UPSC ಪೂರ್ವಭಾವಿ ಪರೀಕ್ಷೆ ಫಲಿತಾಂಶ 2019 ಪ್ರಕಟ

ನವದೆಹಲಿ, ಜುಲೈ 16: ಕೇಂದ್ರ ನಾಗರಿಕ ಸೇವಾ ಆಯೋಗ(UPSC) ನಡೆಸಿದ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವು ಜುಲೈ 16ರಂದು ಪ್ರಕಟವಾಗಿದೆ. ಆಯೋಗದ ಅಧಿಕೃತ ವೆಬ್ತಾಣದಲ್ಲಿ ಸಂಪೂರ್ಣ ಫಲಿತಾಂಶವನ್ನು ಪಡೆಯಬಹುದು.

ಯುಪಿಎಸ್ಸಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳು ಮತ್ತೊಮ್ಮೆ ಅಧಿಕೃತ ವೆಬ್ತಾಣದ ಮೂಲಕ ಆಗಸ್ಟ್ 1ರಿಂದ ಆಗಸ್ಟ್ 16ರ ತನಕ ಮತ್ತೊಮ್ಮೆ ನೋಂದಣಿ ಮಾಡಿಕೊಳ್ಳಬೇಕು ಎಂದು ಆಯೋಗ ಪ್ರಕಟಿಸಿದೆ.

ಅರ್ಹತೆ ಪಡೆದ ಅಭ್ಯರ್ಥಿಗಳು DAF-I ONLINE ಭರ್ತಿ ಮಾಡಿ ಆನ್ಲೈನ್ನಲ್ಲಿ ಸಿವಿಎಲ್ ಸರ್ವೀಸ್ ಮುಖ್ಯ ಪರೀಕ್ಷೆ (ಜುಲೈ 20, 2019) ಗಾಗಿ ನೋಂದಣಿ ಮಾಡಿಕೊಳ್ಳಬೇಕು.

UPSC Prelims Result 2019 with full list of names: Check direct link

'ಅಂಕಗಳು, ಕಟ್ ಆಫ್ ಮಾರ್ಕ್ಸ್, ಕೀ ಉತ್ತರಗಳನ್ನು ಪರೀಕ್ಷೆ ಪ್ರಕ್ರಿಯೆ ಮುಕ್ತಾಯವಾಗಿ ಫೈನಲ್ ಫಲಿತಾಂಶ ಪ್ರಕಟವಾದ ಬಳಿಕ ಆಯೋಗದ ವೆಬ್ತಾಣದಲ್ಲಿ ಪ್ರಕಟಿಸಲಾಗುತ್ತದೆ', ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಳೆದ ಬಾರಿ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಮುಖ್ಯ ಪರೀಕ್ಷೆ ಫಲಿತಾಂಶದಲ್ಲಿ, ಐಐಟಿ ಬಾಂಬೆಯ ಬಿ.ಟೆಕ್., ಪದವೀಧರ ಕನಿಷಕ್ ಕಟಾರಿಯಾ ಮೊದಲ ಸ್ಥಾನ ಪಡೆದಿದ್ದರು. ಮಹಿಳೆಯರಲ್ಲಿ ಸೃಷ್ಟಿ ಜಯಂತ್ ದೇಶ್ ಮುಖ್ ಟಾಪರ್ ಆಗಿದ್ದಾರೆ. ಅವರು ಒಟ್ಟಾರೆ ಐದನೇ ಸ್ಥಾನ ಪಡೆದಿದ್ದಾರೆ. ಕಳೆದ ಬಾರಿ 10 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. 5 ಲಕ್ಷಕ್ಕೂ ಹೆಚ್ಚು ಮಂದಿ ಪರೀಕ್ಷೆ ಬರೆದಿದ್ದರು. 10,468 ಮಂದಿ ಮುಖ್ಯಪರೀಕ್ಷೆ ತೆಗೆದುಕೊಂಡಿದ್ದರು.

ಅಭ್ಯರ್ಥಿಗಳ ಹೆಸರು, ಫಲಿತಾಂಶ ವಿವರಗಳನ್ನು ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+