1.8 ಕೋಟಿ ರೂಪಾಯಿ ಪರಿಹಾರ ಪಡೆದ ಭಾರತದ ವಿದ್ಯಾರ್ಥಿಗಳಿಗೆ ದಿಢೀರ್ ಆಘಾತ ನೀಡಿದ ಅಮೆರಿಕ ವಿವಿ... Indian Students
ಭಾರತದ ವಿದ್ಯಾರ್ಥಿಗಳು ಹೊರ ದೇಶಗಳಲ್ಲಿ ಓದಿ, ಅಲ್ಲೇ ಕೆಲಸ ಪಡೆಯಬೇಕು ಎಂಬ ಆಸೆ ಹಾಗೂ ಕನಸು ಕಂಡಿರುತ್ತಾರೆ. ಇದೇ ಕಾರಣಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ವಿದೇಶಕ್ಕೆ ಹೋಗಿ ಅಲ್ಲಿಯೇ ಶಿಕ್ಷಣ ಕೂಡ ಪಡೆಯುತ್ತಾರೆ. ಅದರಲ್ಲೂ ಅಮೆರಿಕದಲ್ಲಿ ಓದುತ್ತಿರುವ ಭಾರತ ಮೂಲದ, ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕೆ ಪ್ಲಾನಿಂಗ್ ಮಾಡುತ್ತಿದ್ದಾರೆ. ಹೀಗಿದ್ದಾಗ ಒಂದಲ್ಲ ಒಂದು ವಿಚಾರವಾಗಿ ಅಮೆರಿಕ ಸರ್ಕಾರ ಕಿರಿಕ್ ಮಾಡುತ್ತಿದ್ದು, ಭಾರತೀಯ ವಿದ್ಯಾರ್ಥಿಗಳಿಗೆ ತೊಂದರೆಯನ್ನ ಕೊಡುತ್ತಿರುವ ಆರೋಪ ಇದೆ. ಇಂತಹ ಸಮಯದಲ್ಲೇ ಒಟ್ಟು 1.8 ಕೋಟಿ ರೂಪಾಯಿ ಪರಿಹಾರ ಪಡೆದ ಭಾರತದ ವಿದ್ಯಾರ್ಥಿಗಳಿಗೆ ದಿಢೀರ್ ಆಘಾತ ನೀಡಿದೆ ಅಮೆರಿಕದ ವಿಶ್ವವಿದ್ಯಾಲಯ.
ಅಮೆರಿಕ ಅನ್ನೋ ದೇಶದಲ್ಲಿ ಆಹಾರ ಪದ್ಧತಿಯೇ ವಿಚಿತ್ರ, ಅಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಮಾಂಸ ಎಂದರೆ ನಾನ್ ವೆಜ್ ತಿನ್ನುವವರು ಇದ್ದಾರೆ. ಹೀಗಿದ್ದಾಗ ಸಸ್ಯಾಹಾರಿಗಳ ಬಗ್ಗೆ ಟೀಕೆ ಮಾಡುವುದು ಹಾಗೂ ಸಸ್ಯಾಹಾರಿಗಳಿಗೆ ಸಮಸ್ಯೆ ಮಾಡುವ ಆರೋಪಗಳು ಪದೇ ಪದೇ ಕೇಳಿಬರುತ್ತಲೇ ಇರುತ್ತದೆ. ಈ ಪೈಕಿ ಭಾರತ ಮೂಲದ ಸಸ್ಯಾಹಾರಿ ವಿದ್ಯಾರ್ಥಿಗಳಿಗೆ ಇಂತಹ ಸಮಯಸ್ಯೆಗಳು ಹೆಚ್ಚು. ಇದೇ ರೀತಿ ಭಾರತ ಮೂಲದ ಆದಿತ್ಯ ಪ್ರಕಾಶ್ ಮತ್ತು ಅವರ ಪತ್ನಿ ಊರ್ಮಿ ಭಟ್ಟಾಚಾರ್ಯ ಅವರಿಗೂ ಆಹಾರದ ವಿಚಾರದಲ್ಲಿ ಜನಾಂಗೀಯ ತಾರತಮ್ಯ ಮಾಡಿರುವ ಆರೋಪ ಕೇಳಿಬಂದಿತ್ತು.

ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ನಿಷೇಧ
ಭಾರತದ ಆಹಾರದ ವಾಸನೆ ಕುರಿತು ವಿವಾದ ಸೃಷ್ಟಿ ಮಾಡಿದ್ದರು ಅಮೆರಿಕದ ಕೊಲೆರಾಡೋ ಬೋಲ್ಡರ್ ವಿಶ್ವವಿದ್ಯಾಲಯದವರು. ಈ ವಿಚಾರವಾಗಿ ಭಾರತದ ಇಬ್ಬರು ಸಂಶೋಧನಾ ವಿದ್ಯಾರ್ಥಿಗಳು ಕಾನೂನು ಹೋರಾಟ ನಡೆಸಿದ್ದರು. ಆದಿತ್ಯ ಪ್ರಕಾಶ್ ಮತ್ತು ಅವರ ಪತ್ನಿ ಊರ್ಮಿ ಭಟ್ಟಾಚಾರ್ಯ ಈ ಕುರಿತಾಗಿ ಕಾನೂನು ಹೋರಾಟ ನಡೆಸಿ ಗೆದ್ದು ಭರ್ಜರಿ 1.8 ಕೋಟಿ ರೂಪಾಯಿ ಪರಿಹಾರ ಪಡೆದಿದ್ದರು. ಆದರೆ ಇದೇ ವಿದ್ಯಾರ್ಥಿಗಳಿಗೆ ಇದೀಗ ಸಮಸ್ಯೆ ಎದುರಾಗಿದ್ದು, ವಿಶ್ವವಿದ್ಯಾಲಯ ಈ ವಿದ್ಯಾರ್ಥಿಗಳಿಗೆ ನಿಷೇಧ ಹೇರಿದೆ.
