Train Collision: ಎರಡು ರೈಲುಗಳ ನಡುವೆ ಡಿಕ್ಕಿ, 60 ಜನರಿಗೆ ಗಾಯ

ಉತ್ತರಾಖಂಡ: ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಈ ದುರಂತದಲ್ಲಿ 60 ಜನರಿಗೆ ಗಾಯವಾಗಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಷ್ಣುಗಢ-ಪಿಪಲ್ಕೋಟಿ ಜಲವಿದ್ಯುತ್ ಯೋಜನೆ ಸುರಂಗ ಮಾರ್ಗದಲ್ಲಿ ಈ ದುರಂತ ಸಂಭವಿಸಿದೆ. 2 ಲೋಕೋ ಟ್ರೈನ್‌ಗಳ ನಡುವೆ ಡಿಕ್ಕಿ ಸಂಭವಿಸಿದೆ. ಪಿಪಲ್ಕೋಟಿ ಸುರಂಗದ ಮೂಲಕ ಜನರನ್ನು ಕರೆದುಕೊಂಡು ಹೋಗುವ ಸಮಯದಲ್ಲಿ ದುರಂತ ಸಂಭವಿಸಿದ್ದು, ಈ ಘಟನೆ ಬೆಚ್ಚಿ ಬೀಳಿಸಿದೆ.

ವಿಷ್ಣುಗಢ-ಪಿಪಲ್ಕೋಟಿ ಜಲವಿದ್ಯುತ್ ಯೋಜನೆ ಮಹತ್ವದ ಪ್ರಾಜೆಕ್ಟ್ ಆಗಿದ್ದು, ಬರೋಬ್ಬರಿ 444 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಯನ್ನ ಉತ್ತರಾಖಂಡದ ಚಮೋಲಿ ಜಿಲ್ಲೆಯ ಹೆಲಾಂಗ್ ಬಳಿ ಕೈಗೆತ್ತಿಕೊಳ್ಳಲಾಗಿದೆ. ಟಿಎಚ್‌ಡಿಸಿ ಕೈಗೆತ್ತಿಕೊಂಡಿರುವ ಈ ಯೋಜನೆ ದೇಶದ ಗಮನ ಸೆಳೆಯುತ್ತಿದೆ. ಹೀಗಿದ್ದಾಗ ಕಾರ್ಮಿಕರು, ಅಧಿಕಾರಿಗಳು ಮತ್ತು ನಿರ್ಮಾಣ ಕಾರ್ಯಕ್ಕೆ ಬೇಕಾದ ಸಾಮಗ್ರಿ ಸಾಗಿಸಲು ಸುರಂಗದ ಒಳಗೆ ಲೋಕೋ ಟ್ರೈನ್ ಬಳಕೆ ಮಾಡಲಾಗುತ್ತಿದೆ. ಆದರೆ ಪಿಪಲ್ಕೋಟಿ ಸುರಂಗದೊಳಗೆ ಜನರನ್ನ ಸಾಗಿಸುತ್ತಿದ್ದ ಒಂದು ರೈಲು ಸಾಮಗ್ರಿಗಳನ್ನ ಸಾಗಿಸುತ್ತಿದ್ದ ಇನ್ನೊಂದು ರೈಲಿಗೆ ಡಿಕ್ಕಿಯಾಗಿ ಭೀಕರ ದುರಂತ ಸಂಭವಿಸಿದೆ.

Uttarakhand Locomotive Collision in Vishnugad-Pipalkoti Tunnel Injures 60

ವಿದ್ಯುತ್ ಉತ್ಪಾದನೆಗೆ ಮಹತ್ವದ ಯೋಜನೆ

ಅಂದಹಾಗೆ ಈ ಯೋಜನೆ 4 ಟರ್ಬೈನ್‌ಗಳ ಮೂಲಕ 111 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದು, ದೇಶದ ವಿದ್ಯುತ್ ಸ್ವಾವಲಂಬನೆಗೆ ಮಹತ್ವದ ಕೊಡುಗೆ ನೀಡುವ ನಿರೀಕ್ಷೆಯು ಕೂಡ ಇದೆ. ಪ್ರಮುಖವಾಗಿ ಉತ್ತರಾಖಂಡದ ಪಾಲಿಗೆ ಈ ಯೋಜನೆ ಅತ್ಯಗತ್ಯ ಎನ್ನಬಹುದು. ಇದೇ ಕಾರಣಕ್ಕೆ ವೇಗವಾಗಿ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳಲಾಗಿದೆ, ಆದರೆ ಇಂತಹ ಸಮಯದಲ್ಲಿ ದಿಢೀರ್ ದುರಂತ ಸಂಭವಿಸಿದ್ದು ಪರಿಹಾರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಧಿಕಾರಿಗಳು ಈ ಘಟನೆ ಹಿನ್ನೆಲೆ ಸ್ಥಳ ಪರಿಶೀಲನೆ ಮಾಡಿದ್ದು, ತನಿಖೆ ಆರಂಭಿಸಲಾಗಿದೆ.

ಸ್ಥಳೀಯ ಆಸ್ಪತ್ರೆಗಳಲ್ಲಿ ಮುಂದುವರಿದ ಚಿಕಿತ್ಸೆ

ಇನ್ನು ಈ ದುರಂತದ ಬಗ್ಗೆ ಮಾಹಿತಿ ನೀಡಿರುವ ಚಮೋಲಿಯ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್, 10 ಗಾಯಾಳುಗಳನ್ನು ಚಿಕಿತ್ಸೆಗಾಗಿ ಗೋಪೇಶ್ವರ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದಿದ್ದಾರೆ. ಹಾಗೇ ಚಮೋಲಿ ಎಸ್‌ಪಿ ಸುರ್ಜೀತ್ ಸಿಂಗ್ ಮಾಹಿತಿ ನೀಡಿ, 42 ಜನರನ್ನು ಈಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಹಾಗೇ 5 ಜನರಿಗೆ ಮೂಳೆ ಮುರಿದಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಈ ದುರಂತಕ್ಕೆ ತಾಂತ್ರಿಕ ಕಾರಣ ಇದೆಯಾ? ಅಥವಾ ಘಟನೆ ಸಂಭವಿಸಿದ್ದು ಹೇಗೆ? ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+