ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ: ಒಂದೇ ಹಾಸಿಗೆ ಮೇಲೆ ಇಬ್ಬರು ರೋಗಿಗಳು: ಬೆಡ್‌ ಶೀಟ್‌ನಲ್ಲಿ ರೋಗಿ ತಂದ ಸಂಬಂಧಿಕರು

|
Google Oneindia Kannada News

ಲಕ್ನೋ, ನವೆಂಬರ್ 6: ಉತ್ತರ ಪ್ರದೇಶದಲ್ಲಿ ಭರ್ಜರಿ ಗೆಲುವಿನ ಬಳಿಕ ಯೋಗಿ ಆದಿತ್ಯನಾಥ್ ಸರ್ಕಾರ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಹೇಳಿಕೆಗೆ ಸೆಡ್ಡು ಹೊಡೆದಂತೆ ಜಿಲ್ಲಾಸ್ಪತ್ರೆಯ ಅವ್ಯವಸ್ಥೆಯ ಫೋಟೋಗಳು ವೈರಲ್ ಆಗಿವೆ.

ಒಂದೇ ಹಾಸಿಗೆ ಮೇಲೆ ಇಬ್ಬರು ರೋಗಿಗಳು ಮಲಗಿರುವುದು, ಬೆಡ್‌ ಶೀಟ್‌ನಲ್ಲಿ ವೃದ್ಧ ರೋಗಿಯನ್ನು ಸಂಬಂಧಿಕರು ಕರೆತರುವುದು ಹಾಗೂ ಬೆಡ್‌ ಇಲ್ಲದ ರೋಗಿಗಳು ನೆಲದ ಮೇಲೆ ಮಲಗಿರುವುದು ದೃಶ್ಯಗಳಲ್ಲಿ ಕಂಡು ಬಂದಿದೆ. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬಲ್ಲಿಯಾ ಜಿಲ್ಲಾಸ್ಪತ್ರೆಯಲ್ಲಿ. ಸ್ಟ್ರೆಚರ್‌ಗಳಿಲ್ಲದೆ ಬೆಡ್‌ ಶೀಟ್‌ನಲ್ಲಿ ಸಂಬಂಧಿಕರು ರೋಗಿಯನ್ನು ಹೊತ್ತೊಯ್ಯುತ್ತಿರುವ ಫೋಟೋಗಳು ವೈರಲ್ ಆಗಿದೆ.

 ನೋಯ್ಡಾ: ದೇಶದ ಅತಿದೊಡ್ಡ ಡೇಟಾ ಸೆಂಟರ್ ಉದ್ಘಾಟಿಸಿದ ಯೋಗಿ ನೋಯ್ಡಾ: ದೇಶದ ಅತಿದೊಡ್ಡ ಡೇಟಾ ಸೆಂಟರ್ ಉದ್ಘಾಟಿಸಿದ ಯೋಗಿ

ಯೋಗಿ ಸರ್ಕಾರ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ ಎಂಬ ಹೇಳಿಕೆಗಳ ನಡುವೆ, ಪ್ರತಿದಿನ ಇಂತಹ ಕೆಲವು ವಿಡಿಯೋಗಳು ಹೊರಬರುತ್ತಲೇ ಇರುತ್ತವೆ. ಇದರಲ್ಲಿ ಉತ್ತರ ಪ್ರದೇಶದ ಆರೋಗ್ಯ ಸೇವೆಗಳ ಅವ್ಯವಸ್ಥೆ ಬಹಿರಂಗಗೊಳ್ಳುತ್ತಿದೆ.

ಇದೀಗ ಬಲ್ಲಿಯಾ ಜಿಲ್ಲೆಯಿಂದ ಆಘಾತಕಾರಿ ಫೋಟೋಗಳು ಹೊರಬಿದ್ದಿವೆ. ಇದರಲ್ಲಿ ಜನರು ರೋಗಿಯನ್ನು ಹಾಸಿಗೆಯಲ್ಲಿ ಎತ್ತುವ ಮತ್ತು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುತ್ತಿರುವುದನ್ನು ಕಾಣಬಹುದು. ಬಲ್ಲಿಯಾ ಜಿಲ್ಲಾ ಆಸ್ಪತ್ರೆಯ ಸ್ಥಿತಿಯನ್ನು ವಿವರಿಸುವ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬೆಡ್‌ ಶೀಟ್‌ನಲ್ಲಿ ರೋಗಿ ತಂದ ಸಂಬಂಧಿಕರು

