ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ: ಉತ್ತರಾಖಂಡ ಸಚಿವರ ಪುತ್ರ ನಿಧನ

ಬರೇಲಿ, ಜೂನ್ 26: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಫರಿದ್ಬುರದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಉತ್ತರಾಖಂಡದ ಸಚಿವರೊಬ್ಬರ ಪುತ್ರ ಅಸುನೀಗಿದ್ದಾರೆ.

ಉತ್ತರಾಖಂಡದ ಸಚಿವ ಅರವಿಂದ್ ಪಾಂಡೆ ಅವರ ಪುತ್ರ ಅಂಕುರ್ ಪಾಂಡೆ ಮೃತ ದುರ್ದೈವಿ.

Uttarkhand minister Arvind Pandeys son dies in an accident

ರಾಷ್ಟ್ರೀಯ ಹೆದ್ದಾರಿ 24 ರಲ್ಲಿ ಅಂಕುರ್ ಪಾಂಡೆ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಟ್ರಕ್ ವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಘಟನೆಯಲ್ಲಿ ಮತ್ತಿಬ್ಬರು ಮೃತರಾಗಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಮದುವೆ ಮನೆಗೆಂದು ಗೋರಖ್ಪುರಕ್ಕೆ ಸ್ನೇಹಿತರೆಲ್ಲ ತೆರಳುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ.

ಬಿಜೆಪಿ ಶಾಸಕ ಅರವಿಂದ್ ಪಾಂಡೆ ಉತ್ತರಾಖಂಡ ಸರ್ಕಾರದಲ್ಲಿ ಶಿಕ್ಷಣ, ಸಂಸ್ಕೃತ ಶಿಕ್ಷಣ, ಕ್ರೀಡೆ, ಯುವಜನ ಕಲ್ಯಾಣ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದು, ಮೃತ ಅಂಕುರ್ ಪಾಂಡೆ ಅರವಿಂದ್ ಅವರ ಪುತ್ರರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+