ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಕಾಶಿ ಹಿಮಕುಸಿತ: ಕರ್ನಾಟಕದ ವ್ಯಕ್ತಿಯೂ ಸೇರಿ ಕಾಣೆಯಾದವರ ಪಟ್ಟಿ ಇಲ್ಲಿದೆ

|
Google Oneindia Kannada News

ಉತ್ತರಕಾಶಿ ಅಕ್ಟೋಬರ್ 5: ಉತ್ತರಾಖಂಡದ ಉತ್ತರಕಾಶಿಯ ದ್ರೌಪದಿಯ ದಂಡ - 2 ಶಿಖರದಲ್ಲಿ ಮಂಗಳವಾರ ಹಿಮಪಾತ ಸಂಭವಿಸಿ ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ (ಎನ್‌ಐಎಂ) ನ ಕನಿಷ್ಠ 10 ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ. ಸಿಕ್ಕಿಬಿದ್ದ 29 ಪರ್ವತಾರೋಹಿಗಳ ಪೈಕಿ ಎಂಟು ಮಂದಿಯನ್ನು ರಕ್ಷಿಸಲಾಗಿದ್ದು, ಉಳಿದವರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆಯುತ್ತಿದೆ.

ತರಬೇತಿ ಪರ್ವತಾರೋಹಿಗಳ 34 ಜನರ ತಂಡ ಮತ್ತು ಇನ್‌ಸ್ಟಿಟ್ಯೂಟ್‌ನ ಏಳು ಮಾರ್ಗದರ್ಶಕರು ಹಿಂತಿರುಗುತ್ತಿದ್ದಾಗ ಹಿಮಪಾತದಲ್ಲಿ ಸಿಲುಕಿಕೊಂಡರು ಎಂದು NIM ಪ್ರಿನ್ಸಿಪಾಲ್ ಕರ್ನಲ್ ಅಮಿತ್ ಬಿಶ್ತ್ ಹೇಳಿದ್ದಾರೆ. ಮಂಗಳವಾರ ಮುಂಜಾನೆ 4 ಗಂಟೆ ಸುಮಾರಿಗೆ ಶಿಖರವನ್ನು ತಲುಪಿದ ಅವರು ಹಿಂತಿರುಗುತ್ತಿದ್ದಾಗ 8.45ರ ಸುಮಾರಿಗೆ ಹಿಮಕುಸಿತಕ್ಕೆ ಸಿಲುಕಿದರು. ನಾಪತ್ತೆಯಾದವರ ಪತ್ತೆಗಾಗಿ ದ್ರೌಪದಿಯ ದಂಡ-II ಪರ್ವತ ಶಿಖರದಲ್ಲಿ ಹುಡುಕಾಟ ನಡೆಸುತ್ತಿರುವ ಉತ್ತರಾಖಂಡ್ ಪೊಲೀಸರು ನೆಹರು ಪರ್ವತಾರೋಹಣ ಸಂಸ್ಥೆಯ ಪರ್ವತಾರೋಹಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಹಿಮಕುಸಿತದಿಂದ ಕಾಣೆಯಾದವರ ಪಟ್ಟಿ-

