ಬೆಂಗಳೂರು, ಜನವರಿ 13: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ, ಪ್ರತಿಟೀಕೆ ಜೋರಾಗಿ ನಡೆಯುತ್ತಿದೆ. ಅವರು ಇಟ್ಟಿಗೆ ಎಸೆದರೆ, ಅವರು ಕಲ್ಲು ಎಸೆಯುತ್ತಿದ್ದಾರೆ!
ನಿನ್ನೆ ಕಾಂಗ್ರೆಸ್ ನವರು ಯೋಗಿ ಆದಿತ್ಯನಾಥ ಅವರನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ 'ಯೋಗಿ ರೆಸೆಪಿ' ವಿಡಿಯೋಗೆ ವಿರುದ್ಧವಾಗಿ ಉತ್ತರ ಪ್ರದೇಶ ಬಿಜೆಪಿ ಕರ್ನಾಟಕ ಕಾಂಗ್ರೆಸ್ ವಿರುದ್ಧ ವಿಡಿಯೋ ಬಿಡುಗಡೆ ಮಾಡಿದೆ.
ನಿನ್ನೆ ಕಾಂಗ್ರೆಸ್ ಟ್ವಿಟ್ಟರ್ ಖಾತೆಯಿಂದ ಪ್ರಕಟವಾಗಿದ್ದ 'ಯೋಗಿ ರೆಸಿಪಿ' (#RecipeforDisaster) ಯೋಗಿ ಆದಿತ್ಯನಾಥ ಅವರ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣ, ಗೋರಖ್‌ಪುರ ಮಕ್ಕಳ ಸಾವು, ಉಗ್ರ ಹಿಂದುತ್ವ ಪ್ರತಿಪಾದನೆ ಮತ್ತಿತರೆ ವಿಷಯಗಳನ್ನು ಹಾಸ್ಯಮಯವಾಗಿ ವಿಡಿಯೋದಲ್ಲಿ ಚಿತ್ರಿಸಲಾಗಿತ್ತು, ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.
ಕಾಂಗ್ರೆಸ್-ಬಿಜೆಪಿ ಬಿಸಿ ಬಿಸಿ ರೆಸಿಪಿ ಪಾಲಿಟಿಕ್ಸ್! ಯೋಗಿ-ಸಿದ್ದು ಜಿದ್ದಾಜಿದ್ದಿ!
ಈಗ ಈ ವಿಡಿಯೋಗೆ ಪ್ರತಿಯಾಗಿ ಉತ್ತರ ಪ್ರದೇಶದ ಬಿಜೆಪಿಯು ರಾಜ್ಯದ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ವಿಡಿಯೋ ಒಂದನ್ನು ಹರಿಬಿಟ್ಟಿದೆ. ರಾಜ್ಯ ಸರ್ಕಾರದ ಮೇಲೆ ಹಲವು ಆರೋಪಗಳನ್ನು ಮಾಡಿರುವ ಈ ವಿಡಿಯೋ 1.12 ನಿಮಿಷ ಇದೆ.
ವಿಡಿಯೋದಲ್ಲಿರುವ ಅಂಶಗಳನ್ನು ತಿಳಿಯಲು ಮುಂದೆ ಓದಿ...
|
ಚಿತ್ರ, ದಿನಾಂಕ ಸಮೇತ ಪ್ರಕಟ
ವಿಡಿಯೊದ ಪ್ರಾರಂಭದಲ್ಲೇ ಹಿಂದೂಗಳ ಹತ್ಯೆಯ ಪ್ರಸ್ತಾಪವನ್ನು ಮಾಡಲಾಗಿದೆ, ಕೊಲೆಯಾದವರ ಹೆಸರು, ಚಿತ್ರ ಮತ್ತು ದಿನಾಂಕಗಳನ್ನು ಸಹ ತೋರಿಸಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಸಾಯಿಸುತ್ತಾರೆ, ಹಗಲಲ್ಲೇ ಬಿದಿ ಹೆಣವಾಗಿಸುತ್ತಾರೆ ಎಂದು ಹಿನ್ನೆಲೆ ಧ್ವನಿಯೊಂದು ಹೇಳುತ್ತದೆ.

