ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರಿಗೆ ಬಹುಮಾನ ಘೋಷಿಸಿದ ಖುರೇಶಿಗಾಗಿ ಹುಡುಕಾಟ

By ವಿಕಾಸ್ ನಂಜಪ್ಪ
|
Google Oneindia Kannada News

ಲಕ್ನೋ, ಜ.9 : ಪ್ಯಾರಿಸ್ ಪತ್ರಿಕಾ ಕಚೇರಿ ಮೇಲೆ ದಾಳಿ ಮಾಡಿದವರಿಗೆ 51 ಕೋಟಿ ಬಹುಮಾನ ಘೋಷಿಸಿದ್ದ ಬಹುಜನ ಸಮಾಜ ಪಕ್ಷದ ನಾಯಕ ಹಾಜಿ ಯಾಕೂಬ್ ಖುರೇಶಿಗಾಗಿ ಉತ್ತರ ಪ್ರದೇಶ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಗುರುವಾರ ಉತ್ತರ ಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು-ಸುವ್ಯವಸ್ಥೆ) ಮುಕುಲ್ ಗೊಯಲ್, ಕಾನೂನಿನ ದೃಷ್ಟಿಯಿಂದ ಅವರ ಹೇಳಿಕೆಯನ್ನು ಪರಿಶೀಲಿಸಿದ ನಂತರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. [ಪತ್ರಿಕೆ ಕಚೇರಿ ಮೇಲೆ ಉಗ್ರರ ದಾಳಿ]

Yakub Qureshi

ಸದ್ಯ, ಯಾಕೂಬ್ ಖುರೇಶಿ ವಿವಾದಾಸ್ಪದ ಹೇಳಿಕೆಯ ಆಧಾರದ ಮೇಲೆ ಅವರನ್ನು ಬಂಧಿಸಲು ಉತ್ತರ ಪ್ರದೇಶ ಪೊಲೀಸರು ಸಜ್ಜಾಗಿದ್ದಾರೆ. ಖುರೇಶಿ ಎಲ್ಲಿದ್ದಾರೆ? ಎಂದು ಹುಡುಕಾಟ ಆರಂಭಿಸಿದ್ದಾರೆ. [ಪ್ಯಾರಿಸ್ ದಾಳಿ ಮಾಡಿದ ಉಗ್ರರಿಗೆ 51 ಕೋಟಿ ಬಹುಮಾನ!]

ಪ್ಯಾರಿಸ್ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆದ ಬಳಿಕ ಹೇಳಿಕೆ ನೀಡಿದ್ದ ಖುರೇಶಿ ಅವರು, 'ಪ್ರವಾದಿಗೆ ಅಗೌರವ ತೋರುವ ಎಲ್ಲರೂ ಫ್ರಾನ್ಸಿನ 'ಚಾರ್ಲಿ ಹೆಬ್ಡೊ' ನಿಯತಕಾಲಿಕದ ಪತ್ರಕರ್ತರು ಹಾಗೂ ವ್ಯಂಗ್ಯಚಿತ್ರಕಾರರಂತೆ ಸಾವು ತಂದುಕೊಳ್ಳುತ್ತಾರೆ' ಎಂದು ಹೇಳಿದ್ದರು.

'ಪ್ಯಾರಿಸ್ ದಾಳಿಕೋರಿಗೆ 51 ಕೋಟಿ ಬಹುಮಾನ ಘೋಷಿಸಿದ್ದರು ಮತ್ತು ನನ್ನ ಬಳಿ ಬಂದು, ಘೋಷಿತ ಬಹುಮಾನಕ್ಕೆ ಅವರು ಬೇಡಿಕೆ ಇಟ್ಟರೆ ಹಣ ಪಾವತಿಸಲು ಸಿದ್ಧವಿದ್ದೇನೆ' ಎಂದು ಹೇಳಿದ್ದರು. ಸದ್ಯ, ಖುರೇಶಿ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

English summary
The Uttar Pradesh police are conducting raids and search operations to arrest Haji Yakub Qureshi who offered a reward to the attackers of Charlie Hebdo who killed 12 persons in Paris.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X