ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಣಾಚಲ ಗಡಿಯಲ್ಲಿ ನೂರಾರು ಕಟ್ಟಡಗಳನ್ನು ನಿರ್ಮಿಸಿದ್ದ ಚೀನಾ

|
Google Oneindia Kannada News

ಟಿಬೆಟ್ ಹಾಗೂ ಅರುಣಾಚಲಪ್ರದೇಶದ ಗಡಿ ಭಾಗದಲ್ಲಿ ಚೀನಾವು ನೂರಕ್ಕೂ ಅಧಿಕ ವಸತಿ ಕಟ್ಟಡಗಳನ್ನು ನಿರ್ಮಿಸಿತ್ತು, ಆದರೆ ಗಡಿಯಲ್ಲಿ ಭಾರತ ಪ್ರಚೋದನೆ ಮಾಡುತ್ತಿದೆ ಎಂದು ಚೀನಾ ಆರೋಪಿಸುತ್ತಿದೆ ಎಂದು ಅಮೆರಿಕ ಹೇಳಿದೆ.

ಅಮೆರಿಕದ ಕಾಂಗ್ರೆಸ್‌ಗೆ ಸಲ್ಲಿಕೆಯಾಗಿರುವ ವರದಿಯಲ್ಲಿ ಈ ಅಂಶ ಉಲ್ಲೇಖವಾಗಿದೆ. ಈ ಮೂಲಕ ಅರುಣಾಚಲಪ್ರದೇಶದ ಗಡಿಯಲ್ಲಿ ಚೀನಾ ತನ್ನ ಕಾರ್ಯಚಟುವಟಿಕೆಗಳನ್ನು ಹೆಚ್ಚಿಸಿದ್ದು, ಹಾಗೂ ವಿವಾದಿತ ಭೂ ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವುದು ಅಮೆರಿಕ ವರದಿಯಿಂದ ಬಹಿರಂಗಗೊಂಡಿದೆ.

China Army

ಭಾರತದೊಂದಿಗೆ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‌ಎಸಿ) ತನ್ನ ಹಕ್ಕುಗಳನ್ನು ಒತ್ತಿಹೇಳಲು ಚೀನಾ "ಒತ್ತಡ ಮತ್ತು ಯುದ್ಧತಂತ್ರದ ಕ್ರಮಗಳನ್ನು" ಅನುಸರಿಸುತ್ತಿದೆ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಹಾಗೂ ನಂತರದ ಸಮಯದಲ್ಲಿ ಭಾರತದ ಜೊತೆಗಿನ ತನ್ನ ಸಂಬಂಧ ಗಾಢವಾಗದಂತೆ ತಡೆಯಲು ವಿಫಲವಾಗಿದೆ ಎಂದು ಚೀನಾದ ಮಿಲಿಟರಿ ಆಧುನೀಕರಣ ಕುರಿತ ಪ್ರಮುಖ ವರದಿಯಲ್ಲಿ ಅಮೆರಿಕ ಹೇಳಿದೆ.

ಚೀನಾ ರಫ್ತುದಾರರಿಗೆ ದೀಪಾವಳಿಯಲ್ಲಿ 50 ಸಾವಿರ ಕೋಟಿ ರೂ. ನಷ್ಟಚೀನಾ ರಫ್ತುದಾರರಿಗೆ ದೀಪಾವಳಿಯಲ್ಲಿ 50 ಸಾವಿರ ಕೋಟಿ ರೂ. ನಷ್ಟ

ತೈವಾನ್ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನಾ ನಡುವಿನ ಉದ್ವಿಗ್ನತೆಯ ನಡುವೆ ಪೆಂಟಗನ್ ವರದಿ ಬಂದಿದೆ ಮತ್ತು ತೈವಾನ್​ ಅನ್ನು ರಕ್ಷಿಸುವ ಸಾಮರ್ಥ್ಯ ಅಮೆರಿಕ ಸೇನೆಗೆ ಇದೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಎಂದು ಎಂದು ಅಮೆರಿಕ ಸಶಸ್ತ್ರ ಪಡೆಗಳ ಮುಖ್ಯಸ್ಥ ಜಾಯಿಂಟ್ ಚೀಫ್ಸ್​ ಚೇರ್​ಮನ್ ಮಾರ್ಕ್ ಮಿಲೆ ಅವರು ಬುಧವಾರ ಹೇಳಿದ್ದಾರೆ.

