119 ಅಕ್ರಮ ಭಾರತೀಯ ವಲಸಿಗರು ಅಮೆರಿಕದಿಂದ 2ನೇ ಬ್ಯಾಚ್‌ನಲ್ಲಿ ವಾಪಸ್

ಚಂಡೀಗಢ, ಫೆಬ್ರವರಿ 16: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಪ್ರಾರಂಭವಾದ ಬಳಿಕ ಗಡಿಪಾರು ಕಾರ್ಯಾಚರಣೆ ಆರಂಭವಾಗಿದೆ. 2ನೇ ಹಂತದಲ್ಲಿ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 119 ಭಾರತೀಯರನ್ನು ವಿಶೇಷ ಸೇನಾ ವಿಮಾನದ ಮೂಲಕ ಭಾರತಕ್ಕೆ ಕಳಿಸಲಾಗಿದೆ. ಶನಿವಾರ ರಾತ್ರಿ ಈ ವಿಮಾನ ಅಮೃತಸರಕ್ಕೆ ಆಗಮಿಸಿದೆ.

119 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕದ ಸೇನಾ ವಿಮಾನ ಸಿ-17 ಅಮೃತಸರದಲ್ಲಿರುವ ಶ್ರೀ ಗುರು ರಾಮದಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ರಾತ್ರಿ 11.40ಕ್ಕೆ ಲ್ಯಾಂಡ್ ಆಗಿದೆ. ಮೊದಲ ಬ್ಯಾಚ್‌ನಲ್ಲಿ ಅಮೆರಿಕ 104 ಅಕ್ರಮ ಭಾರತೀಯ ವಲಸಿಗರನ್ನು ವಾಪಸ್ ಕಳಿಸಿತ್ತು.

US Plane 2nd Batch Of 119 Indian Immigrants Lands In Amritsar

ಡೊನಾಲ್ಡ್ ಟ್ರಂಪ್ ಆಡಳಿತ ಪ್ರಾರಂಭವಾದ ಬಳಿಕ 10 ದಿನಗಳ ಅಂತರದಲ್ಲಿ ಎರಡು ಬ್ಯಾಚ್‌ಗಳಲ್ಲಿ ಅಕ್ರಮ ಭಾರತೀಯ ವಲಸಿಗರನ್ನು ಸೇನಾ ವಿಮಾನದ ಮೂಲಕ ಭಾರತಕ್ಕೆ ವಾಪಸ್ ಕಳಿಸಲಾಗಿದೆ. 157 ಭಾರತೀಯರು ಇರುವ 3ನೇ ಬ್ಯಾಚ್ ಭಾನುವಾರ ದೇಶಕ್ಕೆ ವಾಪಸ್ ಆಗುವ ನಿರೀಕ್ಷೆ ಇದೆ.

ಕಾದು ಕುಳಿತಿದ್ದ ಸಂಬಂಧಿಕರು: ಅಮೃತಸರದಲ್ಲಿರುವ ಶ್ರೀ ಗುರು ರಾಮದಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 119 ಅಕ್ರಮ ಭಾರತೀಯ ವಲಸಿಗರು ಇರುವ ವಿಮಾನ ಶನಿವಾರ ಬೆಳಗ್ಗೆಯೇ ಆಗಮಿಸುವ ನಿರೀಕ್ಷೆ ಇತ್ತು. ಆದ್ದರಿಂದ ವಿಮಾನ ನಿಲ್ದಾಣದ ಸಮೀಪ ಅಕ್ರಮ ಭಾರತೀಯ ವಲಸಿಗರ ಸಂಬಂಧಿಕರು, ಕುಟುಂಬದವರು ಕಾದು ಕುಳಿತಿದ್ದರು.

2ನೇ ಬ್ಯಾಚ್‌ನಲ್ಲಿ ಆಗಮಿಸಿದ 119 ಜನರ ಪೈಕಿ ಪಂಜಾಬ್‌ನ 67, ಹರ್ಯಾಣದ 33, ಗುಜರಾತ್‌ನ 8, ಉತ್ತರ ಪ್ರದೇಶದ 3, ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ತಲಾ ಇಬ್ಬರು, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಒಬ್ಬರು ಸೇರಿದ್ದಾರೆ.