ಹಿಮಕುಸಿತದಿಂದ ಕಾಣೆಯಾದವರ ಪಟ್ಟಿ-

ಸೌರವ್ ಬಿಸ್ವಾಸ್- ಪಶ್ಚಿಮ ಬಂಗಾಳ

ಶುಭಂ ಸಂಗ್ರಿ- ಉತ್ತರಾಖಂಡ

ದೆಹಲಿಯಿಂದ ಅತಾನು ಧಾರ್

ನರೇಂದ್ರ ಸಿಂಗ್-ಉತ್ತರಾಖಂಡ

ಅಮಿತ್ ಕುಮನ್ ಶಾ-ಪಶ್ಚಿಮ ಬಂಗಾಳ

ವಂಶೀದರ್ ರೆಡ್ಡಿ-ತೆಲಂಗಾಣ

ವಿಕ್ರಮ್ ರಾಮನ್- ತಮಿಳುನಾಡು

ವಿಕ್ರಮ್ ಎಂ-ಕರ್ನಾಟಕ

ದೀಪಶಿಖಾ ಹಜಾರಿಕಾ-ಅಸ್ಸಾಂ

ರಜತ್ ಸಿಂಘಾಲ್-ಹರಿಯಾಣ

ಸಂದೀಪ್ ಸರ್ಕಾರ್-ಪಶ್ಚಿಮ ಬಂಗಾಳ

ಸಿದ್ಧಾರ್ಥ್ ಖಂಡೂರಿ-ಉತ್ತರಾಖಂಡ

ಗೋಹಿಲ್ ಅರ್ಜುನ್ ಸಿಂಗ್ ಭೂಪೇಂದ್ರ-ಗುಜರಾತ್

ಸತೀಶ್ ರಾವತ್-ಉತ್ತರಾಖಂಡ

ಲೆಫ್ಟಿನೆಂಟ್ ಕರ್ನಲ್ ದೀಪಕ್ ವಶಿಷ್ಠ-ಹಿಮಾಚಲ ಪ್ರದೇಶ

ಶಿವಂ ಕೈಂಥಿಯಾ-ಹಿಮಾಚಲ ಪ್ರದೇಶ

ಅನ್ಶುಲ್ ಕೈಂಥಿಯಾ- ಹಿಮಾಚಲ ಪ್ರದೇಶ

ಟಿಕ್ಲು ಜಿರ್ವಾ-ಪುರಿ

ರಾಹುಲ್ ಪನ್ವಾರ್-ಉತ್ತರಾಖಂಡ

ವಿರಕ್ಷಿತ್ ಕೆ-ಕರ್ನಾಟಕ

ವಿನಯ್ ಪನ್ವಾರ್-ಉತ್ತರಾಖಂಡ

ನಿತೀಶ್-ಹರಿಯಾಣ

ಕಪಿಲ್ ಪನ್ವಾರ್-ಉತ್ತರಾಖಂಡ

ಅಜಯ್ ಬಿಷ್ಟ್-ಉತ್ತರಕಾಂಡ್

ಸಂತೋಷ್ ಕುಕ್ರೇಟಿ-ಉತ್ತರಕನ್ನಡ

SUO ರವಿ ಕುಮಾರ್ ನಿರ್ಮಲ್-ಉತ್ತರಖಂಡ

ಎಲ್‌ಎನ್‌ಕೆ ಶುಭಂ ಸಿಂಗ್-ಉತ್ತರ ಪ್ರದೇಶ

ಎಸ್ಜಿಟಿ ಅಮಿತ್ ಕುಮಾರ್ ಸಿಂಗ್- ಉತ್ತರ ಪ್ರದೇಶ

ಹಿಮಕುಸಿತದಲ್ಲಿ ಸಿಲುಕಿದ 24 ಮಂದಿ

ಹಿಮಕುಸಿತದಲ್ಲಿ ಸಿಲುಕಿದ 24 ಮಂದಿ

ಒಟ್ಟು 41 ಜನರಲ್ಲಿ - 34 ಪ್ರಶಿಕ್ಷಣಾರ್ಥಿಗಳು ಮತ್ತು ಏಳು ಬೋಧಕರು ಇದ್ದಾರೆ. ಇವರಲ್ಲಿ 17 ಮಂದಿ ಗಾಯಗಳೊಂದಿಗೆ ಪಾರಾಗಿದ್ದಾರೆ ಮತ್ತು 24 ಮಂದಿ ಹಿಮಪಾತದ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಹೆಲಿಕಾಪ್ಟರ್ ಐವರು ಎಸ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ಎನ್‌ಐಎಂನ ಮೂವರು ತರಬೇತುದಾರರನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಡೊಕ್ರಿಯಾನಿ ಬಮಾಕ್ ಹಿಮನದಿಯಲ್ಲಿ ಇಳಿಸಿತು. ಐಎಎಫ್‌ನ ಎರಡು ಚೀತಾ ಹೆಲಿಕಾಪ್ಟರ್‌ಗಳು ಹರ್ಸಿಲ್‌ಗೆ ತಲುಪಿದರೆ ಒಂದು ಸುಧಾರಿತ ಲಘು ಹೆಲಿಕಾಪ್ಟರ್ ಸಂಜೆ ಮಟ್ಲಿಯಲ್ಲಿ ಬಂದಿಳಿಯಿತು. ಒಂದು ನಾಗರಿಕ ಹೆಲಿಕಾಪ್ಟರ್ ಕೂಡ ಮಟ್ಲಿಯಲ್ಲಿ ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಘಟನೆ ಸ್ಥಳದಲ್ಲಿ ಮಧ್ಯಾಹ್ನದ ನಂತರ ಹಿಮಪಾತವಾಗಲು ಪ್ರಾರಂಭಿಸಿತು. ಇದರಿಂದಾಗಿ ಕಾರ್ಯಾಚರಣೆಗಳನ್ನು ಕೈಗೊಳ್ಳಲು ನಾವು ತುಂಬಾ ಕಡಿಮೆ ಗೋಚರತೆಯನ್ನು ಹೊಂದಿದೆವು. ಆದ್ದರಿಂದ, ಚಾಪರ್‌ಗಳು ಸ್ಟ್ಯಾಂಡ್‌ಬೈನಲ್ಲಿವೆ ಮತ್ತು ಹವಾಮಾನ ಸುಧಾರಿಸಲು ನಾವು ಕಾಯುತ್ತಿದ್ದೇವೆ. ಬುಧವಾರ ಬೆಳಗ್ಗೆ ರಕ್ಷಣಾ ಕಾರ್ಯಾಚರಣೆ ಪುನರಾರಂಭವಾಗಿದೆ' ಎಂದು ಎನ್‌ಐಎಂ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಾಖಂಡ ಸಿಎಂ ಜೊತೆ ಮೇಲ್ವಿಚಾರಣೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು "ಭೂಕುಸಿತದಿಂದ ಅಮೂಲ್ಯ ಜೀವಗಳ ನಷ್ಟದಿಂದ ತೀವ್ರ ದುಃಖವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ. ತಾವು ಧಾಮಿ ಅವರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ಅವಲೋಕಿಸಿರುವುದಾಗಿ ತಿಳಿಸಿದ್ದಾರೆ.

"ಉತ್ತರಕಾಶಿಯಲ್ಲಿ ನೆಹರು ಪರ್ವತಾರೋಹಣ ಸಂಸ್ಥೆಯು ನಡೆಸಿದ ಪರ್ವತಾರೋಹಣ ಯಾತ್ರೆಯ ವೇಳೆ ಅಪ್ಪಳಿಸಿದ ಭೂಕುಸಿತದಿಂದಾಗಿ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದರಿಂದ ತೀವ್ರ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ದು:ಖ ಭರಿಸುವ ಶಕ್ತಿ ದೇವರು ನೀಡಲಿ. ಮೃತರಿಗೆ ನನ್ನ ಸಂತಾಪಗಳು" ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ಐಎಎಫ್ ಹೆಲಿಕಾಪ್ಟರ್ ನಿಯೋಜನೆ

ರಕ್ಷಣಾ ಕಾರ್ಯಾಚರಣೆಗೆ ಐಎಎಫ್ ಹೆಲಿಕಾಪ್ಟರ್ ನಿಯೋಜನೆ

'ಸಿಎಂ ಉತ್ತರಾಖಂಡ್ ಪುಷ್ಕರ್ ಧಾಮಿ ಅವರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ಇನ್ನೂ ಸಿಕ್ಕಿಬಿದ್ದಿರುವ ಪರ್ವತಾರೋಹಿಗಳ ನೆರವಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಲು ನಾನು IAF ಗೆ ಸೂಚನೆ ನೀಡಿದ್ದೇನೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ' ಎಂದು ಸಿಂಗ್ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಐಎಎಫ್ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

English summary
A list of 28 mountaineers stranded on their way to Draupadi peak due to an avalanche in Uttarakhand has been released.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X