ಆಹಾರ ಬಿಸಿ ಮಾಡುವಾಗ ವಿವಾದ ಶುರು
ಈ ವಿವಾದ ಶುರುವಾಗಿದ್ದು ಆಹಾರ ಬಿಸಿ ಮಾಡುವ ವಿಚಾರದಿಂದ ಎಂದು ಆದಿತ್ಯ ಪ್ರಕಾಶ್ ಹಾಗೂ ಅವರ ಹೆಂಡತಿ ಊರ್ಮಿ ಭಟ್ಟಾಚಾರ್ಯ ಪ್ರಕರಣದ ಬಗ್ಗೆ ವಿವರಿಸಿದ್ದಾರೆ. ಯುನಿವರ್ಸಿಟಿ ಕ್ಯಾಂಪಸ್ ಒಳಗೆ ಭಾರತೀಯ ಆಹಾರ ಬಿಸಿ ಮಾಡುವ ವಿಚಾರದಿಂದ ವಿವಾದವಾಗಿ ಹೊರಹೊಮ್ಮಿದ್ದ ಈ ಕಿರಿಕ್ ಕೊನೆಗೆ ಕಾನೂನು ಹೋರಾಟದ ಹಂತಕ್ಕೆ ಬಂದು ತಲುಪಿತ್ತು. ಬೌಲ್ಡರ್ ವಿವಿ ವಿರುದ್ಧ ಭಾರತೀಯರ ಕಾನೂನು ಹೋರಾಟ ದೊಡ್ಡದಾಗುತ್ತಿದ್ದಂತೆ, ಇಡೀ ಅಮೆರಿಕದಲ್ಲಿ ಈ ಪ್ರಕರಣವು ದೊಡ್ಡ ಸೌಂಡ್ ಮಾಡಿತ್ತು. ಅಲ್ಲದೆ ಆಹಾರದ ವಿಚಾರದಲ್ಲಿ ಈ ರೀತಿಯ ವರ್ತನೆಗಳ ವಿರುದ್ಧ ತೀವ್ರ ಆಕ್ರೋಶ ಕೂಡ ಮೊಳಗುವಂತೆ ಮಾಡಿತ್ತು.
ಕಾನೂನು ಹೋರಾಟದಲ್ಲಿ ಭಾರತ ಮೂಲದ ವಿದ್ಯಾರ್ಥಿಗಳು ಬೌಲ್ಡರ್ ವಿವಿಯಿಂದ ಭರ್ಜರಿ 2,00,000 ಅಮೆರಿಕನ್ ಡಾಲರ್ ಎಂದರೆ ಸುಮಾರು 1.8 ಕೋಟಿ ರೂಪಾಯಿ ಪರಿಹಾರವನ್ನ ಪಡೆದಿದ್ದರು. 2025 ಸೆಪ್ಟೆಂಬರ್ ತಿಂಗಳ ಹೊತ್ತಿಗೆ ಈ ವಿವಾದವು ಬಗೆಹರಿದು, ಪರಿಹಾರ ವಿದ್ಯಾರ್ಥಿಗಳಿಗೆ ಸಿಕ್ಕಿದೆ. ಹೀಗಿದ್ದಾಗ ಇದೇ ತಿಂಗಳ ಆರಂಭದಲ್ಲಿ ಈ ಇಬ್ಬರೂ ತವರಿಗೆ ಎಂದರೆ ಭಾರತಕ್ಕೆ ಮರಳಿದ್ದಾರೆ. ಆದರೆ ಇಬ್ಬರಿಗೂ ವಿಶ್ವವಿದ್ಯಾಲಯ ದೊಡ್ಡ ಆಘಾತ ನೀಡಿದ್ದು, ಭವಿಷ್ಯದಲ್ಲಿ ಯಾವುದೇ ದಾಖಲಾತಿ ಮಾಡಿಕೊಳ್ಳಲು ಆಗದ ರೀತಿ ಆದೇಶ ಹೊರಡಿಸಿದೆ. ಹಾಗೇ ವಿಶ್ವವಿದ್ಯಾಲಯದಲ್ಲಿ ಯಾವುದೇ ಉದ್ಯೋಗ ಪಡೆಯುವುದು ಕೂಡ ನಿಷೇಧಿತವಾಗಿದೆ. ಈ ಮೂಲಕ ಭಾರತ ಮೂಲದ ಈ ವಿದ್ಯಾರ್ಥಿಗಳನ್ನು ಅಮೆರಿಕ ಮೂಲದ ಯುನಿವರ್ಸಿಟಿ ನಿಷೇಧಿಸಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.












Click it and Unblock the Notifications