ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡ: ಅಂಕಿತಾ ಮರಣೋತ್ತರ ಪರೀಕ್ಷೆಯಲ್ಲಿ 'ನೀರಿನಲ್ಲಿ ಮುಳುಗಿ ಸಾವು' ದೃಢ

|
Google Oneindia Kannada News

ಉತ್ತರಾಖಂಡದ ಕಾಲುವೆಯಲ್ಲಿ ಶವವಾಗಿ ಪತ್ತೆಯಾದ 19 ವರ್ಷದ ರಿಸೆಪ್ಷನಿಸ್ಟ್‌ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಗೊಂಡಿದೆ. ರಿಸೆಪ್ಷನಿಸ್ಟ್‌ ಸಾವಿಗೆ ಕಾರಣ 'ನೀರಿನಲ್ಲಿ ಮುಳುಗಿರುವುದು' ಎಂದು ವರದಿಯಲ್ಲಿ ದೃಢಪಡಿಸಲಾಗಿದೆ. ರಿಸೆಪ್ಷನಿಸ್ಟ್ ದೇಹದ ಮೇಲೂ ಗಾಯದ ಗುರುತುಗಳನ್ನು ವರದಿಯಲ್ಲಿ ತೋರಿಸಲಾಗಿದೆ. ಸಂಶೋಧನೆಗಳನ್ನು ಕುಟುಂಬದೊಂದಿಗೆ ಹಂಚಿಕೊಳ್ಳಲಾಗಿದೆ.

ಸಂತ್ರಸ್ತೆಯನ್ನು ಬಿಜೆಪಿ ನಾಯಕನ ಮಗನಾದ ಆಕೆಯ ಉದ್ಯೋಗದಾತ ಪುಲ್ಕಿತ್ ಆರ್ಯ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. 10,000 ರೂ.ಗೆ ರೆಸಾರ್ಟ್ ಅತಿಥಿಗಳಿಗೆ 'ವಿಶೇಷ ಸೇವೆ' ನೀಡಲು ನಿರಾಕರಿಸಿದ್ದಕ್ಕೆ ಆಕೆಯನ್ನು ಪುಲ್ಕಿತ್ ಆರ್ಯ ಕೊಂದಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಸಂಪೂರ್ಣ ಮರಣೋತ್ತರ ಪರೀಕ್ಷೆ ನಡೆಸದೆ ಯಾವುದೇ ವಿಧಿವಿಧಾನಗಳನ್ನು ನಡೆಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರೂ ಮೃತಳ ಪೋಷಕರು ನಿನ್ನೆ ರಾತ್ರಿ ಅಂತ್ಯಕ್ರಿಯೆ ನಡೆಸಿದ್ದಾರೆ.

ನಾಗ ಪಂಚಮಿ ವಿಶೇಷ: ಉತ್ತರಾಖಂಡದ 5ನೇ ಧಾಮ ಯಾವುದು ಗೊತ್ತಾ?ನಾಗ ಪಂಚಮಿ ವಿಶೇಷ: ಉತ್ತರಾಖಂಡದ 5ನೇ ಧಾಮ ಯಾವುದು ಗೊತ್ತಾ?

ಸಂತ್ರಸ್ತೆ ಶವ ಶನಿವಾರ ಋಷಿಕೇಶಕ್ಕೆ ಸಮೀಪವಿರುವ ಚೀಲಾ ಕಾಲುವೆಯಲ್ಲಿ ಪತ್ತೆಯಾಗಿದೆ. ಆರು ದಿನಗಳ ನಂತರ ಆಕೆಯ ಪೋಷಕರು ಆಕೆಯ ಕೊಠಡಿಯಿಂದ ಕಾಣೆಯಾಗಿದ್ದಾಳೆ ಎಂದು ದೂರು ದಾಖಲು ಮಾಡಿದ್ದರು. ಹರಿದ್ವಾರ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಒಡೆತನದ ಪೌರಿ ಜಿಲ್ಲೆಯ ಯಮಕೇಶ್ವರ ಬ್ಲಾಕ್‌ನಲ್ಲಿರುವ ವನಾಂತರ ರೆಸಾರ್ಟ್‌ನಲ್ಲಿ ಮೃತ ಸಂತ್ರಸ್ತೆ ಕೆಲಸ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಪುಲ್ಕಿತ್ ಮತ್ತು ಇತರ ಇಬ್ಬರು ಉದ್ಯೋಗಿಗಳನ್ನು ಬಂಧಿಸಲಾಗಿದೆ.

ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿಸ್ತೃತ ಚರ್ಚೆ

ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿಸ್ತೃತ ಚರ್ಚೆ

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಗವರ್ನರ್ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ (ನಿವೃತ್ತ) ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ರಿಸೆಪ್ಷನಿಸ್ಟ್‌ ಸಾವಿನ ಪ್ರಕರಣದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದರು. ರಾಜ್ಯಪಾಲರೊಂದಿಗಿನ ಸಭೆಯಲ್ಲಿ ಸಿಎಂ ಧಾಮಿ ಅವರು ರಾಜ್ಯದ ಅಭಿವೃದ್ಧಿ ಯೋಜನೆಗಳು, ಕಾನೂನು ಸುವ್ಯವಸ್ಥೆ ಮತ್ತು ವಿಧಾನಸೌಧದಲ್ಲಿ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು.

ಮಗಳನ್ನು ತೋರಿಸುವ ನೆಪದಲ್ಲಿ ಮೋಸ

ಮಗಳನ್ನು ತೋರಿಸುವ ನೆಪದಲ್ಲಿ ಮೋಸ

ರಿಸೆಪ್ಷನಿಸ್ಟ್‌ನ ತಾಯಿ ತನ್ನ ಮಗಳನ್ನು ತರಾತುರಿಯಲ್ಲಿ ಅಂತ್ಯಸಂಸ್ಕಾರ ಮಾಡಿದ್ದು, ಆಕೆಯ ಶವವನ್ನು ನೋಡಲೇ ಇಲ್ಲ ಎಂದು ಹೇಳಿದ್ದಾರೆ. ಅವರನ್ನು ಮಗಳ ಬಳಿಗೆ ಕರೆದೊಯ್ಯುವ ನೆಪದಲ್ಲಿ ಮೋಸ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಮಗಳ ಸಾವಿನ ಬಳಿಕ ತಾಯಿ ಅಸ್ವಸ್ಥರಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಈ ಹಿಂದೆ ಸುದ್ದಿ ವರದಿಗಳು ತಿಳಿಸಿದ್ದವು. ಆದರೆ, ಇದೀಗ ವಿಡಿಯೋವೊಂದು ಹೊರಬಿದ್ದಿದ್ದು, ಆಕೆ ತಾನು ಆರೋಗ್ಯವಾಗಿರುವುದಾಗಿ ಹೇಳಿಕೊಂಡಿದ್ದು, ಸುಳ್ಳು ನೆಪದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದಿದ್ದಾರೆ.

"ನನ್ನ ಪತಿಯನ್ನು ಬಲವಂತವಾಗಿ ಕರೆದೊಯ್ದರು. ಆದರೆ ನನ್ನನ್ನು ಕರೆದುಕೊಂಡು ಹೋಗಲಿಲ್ಲ. ಅವರು ನನ್ನ ಮಗಳನ್ನು ತೋರಿಸುವುದಾಗಿ ಹೇಳಿ ನಾನು ವಾಸಿಸುವ ಸ್ಥಳದಿಂದ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ" ಎಂದು ಅಸಮಾಧಾನಗೊಂಡ ತಾಯಿ ಆಸ್ಪತ್ರೆಯಲ್ಲಿ ಚಿತ್ರೀಕರಿಸಿದ ವಿಡಿಯೊದಲ್ಲಿ ದೂರುವುದನ್ನು ಕೇಳಬಹುದು.

