ಉತ್ತರ ಪ್ರದೇಶ: ಜನತಾ ದರ್ಬಾರ್‌ನಲ್ಲಿ ಜನರಿಗೆ ನಿವೇಶನ ನೀಡುವ ಭರವಸೆ ನೀಡಿದ ಸಿಎಂ ಯೋಗಿ
ಗೋರಖಪುರ ಏಪ್ರಿಲ್ 11: ಸರ್ಕಾರದ ಕಲ್ಯಾಣ ಯೋಜನೆಗಳಿಂದ ಯಾರೂ ವಂಚಿತರಾಗುವುದಿಲ್ಲ ಎಂದು ಜನತಾ ದರ್ಬಾರ್‌ನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಗೋರಖನಾಥ ದೇಗುಲದ ಮಹಂತ್ ದಿಗ್ವಿಜಯನಾಥ ಸ್ಮೃತಿ ಸಭಾಗೃಹದ ಎದುರು ನಡೆದ ಜನತಾ ದರ್ಬಾರ್‌ನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೂರದೂರುಗಳಿಂದ ಆಗಮಿಸಿದ್ದ ನೂರಾರು ದೂರುದಾರರ ಸಮಸ್ಯೆಗಳನ್ನು ಆಲಿಸಿದರು. ಇದೇ ವೇಳೆ ಹಲವು ದೂರುದಾರರು ಮುಖ್ಯಮಂತ್ರಿಗೆ ನಿವೇಶನ ನೀಡುವಂತೆ ಒತ್ತಾಯಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಯೋಗಿ ಆದಿತ್ಯನಾಥ್ ಅವರು ಜನರನ್ನು ನೇರವಾಗಿ ಸಂಪರ್ಕಿಸಲು ಹಾಗೂ ಅವರ ಸಮಸ್ಯೆಗಳನ್ನು ಅರಿಯಲು ಕೆಲ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದರು. ಜನತಾ ದರ್ಬಾರ್ ಎಂಬಾ ಕಾರ್ಯಕ್ರಮದ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆಯನ್ನು ಅವರು ನೀಡಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಿಂದ ಮುನ್ನೂರಕ್ಕೂ ಹೆಚ್ಚು ದೂರುದಾರರು ಜನತಾ ದರ್ಬಾರ್‌ಗೆ ಆಗಮಿಸಿ ಮುಖ್ಯಮಂತ್ರಿಗಳ ಮುಂದೆ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು. ಜನತಾ ದರ್ಬಾರ್ ಗೆ ಸಿಎಂ ಯೋಗಿ ಮುಂತಾದವರು ಆಗಮಿಸುತ್ತಿದ್ದಂತೆ ದೂರುದಾರರು ಮುಖದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಕ್ಕಷ್ಟೇ ಸಂತಸ ಕಂಡುಬಂದಿದೆ. ಸಿಎಂ ಅವರೇ ಒಬ್ಬೊಬ್ಬರಾಗಿ ದೂರುದಾರರ ಬಳಿ ತೆರಳಿ ಅವರ ಸಮಸ್ಯೆಗಳನ್ನು ತಿಳಿದುಕೊಂಡಿರುವುದು ಕಂಡುಬಂದಿದೆ.
ಸ್ವಂತ ಮನೆ ಇಲ್ಲದ ಅನೇಕರು ಜನತಾ ದರ್ಬಾರ್‌ಗೆ ಆಗಮಿಸಿದ್ದರು. ಸಿಎಂ ಬಳಿ ಈ ಬೇಡಿಕೆ ಇಟ್ಟಾಗ ಯೋಗಿ ಆದಿತ್ಯನಾಥ್ ಎಲ್ಲರಿಗೂ ಭರವಸೆ ನೀಡಿದರು. ಸರ್ಕಾರದ ಪ್ರತಿಯೊಂದು ಕಲ್ಯಾಣ ಯೋಜನೆ ಎಲ್ಲರಿಗೂ ಉಪಯೋಗವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು. ಇದರಿಂದ ಯಾರೂ ವಂಚಿತರಾಗುವುದಿಲ್ಲ ಎಂಬ ಭರವಸೆಯನ್ನು ಅವರು ನೀಡಿದರು. ಜೊತೆಗೆ ಮುಖ್ಯಮಂತ್ರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಅಗತ್ಯ ಸೂಚನೆಗಳನ್ನು ನೀಡಿದರು.

