ಅಮೆರಿಕ ರಾಯಭಾರಿ ಪಾವೆಲ್ -ಮೋದಿ ಭೇಟಿ ಆಯ್ತು
ಅಹಮದಾಬಾದ್,
ಫೆ.13- ಭವಿಷ್ಯದಲ್ಲಿ ಭಾರಿ ಪರಿಣಾಮ ಬೀರಬಹುದಾದಂತಹ ಮಹತ್ತರ ಬೆಳವಣಿಗೆಯಲ್ಲಿ ಭಾರತದಲ್ಲಿನ ಅಮೆರಿಕದ ಅಂಬಾಸಿಡರ್ ನ್ಯಾನ್ಸಿ ಪಾವೆಲ್ ಅವರು ಇಂದು ಬೆಳಗ್ಗೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. id="toptextpromo"> id='are-slot-1' class='oiad oi-axt oiadv'>ನರೇಂದ್ರ
ಮೋದಿ ಕೋಮುವಾದಿ ಎಂದು ಜರಿದು ಅವರನ್ನು 2005ರಿಂದ ತನ್ನ ದೇಶದೊಳಕ್ಕೆ ಬಿಟ್ಟುಕೊಳ್ಳದಿದ್ದ ಅಮೆರಿಕ ಇದೀಗ ತನ್ನ ನಿಲುವಿನಲ್ಲಿ ಯು ಟರ್ನ್ ತೆಗೆದುಕೊಂಡು 'ಮೋದಿಯನ್ನು ಭೇಟಿ ಮಾಡಿ ರಾಜಕೀಯ ಸಂಬಂಧ ಸುಧಾರಿಸಿಕೊಳ್ಳುವಂತೆ' ತನ್ನ ರಾಯಭಾರಿಗೆ ಸೂಚಿಸಿತ್ತು. ಅದರಂತೆ, ನ್ಯಾನ್ಸಿ ಪಾವೆಲ್ ಅವರು ಅಮೆರಿಕ ಮತ್ತು ಮೋದಿ ನಡುವೆ ಉತ್ತಮ ಬಾಂಧವ್ಯ ಕಂಡುಕೊಳ್ಳಲು ಗಾಂಧಿನಗರದತ್ತ ಹೆಜ್ಜೆ ಹಾಕಿದ್ದಾರೆ.id='are-slot-2' class='oiad oi-axt oiadv'>

ಅಮೆರಿಕ ರಾಯಭಾರಿ ಪಾವೆಲ್ -ಮೋದಿ ಭೇಟಿ ಆಯ್ತು
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದಲ್ಲಿ ಈ ಭೇಟಿ ಏರ್ಪಟ್ಟಿದೆ. ಬುಧವಾರ ಸಂಜೆಯೇ ಗಾಂಧಿನಗರಕ್ಕೆ ಬಂದಿಳಿದಿದ್ದ ಪಾವೆಲ್, ಇಂದು ಬೆಳಗ್ಗೆ ಪೂರ್ವನಿಗದಿಯಂತೆ ಮೋದಿ ಅವರನ್ನು ಭೇಟಿ ಮಾಡಿದರು.

ಅಮೆರಿಕ ರಾಯಭಾರಿ ಪಾವೆಲ್ -ಮೋದಿ ಭೇಟಿ ಆಯ್ತು
ನ್ಯಾನ್ಸಿ ಪಾವೆಲ್ ಅವರು ವಿಪಕ್ಷ ನಾಯಕ ಶಂಕರಸಿಂಘ್ ವಘೇಲಾ ಅವರನ್ನೂ ಭೇಟಿ ಮಾಡಲಿದ್ದಾರೆ. ಜತೆಗೆ ಗುಜರಾತಿನಲ್ಲಿ ಇನ್ನೂ ಹಲವು ಕಾರ್ಯಮಕ್ರಮಗಳಲ್ಲಿ ಇಂದು ಭಾಗವಹಿಸಲಿದ್ದಾರೆ.

ಅಮೆರಿಕ ರಾಯಭಾರಿ ಪಾವೆಲ್ -ಮೋದಿ ಭೇಟಿ ಆಯ್ತು
ಗುಜರಾತಿಗೆ ಮೂರು ದಿನಗಳ ಭೇಟಿ ನೀಡಿರುವ ಅಂಬಾಸಿಡರ್ ನ್ಯಾನ್ಸಿ ಪಾವೆಲ್ ಅವರು ದೀನದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯ ಆಯೋಜಿಸಿರುವ ಸೆಮಿನಾರ್ ನಲ್ಲಿ ಪಾಳ್ಗೊಳ್ಳಲಿದ್ದಾರೆ. ಮಹಿಳಾ ಸೆವಾ ಸಂಸ್ಥೆ (Self Employed Women Association) ಆಯೋಜಿಸಿರುವ ಕಾರ್ಯಕ್ರಮದಲ್ಲಿಯೂ ಭಾಗವಹಿಸಲಿದ್ದಾರೆ.

ಅಮೆರಿಕ ರಾಯಭಾರಿ ಪಾವೆಲ್ -ಮೋದಿ ಭೇಟಿ ಆಯ್ತು
ಪ್ರಧಾನಿ ಮನಮೋಹನ್ ಸಿಂಗ್ ಅವರು ಇತ್ತೀಚೆಗೆ ಅಹಮದಾಬಾದಿನಲ್ಲಿ ಉದ್ಘಾಟಿಸಿದ್ದ ಸರ್ದಾರ್ ಪಟೇಲ್ ಸ್ಮಾರಕಕ್ಕೂ ಪಾವೆಲ್ ಭೇಟಿ ನೀಡಲಿದ್ದಾರೆ. ನಂತರ ಸುಪ್ರಸಿದ್ದ Adalaj step well ಸ್ಥಳಕ್ಕೂ ಭೇಟಿ ನೀಡಲಿದ್ದಾರೆ.












Click it and Unblock the Notifications