ಕೊಲೆಯಾದ ರೆಸಾರ್ಟ್ ತರಾತುರಿಯಲ್ಲಿ ಧ್ವಂಸ

ಕೊಲೆಯಾದ ರೆಸಾರ್ಟ್ ತರಾತುರಿಯಲ್ಲಿ ಧ್ವಂಸ

ನಿಧಾನಗತಿಯ ಕ್ರಮಕ್ಕಾಗಿ ಪೊಲೀಸರ ವಿರುದ್ಧ ಪ್ರತಿಭಟನೆಗಳ ನಡುವೆ ನಿನ್ನೆ ಸಂಜೆ ಹದಿಹರೆಯದ ರಿಸೆಪ್ಷನಿಸ್ಟ್‌ ಅವರ ಅಂತ್ಯಸಂಸ್ಕಾರ ಮಾಡಲಾಯಿತು. ಪ್ರಕರಣದಲ್ಲಿ ಸರ್ಕಾರದ ಕ್ರಮದ ಬಗ್ಗೆಯೂ ಕುಟುಂಬದವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಆಕೆ ಕೆಲಸ ಮಾಡುತ್ತಿದ್ದ ರೆಸಾರ್ಟ್ ಅನ್ನು ಕೆಡವಿದ್ದನ್ನು ಪ್ರಶ್ನಿಸಿ ಕುಟುಂಬ ಮತ್ತು ಪ್ರತಿಭಟನಾಕಾರರು ಶವವನ್ನು ಅಂತ್ಯಸಂಸ್ಕಾರ ಮಾಡಲು ಆರಂಭದಲ್ಲಿ ನಿರಾಕರಿಸಿದ್ದರು. ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸುವ ಪ್ರಯತ್ನ ಇದಾಗಿದೆ ಎಂದು ಅವರು ದೂರಿದ್ದಾರೆ.

ಆರೋಪಿಯ ತಂದೆ ಮತ್ತು ಸಹೋದರ ಬಿಜೆಪಿಯಿಂದ ಉಚ್ಛಾಟನೆ

ಆರೋಪಿಯ ತಂದೆ ಮತ್ತು ಸಹೋದರ ಬಿಜೆಪಿಯಿಂದ ಉಚ್ಛಾಟನೆ

ಪೌರಿಯ ರೆಸಾರ್ಟ್‌ನಲ್ಲಿ ರಿಸೆಪ್ಷನಿಸ್ಟ್ ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕನ ಪುತ್ರ ಪುಲ್ಕಿತ್ ಆರ್ಯನನ್ನು ಬಂಧನದ ಬಳಿಕ ಬಿಜೆಪಿ ಶನಿವಾರ ವಿನೋದ್ ಆರ್ಯ ಮತ್ತು ಅವರ ಮಗ ಅಂಕಿತ್ ಆರ್ಯನನ್ನು ಪಕ್ಷದಿಂದ ಉಚ್ಚಾಟಿಸಿದೆ. ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪುಲ್ಕಿತ್ ಆರ್ಯನನ್ನು ಈಗಾಗಲೇ ಬಂಧಿಸಲಾಗಿದೆ.

ಪೌರಿಯ ಯಮಕೇಶ್ವರ ಬ್ಲಾಕ್‌ನಲ್ಲಿ ರೆಸಾರ್ಟ್ ಮಾಲೀಕ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಮತ್ತು ರೆಸಾರ್ಟ್‌ನ ಇಬ್ಬರು ಉದ್ಯೋಗಿಗಳಾದ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಅವರನ್ನು ಶುಕ್ರವಾರ ಪ್ರಕರಣದಲ್ಲಿ ಬಂಧಿಸಲಾಗಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಮಹೇಂದ್ರ ಭಟ್ ಅವರ ಆದೇಶದ ಮೇರೆಗೆ ವಿನೋದ್ ಆರ್ಯ ಮತ್ತು ಅಂಕಿತ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪಕ್ಷದ ಮಾಧ್ಯಮ ಉಸ್ತುವಾರಿ ಮನ್ವೀರ್ ಚೌಹಾಣ್ ಶನಿವಾರ ಹೇಳಿದ್ದಾರೆ. ಹರಿದ್ವಾರದ ಪಕ್ಷದ ನಾಯಕ ವಿನೋದ್ ಆರ್ಯ ಅವರು ಈ ಹಿಂದೆ ಉತ್ತರಾಖಂಡ್ ಮತಿ ಮಂಡಳಿಯ ಅಧ್ಯಕ್ಷರಾಗಿ ರಾಜ್ಯ ಸಚಿವ ಶ್ರೇಣಿಯೊಂದಿಗೆ ಸೇವೆ ಸಲ್ಲಿಸಿದ್ದಾರೆ. ಅಂಕಿತ್ ಅವರನ್ನು ರಾಜ್ಯ ಒಬಿಸಿ ಆಯೋಗದ ಉಪಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ಕಾರ್ಯದರ್ಶಿ (ಸಮಾಜ ಕಲ್ಯಾಣ) ಎಲ್ ಫನೈ ತಿಳಿಸಿದ್ದಾರೆ.

English summary
Uttarakhand receptionist murder: Post-mortem report of the 19-year-old receptionist found dead in a canal in Uttarakhand has been revealed. The report confirmed the receptionist's cause of death as 'drowning'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X