'ಜಿನ್ನಾ ಒಬ್ಬ ಮಹಾಪುರುಷ': ವಿವಾದ ಸೃಷ್ಟಿಸಿದ ಬಿಜೆಪಿ ಸಂಸದೆ

ಬಹ್ರೈಚ್, ಮೇ 11: ಪಾಕಿಸ್ತಾನ ಸಂಸ್ಥಾಪಕ ಮೊಹ್ಮದ್ ಅಲಿ 'ಜಿನ್ನಾ ಒಬ್ಬ ಮಹಾಪುರುಷ' ಎನ್ನುವ ಮೂಲಕ ಬಿಜೆಪಿ ಸಂಸದ ಸಾವಿತ್ರಿ ಬಾಯಿ ಫುಲೆ ಎಂಬುವವರು ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

'ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜಿನ್ನಾ ಒಬ್ಬ ಮಹಾಪುರುಷ. ಅವರು ಎಂದಿಗೂ ಮಹಾಪುರುಷರಾಗಿಯೇ ಇರುತ್ತಾರೆ' ಎಂದು ಅವರು ಹೇಳಿರುವುದು ವಿವಾದ ಸೃಷ್ಟಿಸಿದೆ.

ಸಾವಿತ್ರಿ ಬಾಯಿ ಫುಲೆ ಉತ್ತರ ಪ್ರದೇಶದ ಬಹ್ರೈಚ್ ಲೋಕಸಭಾ ಕ್ಷೇತ್ರದ ಸಂಸದೆಯಾಗಿದ್ದಾರೆ.

Uttar Pradesh: BJP MP calls Jinnah maha purush

ಇತ್ತೀಚೆಗಷ್ಟೆ ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ(ಎಎಂಯು)ದಲ್ಲಿ ಪಾಕಿಸ್ತಾನ ಸಂಸ್ಥಾಪಕ ಜಿನ್ನಾ ಚಿತ್ರವಿದ್ದಿದ್ದು ವಿವಾದ ಸೃಷ್ಟಿಸಿತ್ತು. ಭಾರತೀಯ ವಿಶ್ವವಿದ್ಯಾಲಯದಲ್ಲಿ ಪಾಕಿಸ್ತಾನ ಸಂಸ್ಥಾಪಕನ ಚಿತ್ರವಿರುವುದೇಕೆ ಎಂದು ಬಿಜೆಪಿಯ ಹಲವು ನಾಯಕರು ಪ್ರಶ್ನಿಸಿದ್ದರು. ಆದರೆ ಇದೀಗ ಬಿಜೆಪಿ ಸಂಸದೆಯೇ ಇಂಥ ಹೇಳಿಕೆ ನೀಡಿರುವುದು ಬಿಜೆಪಿ ನಾಯಕರಿಗೆ ಇರಿಸುಮುರಿಸುಂಟು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+