ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪಕ್ಷ ನಾಯಕಿ ವಿರುದ್ಧ ಅವಹೇಳನಕಾರಿ ಹೇಳಿಕೆ: ತ್ರಿವೇಂದ್ರ ರಾವತ್ ಕ್ಷಮೆ

|
Google Oneindia Kannada News

ಡೆಹ್ರಾಡೂನ್, ಜನವರಿ 06: ವಿಪಕ್ಷ ನಾಯಕಿ ವಿರುದ್ಧ ಅವಹೇಳನ ಹೇಳಿಕೆ ನೀಡಿದ್ದ ಬನ್ಸಿಧರ್ ಭಗತ್ ಪರವಾಗಿ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಕ್ಷಮೆ ಕೇಳಿದ್ದಾರೆ.

ವಿಪಕ್ಷ ನಾಯಕಿ ವಿರುದ್ಧದ ಕೀಳುಮಟ್ಟದ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಕ್ಷಮೆ ಕೋರಿದ್ದಾರೆ.

ಉತ್ತರಾಖಂಡ್ ಸಿಎಂ ರಾವತ್ ವಿರುದ್ಧ ಸಿಬಿಐ ತನಿಖೆ ಅಗತ್ಯವಿಲ್ಲ ಎಂದ ಸುಪ್ರೀಂಕೋರ್ಟ್ಉತ್ತರಾಖಂಡ್ ಸಿಎಂ ರಾವತ್ ವಿರುದ್ಧ ಸಿಬಿಐ ತನಿಖೆ ಅಗತ್ಯವಿಲ್ಲ ಎಂದ ಸುಪ್ರೀಂಕೋರ್ಟ್

ಪ್ರತಿಪಕ್ಷದ ನಾಯಕಿ ಇಂದಿರಾ ಹೃದಯೇಶ್ ಅವರ ಬಗ್ಗೆ ಉತ್ತರಾಖಂಡ ಬಿಜೆಪಿ ಅಧ್ಯಕ್ಷ ಬನ್ಸಿಧರ್ ಭಗತ್ ನೀಡಿದ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಟ್ವೀಟ್ ಮೂಲಕ ತ್ರಿವೇಂದ್ರ ಸಿಂಗ್ ರಾವತ್ ಕ್ಷಮೆ ಕೋರಿದ್ದಾರೆ.

Uttarakhand CM Spologises To Opposition Leader After State BJP President Calls Her Budhiya

ಇಂತಹ ಭಾಷೆ ಮಾತೃತ್ವಕ್ಕೆ ಮಾಡಿದ ಅವಮಾನವಾಗಿದ್ದು, ನಮ್ಮ ಕಣಿವೆಗಳ ನಾಡಿನ ಮಹಿಳೆಯರು ಎಂದಿಗೂ ಕ್ಷಮಿಸುವುದಿಲ್ಲ. ಇದನ್ನು ಬಿಜೆಪಿ ರಾಷ್ಟ್ರೀಯ ನಾಯಕರು ಗಮನಿಸಬೇಕು ಮತ್ತು ಅವರಿಂದ ವಿವರಣೆಯನ್ನು ಪಡೆಯಬೇಕೆಂದು ನಾನು ಕೋರುತ್ತೇನೆ.

ಬೇಟಿ ಬಚಾವೊ, ಬೇಟಿ ಪಡಾವೊ ಎಂಬ ಘೋಷಣೆಯನ್ನು ಎತ್ತುತ್ತಿರುವ ಈ ಜನರು ತಮ್ಮ ಭಾಷೆಯ ಬಗ್ಗೆ ಕನಿಷ್ಠ ಜಾಗರೂಕರಾಗಿರಬೇಕು ಎಂದು ಹೃದಯೇಶ್ ಹೇಳಿದ್ದರು. ಬುಧವಾರ ಮುಂಜಾನೆ 1 ಗಂಟೆ ಸುಮಾರಿಗೆ ರಾವತ್ ಅವರು ಟ್ವೀಟ್ ಮಾಡಿದ್ದು, 'ಹೃದಯೇಶ್ ಅವರ ವಿರುದ್ಧದ ಟೀಕೆಗಳ ಬಗ್ಗೆ ಕೇಳಲು ತುಂಬಾ ಬೇಸರವಾಗುತ್ತದೆ. ಹೀಗಾಗಿ ನಾನು ವೈಯಕ್ತಿಕವಾಗಿ ಅವರ ಕ್ಷಮೆಯಾಚಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಭಗತ್ ಅವರು ಮಂಗಳವಾರ 'ಬುಡಿಯಾ' (ವೃದ್ಧೆ) ಮತ್ತು 'ಡೂಬ್ತಾ ಜಹಾಜ್' (ಮುಳುಗುವ ಹಡಗು) ಎಂದು ಟೀಸಿದ್ದರು. 'ಮುದುಕಿ? ಮುಳುಗುವ ಹಡಗಿನೊಂದಿಗೆ ಏನು ಮಾಡಲು ಬಯಸುತ್ತೀರಿ?, ಎಂದು ಬಿಜೆಪಿ ಅಧ್ಯಕ್ಷರು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಹೃದಯೇಶ್, ಬಿಜೆಪಿ ರಾಜ್ಯಾಧ್ಯಕ್ಷರು ಬಳಸಿರುವ ಕೀಳುಮಟ್ಟದ ಭಾಷೆ ನೋವು ತಂದಿದೆ. ಆಡಳಿತ ಪಕ್ಷದ ರಾಷ್ಟ್ರೀಯ ನಾಯಕತ್ವವು ಈ ಘಟನೆ ಕುರಿತು ಅರಿಯಬೇಕು ಎಂದು ಹೇಳಿದ್ದಾರೆ.

English summary
After a backlash over Uttarakhand BJP president Bansidhar Bhagat's remarks on leader of the Opposition Indira Hridayesh, Uttarakhand Chief Minister Trivendra Singh Rawat made a public apology to her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X