ಮೊದಲ ಬ್ಯಾಚ್‌ನಲ್ಲಿ ಟೆಕ್ಸಾಸ್‌ನಿಂದ ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ವಿಮಾನ ಆಗಮಿಸಿತ್ತು. ಈ ವಿಮಾನದಲ್ಲಿದ್ದವರಿಗೆ ಕೈಕೋಳ ಹಾಕಲಾಗಿತ್ತು ಎಂಬುದು ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಕ್ರಮ ಭಾರತೀಯ ವಲಸಿಗರ ಜೊತೆ ಮಾನವೀಯತೆಯಿಂದ ನಡೆದುಕೊಳ್ಳುವಂತೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿ ಗುರುವಾರ ಅಮೆರಿಕಕ್ಕೆ ಭೇಟಿ ನೀಡಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವರನ್ನು ಭೇಟಿ ಮಾಡಿದ್ದರು. ಅವರು ಅಮೆರಿಕದಿಂದ ಭಾರತಕ್ಕೆ ವಾಪಸ್ ಆಗುತ್ತಿದ್ದಂತೆಯೇ 2ನೇ ಬ್ಯಾಚ್‌ನಲ್ಲಿ ಅಕ್ರಮ ವಲಸಿಗರನ್ನು ಅಮೆರಿಕ ವಾಪಸ್ ಕಳಿಸಿದೆ.

ಅಮೆರಿಕದಲ್ಲಿ 487ಕ್ಕೂ ಅಧಿಕ ಅಕ್ರಮ ವಲಸಿಗರು ಇದ್ದಾರೆ ಎಂದು ಅಂದಾಜಿಸಲಾಗಿದೆ. ದಾಖಲೆಗಳನ್ನು ಪರಿಶೀಲನೆ ಮಾಡಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಿ, ಭಾರತಕ್ಕೆ ವಾಪಸ್ ಕಳಿಸಲಾಗುತ್ತಿದೆ. ಈಗಾಗಲೇ ಎರಡು ಹಂತದಲ್ಲಿ ಅಕ್ರಮ ವಲಸಿಗರನ್ನು ಅಮೆರಿಕ ದೇಶಕ್ಕೆ ವಾಪಸ್ ಕಳಿಸಿದೆ.

ಮೊದಲ ಹಂತದಲ್ಲಿ ಹರ್ಯಾಣದ 33, ಗುಜರಾತ್‌ನ 33, ಪಂಜಾಬ್‌ನ 30, ಮಹಾರಾಷ್ಟ್ರದ 3, ಉತ್ತರ ಪ್ರದೇಶದ 3, ಚಂಡೀಗಢನ ಇಬ್ಬರನ್ನು ಅಮೆರಿಕ ವಾಪಸ್ ಕಳಿಸಿತ್ತು. ಭಾನುವಾರ 157 ಜನರ ಮತ್ತೊಂದು ತಂಡವನ್ನು ವಾಪಸ್ ಕಳಿಸಲಾಗುತ್ತದೆ ಎಂಬ ಮಾಹಿತಿ ಇದೆ.

ಅಮೆರಿಕದಿಂದ ಗಡಿಪಾರಾದ ಭಾರತೀಯರು ಅಮೃತಸರದಲ್ಲಿರುವ ಶ್ರೀ ಗುರು ರಾಮದಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂದೆ ಸಾಗಲು ಪಂಜಾಬ್ ಸರ್ಕಾರ ಅಗತ್ಯ ವ್ಯವಸ್ಥೆಯನ್ನು ಮಾಡುತ್ತಿದೆ. ಶನಿವಾರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಭಗವಂತ್ ಮಾನ್ ಗಡಿಪಾರಾದ ವಲಸಿಗರನ್ನು ಹೊತ್ತ ವಿಮಾನವನ್ನು ಪಂಜಾಬ್‌ಗೆ ಏಕೆ ಕಳಿಸಲಾಗುತ್ತಿದೆ. ನವದೆಹಲಿಯಲ್ಲಿ ಏಕೆ ವಿಮಾನ ಇಳಿಯುತ್ತಿಲ್ಲ? ಎಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+