಾರೆ ಎನ್ನಲಾಗಿದೆ. ಸದರಿ ಮಾರ್ಗದ ವಂದೇ ಭಾರತ್ ರೈಲಿನಲ್ಲಿ 2026ರವರೆಗೆ 73 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಸಂಚರಿಸಿದ್ದಾರೆಂದು ಇಲಾಖೆ ಅಧಿಕೃತ ಅಂಕಿ ಸಂಖ್ಯೆ ನೀಡಿದೆ.

ಕೇವಲ ಒಂದು ಮಾರ್ಗದಲ್ಲಿ ಇಷ್ಟೊಂದು ಜನರೆಂದರೆ ಇನ್ನೂ ಕರ್ನಾಟಕ ಸೇರಿದಂತೆ ದೇಶಾದ್ಯಂತ 162 ವಂದೇ ಭಾರತ್ ರೈಲುಗಳಲ್ಲಿ ಎಷ್ಟು ಕೋಟ್ಯಾಂತರ ಜನ ಸಂಚರಿಸಿದ್ದಾರೆ. ಇದೆಲ್ಲ ನೋಡಿದರೆ ವರ್ಷದಿಂದ ವರ್ಷಕ್ಕೆ ಸಾಮಾನ್ಯ, ಎಕ್ಸ್‌ಪ್ರೆಸ್ ರೈಲುಗಳ ರೀತಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+