ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ: 5 ಯಾತ್ರಿಕರು ಸಾವು
ಷಹಜಹಾನ್ಪುರ, ಜನವರಿ 31: ಉತ್ತರ ಪ್ರದೇಶದ ಷಹಜಹಾನ್ಪುರ ಜಿಲ್ಲೆಯಲ್ಲಿ ಲಾರಿ ಮತ್ತು ಟ್ರಾಕ್ಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ಯಾತ್ರಿಕರು ಮೃತರಾಗಿದ್ದಾರೆ.
ಉತ್ತರ ಪ್ರದೇಶದ ಧೈ ಘಾಟ್ ಮೇಳ ಪ್ರವಾಸಕ್ಕೆಂದು ಬಂದಿದ್ದವರಲ್ಲಿ ಐವರು ಮೃತರಾಗಿದ್ದು 7 ಜನರ ಸ್ಥಿತಿ ಚಿಂತಾಜನಕವಾಗಿದೆ. ಯಾತ್ರಿಕರನ್ನು ತುಂಬಿದ್ದ ಟ್ರಾಕ್ಟರ್ ಗೆ ಇಲ್ಲಿನ ಮಿರ್ಜಾಪುರದ ಜಾರಿನ್ಪುರ ಎಂಬ ಹಳ್ಳಿಯ ಬಳಿ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಅಪಘಾತದ ನಂತರ ಲಾರಿ ಚಾಲಕ ನಾಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.

ಜ.29 ರಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ಸೇತುವೆ ಮುರಿದ ಪರಿಣಾಮ 50 ಪ್ರಯಾಣಿಕರನ್ನು ಹೊತ್ತ ಬಸ್ಸು ನದಿಗುರುಳಿ 37 ಮಂದಿ ಮೃತರಾಗಿದ್ದರು.











Click it and Unblock the Notifications