ದೂರಿನೊಂದಿಗೆ ಬಂದಿದ್ದ ಮಹಿಳೆ ತಮ್ಮ ಆರ್ಥಿಕ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಬಳಿ ಹೇಳಿಕೊಂಡಾಗ, ಕೂಡಲೇ ಮಹಿಳೆಯ ಅರ್ಹತೆಯ ಆಧಾರದ ಮೇಲೆ ಪಿಂಚಣಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮನೆಗಳ ಬೇಡಿಕೆಯ ಮೇರೆಗೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ ಮನೆಗಳನ್ನು ಒದಗಿಸಲು ಮುಖ್ಯಮಂತ್ರಿಗಳು ಸೂಚಿಸಿದರು.
ಇದರೊಂದಿಗೆ ಚಿಕಿತ್ಸೆಗೆ ಹಣ ಕೇಳಲು ಬಂದ ಜನರಿಗೆ ಹಣದ ಕೊರತೆಯಿಂದ ಯಾರ ಚಿಕಿತ್ಸೆಯೂ ನಿಲ್ಲುವುದಿಲ್ಲ, ಆಡಳಿತದೊಂದಿಗೆ ಅಂದಾಜು ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ಸಿಎಂ ತಿಳಿಸಿದರು. ಕೂಡಲೇ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. ಇದರೊಂದಿಗೆ ಭೂ ಮಾಫಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
'ನರೇಂದ್ರ ಮೋದಿ ಕೆ ಮನ್ ಕಿ ಬಾತ್ ಉರ್ದು ಕೆ ಸಾಥ್'
ಉತ್ತರ ಪ್ರದೇಶದ ಮುನ್ಸಿಪಲ್ ಚುನಾವಣೆಗಳನ್ನು ಸೆಮಿಫೈನಲ್ ಎಂದು ಪರಿಗಣಿಸಿ ಚುನಾವಣಾ ತಯಾರಿಯಲ್ಲಿ ಬಿಜೆಪಿ ಇದೆ. ಇದರ ಬೆನ್ನಲ್ಲೇ ಬಿಜೆಪಿ ಮುಸ್ಲಿಂ ಸಮುದಾಯಗಳ ಸಂಪರ್ಕದ ಕಸರತ್ತು ಆರಂಭಿಸಿದೆ. ಒಂದೆಡೆ ಬಿಜೆಪಿಯ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಘೋಷಣೆ, ಮತ್ತೊಂದೆಡೆ ಬಿಜೆಪಿ ಯುಪಿಯಲ್ಲಿ ಈ ಸಮುದಾಯಕ್ಕೆ ಪ್ರಧಾನಿ ಮೋದಿಯವರ ಮನ್ ಕಿ ಬಾತ್‌ನ ಒಂದು ಲಕ್ಷ ಉರ್ದು ಪ್ರತಿಗಳನ್ನು ಹಂಚುವ ಕೆಲಸ ಮಾಡಲಿದೆ. ಈ ಬಿಜೆಪಿಯ ತಂತ್ರ ಕಳೆದ ಬಾರಿ ಕಳೆದುಕೊಂಡ 14 ಲೋಕಸಭಾ ಸ್ಥಾನಗಳಲ್ಲಿ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿಯವರ 'ಮನ್ ಕಿ ಬಾತ್' ಅನ್ನು ಮುಸ್ಲಿಂ ಸಮುದಾಯದ ಪ್ರತಿಯೊಂದು ವರ್ಗಕ್ಕೂ ಕೊಂಡೊಯ್ಯಲು ಬಿಜೆಪಿ 150 ಪುಟಗಳ ಪುಸ್ತಕದ ಒಂದು ಲಕ್ಷ ಪ್ರತಿಗಳನ್ನು ಮುದ್ರಿಸುತ್ತಿದೆ. ಅದನ್ನು ರಂಜಾನ್ ಸಂದರ್ಭದಲ್ಲಿ "ಗ್ರ್ಯಾಂಡ್ ಫಂಕ್ಷನ್" ನಲ್ಲಿ ವಿತರಿಸಲಾಗುವುದು ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ. ಇದು 'ವಜೀರ್-ಎ-ಆಜಂ ಜನಬ್ ನರೇಂದ್ರ ಮೋದಿ ಕೆ ಮನ್ ಕಿ ಬಾತ್ ಉರ್ದು ಕೆ ಸಾಥ್' 2022 ರಲ್ಲಿ ರೇಡಿಯೊದಲ್ಲಿ ಪ್ರಸಾರವಾದ ಪ್ರಧಾನಿಯವರ ಭಾಷಣಗಳ 12 ಸಂಚಿಕೆಗಳ ಸಂಕಲನವಾಗಿದೆ.












Click it and Unblock the Notifications