ಬೆಡ್‌ ಶೀಟ್‌ನಲ್ಲಿ ರೋಗಿ ತಂದ ಸಂಬಂಧಿಕರು

ವಾಸ್ತವವಾಗಿ ಈ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲಾ ಆಸ್ಪತ್ರೆಯದ್ದು. ಮಾಹಿತಿ ಪ್ರಕಾರ ಈ ಆಸ್ಪತ್ರೆಯಲ್ಲಿ ರೋಗಿಗಳನ್ನು ಸಾಗಿಸಲು ಸ್ಟ್ರೆಚರ್ ಕೂಡ ಇಲ್ಲ. ರೋಗಿಯ ಸಂಬಂಧಿಕರು ತಾವೇ ಬೆಡ್‌ ಶೀಟ್ ವ್ಯವಸ್ಥೆ ಮಾಡಿ ರೋಗಿಗಳನ್ನು ಇಲ್ಲಿಂದ ಅಲ್ಲಿಗೆ ಕರೆದುಕೊಂಡು ಹೋಗುತ್ತಾರೆ. ಅಷ್ಟೇ ಅಲ್ಲ ಒಂದೇ ಬೆಡ್ ಮೇಲೆ ಹಲವು ರೋಗಿಗಳನ್ನು ಮಲಗಿಸಿರುವುದನ್ನು ಚಿತ್ರಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಆಸ್ಪತ್ರೆಯಲ್ಲಿ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಆಸ್ಪತ್ರೆಯಲ್ಲಿ ನಡೆಯುತ್ತಿರುವ ನಿರ್ಲಕ್ಷ್ಯದಲ್ಲಿ ವೈದ್ಯರೂ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವೈದ್ಯರು ಸುತ್ತಾಡಲು ಬರುವುದಿಲ್ಲ ಅಥವಾ ಆಸ್ಪತ್ರೆಯಲ್ಲಿ ಆಗುತ್ತಿರುವ ನಿರ್ಲಕ್ಷ್ಯಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಾರೆನ್ನುವ ಆರೋಪಗಳು ಕೇಳಿ ಬಂದಿವೆ.

ಆಸ್ಪತ್ರೆಗೆ ಬಾರದ ವೈದ್ಯರು

ಆಸ್ಪತ್ರೆಗೆ ಬಾರದ ವೈದ್ಯರು

ಪ್ರತಿದಿನ ಉತ್ತರ ಪ್ರದೇಶದ ಆರೋಗ್ಯ ಸೇವೆಗಳನ್ನು ಬಹಿರಂಗಪಡಿಸುವ ಈ ವಿಡಿಯೋಗಳು ದುರದೃಷ್ಟವಶಾತ್ ಕೊರೊನಾ ಅವಧಿಯಂತಹ ಪರಿಸ್ಥಿತಿ ಮತ್ತೆ ಉದ್ಭವಿಸಿದರೆ ಹೇಗೆ ಎಂಬ ಪ್ರಶ್ನೆ ಉದ್ಬವಿಸಿದೆ. ಇದು ಉತ್ತರ ಪ್ರದೇಶವು ಅದರ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ ಎಂಬ ಸೂಚನೆಯಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಆದರೆ ಒಂದೇ ಹಾಸಿಗೆಯ ಮೇಲೆ ಇಬ್ಬರು ರೋಗಿಗಳನ್ನು ಮಲಗಿಸಲಾಗಿದ್ದು, ಎಲ್ಲೆಂದರಲ್ಲಿ ಕಸ ಬಿದ್ದಿದೆ. ಕೊರೊನಾ ಅವಧಿಯಲ್ಲಿ ವೈದ್ಯರು 24 ಗಂಟೆಗಳ ಕಾಲ ಕೆಲಸ ಮಾಡಿ ಸಾವಿರಾರು ಜನರ ಜೀವಗಳನ್ನು ಉಳಿಸಿರುವುದನ್ನು ನಾವು ನೋಡಿದ್ದೇವೆ. ಅದೇ ವೈದ್ಯರು ಇಲ್ಲಿ ಸುತ್ತಾಡಲು ಬರುವುದಿಲ್ಲ. ಸರಕಾರ ಈ ಎಲ್ಲ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವೇ ಕ್ರಮಕೈಗೊಳ್ಳುವ ಅವಶ್ಯಕತೆಯಿದೆ. ಆಗ ಮಾತ್ರ ಬರಬಹುದಾದ ಯಾವುದೇ ಅನಾಹುತವನ್ನು ಯಶಸ್ವಿಯಾಗಿ ಎದುರಿಸಲು ಸಾಧ್ಯವಾಗುತ್ತದೆ.