1002 ರೈತರು ಆತ್ಮಹತ್ಯೆ
ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಕರ್ನಾಟಕ ದಾಖಲೆ ಬರೆದಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ, ಕಾಂಗ್ರೆಸ್ ಸರ್ಕಾರ ರೈತರನ್ನು ಆತ್ಮಹತ್ಯೆಗೆ ಪ್ರೇರೇಪಿಸುತ್ತದೆ, ಜನರ ಕಣ್ಣಲ್ಲಿ ನೀಡು ಹಾಕಿಸುತ್ತದೆ, ಸರ್ಕಾರದ ಹಣವನ್ನು ಮುಖಂಡರು ತಿಂದು ತೇಗುತ್ತಿದ್ದಾರೆ ಎಂದು ವಿಡಿಯೋದಲ್ಲಿ ಚಿತ್ರಿಸಲಾಗಿದೆ, ಸಿದ್ದರಾಮಯ್ಯ ಅವರ ಚಿತ್ರ ಕೂಡ ಬಳಸಲಾಗಿದೆ.

ಕೇಸರಿ ಧ್ವಜ ಕಳ್ಳತನ ಮಾಡಿದಿರಿ
ಸಿದ್ದರಾಮಯ್ಯ ಅವರು ದೇವಸ್ಥಾನದಲ್ಲಿ ಮಂಗಳಾರತಿ ತೆಗೆದುಕೊಳ್ಳುತ್ತಿರುವ ಚಿತ್ರ ಹಾಕಿ, ಯೋಗಿ ಆದಿತ್ಯನಾಥ ಅವರು ಕರ್ನಾಟಕಕ್ಕೆ ಬಂದ ಕೂಡಲೇ ಸಿದ್ದರಾಮಯ್ಯ ಹಿಂದೂ ಆದರು. ರಾಹುಲ್ ಗಾಂಧಿ ಅವರು ಕೇಸರಿ ಶಾಲು ಧರಿಸಿರುವ ಚಿತ್ರ ತೋರಿಸಿ, ಹಿಂದೂ ವಿರೋಧಿಗಳಾಗಿದ್ದ ನೀವು ನಮ್ಮ ಕೇಸರಿ ಧ್ವಜ (ಭಗವಾ ಧ್ವಜ) ಸಹ ಕದ್ದುಬಿಟ್ಟಿರಿ ಎಂದು ವಿಡಿಯೋದಲ್ಲಿ ಹೇಳಲಾಗಿದೆ.
|
ರೆಸಿಪಿ ಮಾಡುವ ಗತಿ ಬರುತ್ತಿರಲಿಲ್ಲ
ವಿಡಿಯೋದ ಅಂತ್ಯದಲ್ಲಿ 'ಯೋಗಿ ರೆಸಿಪಿ' ವಿಡಿಯೋಗೆ ಟಾಂಗ್ ನೀಡಿರುವ ಬಿಜೆಪಿ, 'ಕೇವಲ ಗಲಭೆ ಮಾಡಿಸುವುದು, ಧರ್ಮದ ಆಧಾರದಲ್ಲಿ ಜನರನ್ನು ಒಡೆಯುವ ಕಾರ್ಯ ಮಾಡಿದ ನೀವು 5 ವರ್ಷದಲ್ಲಿ ಚಿಟಿಕೆಯಷ್ಟೂ ಕೆಲಸ ಮಾಡಲಿಲ್ಲ, ಸರಿಯಾಗಿ ಕೆಲಸ ಮಾಡಿದ್ದರೆ ಈಗ ರೆಸಿಪಿ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ' ಎನ್ನುವಲ್ಲಿಗೆ ವಿಡಿಯೊ ಮುಕ್ತಾಯವಾಗುತ್ತದೆ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!