"ಪಲ್ಸ್ ರಿಪಬ್ಲಿಕ್ ಆಫ್ ಚೀನಾ(ಪಿಆರ್ ಸಿ)ದ ಗಡಿ ಉದ್ವಿಗ್ನತೆಯನ್ನು ತಡೆಯಲು ಭಾರತ ಅಮೆರಿಕದೊಂದಿಗೆ ಹೆಚ್ಚು ನಿಕಟವಾಗಿದೆ. ಪಿಆರ್ ಸಿ ಅಧಿಕಾರಿಗಳು ಭಾರತ-ಚೀನಾ ಸಂಬಂಧದಲ್ಲಿ ಮಧ್ಯಪ್ರವೇಶಿಸದಂತೆ ಅಮೆರಿಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ" ಎಂದು ರಕ್ಷಣಾ ಇಲಾಖೆಯು ಅಮೆರಿಕ ಕಾಂಗ್ರೆಸ್ ಗೆ ತಿಳಿಸಿದೆ.

ಪೂರ್ವ ಲಡಾಖ್‌ನಲ್ಲಿ ಭಾರತ-ಚೀನಾ ಮಿಲಿಟರಿ ಬಿಕ್ಕಟ್ಟಿನ ಕುರಿತು ಪೆಂಟಗಾನ್ ನಿಯಮಿತವಾಗಿ ಅಮೆರಿಕ ಕಾಂಗ್ರೆಸ್‌ಗೆ ವರದಿ ಮಾಡುತ್ತದೆ.

ಚೀನಾ ತನ್ನ ನೆರೆಹೊರೆಯವರೊಂದಿಗೆ ವಿಶೇಷವಾಗಿ ಭಾರತದೊಂದಿಗೆ ಆಕ್ರಮಣಕಾರಿ ಮತ್ತು ಬಲವಂತದ ವರ್ತನೆಯಲ್ಲಿ ತೊಡಗಿಸಿಕೊಂಡಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಸ್ಪಷ್ಟವಾಗಿ ಹೇಳಿದೆ.

ಎಲ್‌ಎಸಿ ತನ್ನದು ಎಂದು ಹೇಳಿಕೊಳ್ಳಲು ಚೀನಾ ಕುಶಲತೆಯ ಹಾಗೂ ಹೆಚ್ಚು ಒತ್ತಡ ಹೇರುವ ತಂತ್ರ ಅನುಸರಿಸಿದ್ದರೂ ಅದು ಕೈಗೂಡಿಲ್ಲ ಎಂದು ಚೀನಾಗೆ ಸಬಂಧಿಸಿದಂತೆ ಸಿದ್ಧಪಡಿಸಲಾಗಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತೈವಾನ್ ಹಾಗೂ ಅದರ ಸುತ್ತಮುತ್ತಲಿನ ವ್ಯಾಪ್ತಿಯ ಪ್ರದೇಶಗಳ ಮೇಲೆ ನಿಯಂತ್ರಣ ಹೊಂದುವ ನಿಟ್ಟಿನಲ್ಲಿ ಅಮೆರಿಕ-ಡ್ರ್ಯಾಗನ್ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿರುವ ಸಮಯದಲ್ಲಿಯೇ ಈ ವರದಿ ಪ್ರಕಟವಾಗಿದೆ.

ವರದಿಯಲ್ಲಿ 2020ರಮೇನಲ್ಲಿ ಭಾರತದ ನಿಯಂತ್ರಣ ಹೊಂದಿರುವ ಪ್ರದೇಶಗಳ ಮೇಲೆ ಚೀನಾ ದಾಳಿ ಎಂಬ ಅಂಶವನ್ನು ಪ್ರಸ್ತಾವಿಸಲಾಗಿದೆ.

English summary
The United States Department of Defence has said that the stand-off between India and China at the Line of Actual Control (LAC) since May 2020 gave the People’s Liberation Army (PLA) “valuable real-world operational and tactical experience”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X