ಸೂಕ್ತ ಕ್ರಮಕ್ಕೆ ಸೂಚನೆ

ಸೂಕ್ತ ಕ್ರಮಕ್ಕೆ ಸೂಚನೆ

ಉತ್ತರ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ನೂರಾರು ಡೆಂಗ್ಯೂ ರೋಗಿಗಳು ಏಕಾಏಕಿ ಆಸ್ಪತ್ರೆಗೆ ದಾಖಲಾಗುತ್ತಿರುವುದು ಬೆಳಕಿಗೆ ಬಂದಿದೆ. ಕಳೆದ ವಾರದ ಹಿಂದೆ ಒಂದೇ ದಿನದಲ್ಲಿ 5666 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದವು. ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಸೊಳ್ಳೆ ಕಚ್ಚುವುದರಿಂದ ಬರುವ ಈ ಕಾಯಿಲೆ ಮನುಷ್ಯನನ್ನು ಹೆಚ್ಚು ಬಾದಿಸುತ್ತದೆ. ಹೀಗಾಗಿ ಸೊಳ್ಳೆಗಳ ನಾಶಕ್ಕೆ ಸ್ಥಳೀಯ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.

ಕಳಪೆ ಪ್ಲೇಟ್‌ಲೆಟ್‌ ಇಂಜೆಕ್ಟ್: ರೋಗಿ ಸಾವು

ಕಳಪೆ ಪ್ಲೇಟ್‌ಲೆಟ್‌ ಇಂಜೆಕ್ಟ್: ರೋಗಿ ಸಾವು

ಪ್ರಯಾಗ್‌ರಾಜ್ ಆಸ್ಪತ್ರೆಯೊಂದರಲ್ಲಿ ವೈದ್ಯರು ಪ್ಲಾಸ್ಮಾ ಬದಲಿಗೆ ಮೊಸಂಬಿ ಜ್ಯೂಸ್ ಅನ್ನು ಡೆಂಗ್ಯೂ ರೋಗಿಗೆ ಇಂಜೆಕ್ಟ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸಂಬಂಧಿಕ ಆಕ್ರೋಶದ ನಂತರ ಪ್ಲಾಸ್ಮಾವನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯ ವರದಿಯಲ್ಲಿ ರೋಗಿಗೆ ಕಳಪೆಯಾಗಿ ಸಂರಕ್ಷಿಸಲ್ಪಟ್ಟ ಪ್ಲೇಟ್‌ಲೆಟ್‌ಗಳನ್ನು ನೀಡಲಾಗಿದೆ ಎಂದು ಪ್ರಯಾಗರಾಜ್ ಜಿಲ್ಲಾಧಿಕಾ ಹೇಳಿದ್ದರು.

ಕಳೆದ ತಿಂಗಳು 32 ವರ್ಷದ ರೋಗಿಯಾದ ಪ್ರದೀಪ್ ಪಾಂಡೆ ಅವರು ಡೆಂಗ್ಯೂನಿಂದ ಬಳಲುತ್ತಿದ್ದರು. ವಾರದ ಹಿಂದೆ ಪ್ಲೇಟ್‌ಲೆಟ್‌ ಕೂಡ ಅವರಿಗೆ ನೀಡಲಾಗಿತ್ತು. ನಂತರ ಅವರ ಆರೋಗ್ಯ ಹದಗೆಟ್ಟಾಗ ಅವರನ್ನು ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಲಾಯಿತು. ಅಲ್ಲಿ ಅವರು ನಿಧನರಾದರು ಎಂದು ಘೋಷಿಸಲಾಯಿತು.

English summary
Footage of two patients lying on the same bed in Uttar Pradesh's Ballia district hospital has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X