ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎಸ್‌ಸಿ ಮೈನ್ ಫಲಿತಾಂಶ ಪ್ರಕಟ: ಸಂದರ್ಶನದಲ್ಲಿ ವಿಫಲವಾದರೂ ಉದ್ಯೋಗಾವಕಾಶ

|
Google Oneindia Kannada News

ನವದೆಹಲಿ, ಮಾರ್ಚ್ 24: ಕೇಂದ್ರ ಲೋಕಸೇವಾ ಆಯೋಗವು ನಾಗರಿಕ ಸೇವಾ ಪರೀಕ್ಷೆ(ಮೈನ್) 2020ರ ಫಲಿತಾಂಶವನ್ನು ಪ್ರಕಟಿಸಿದೆ.

ಯುಪಿಎಸ್‌ಸಿ ಪರೀಕ್ಷೆಯ ಸಂದರ್ಶನದಲ್ಲಿ ತೇರ್ಗಡೆಯಾದವರಿಗೆ ಅನ್ಯ ಸರ್ಕಾರಿ ಮತ್ತಿತರೆ ಕ್ಷೇತ್ರಗಳಲ್ಲಿ ಆದ್ಯತೆಯ ಮೇರೆಗೆ ಉದ್ಯೋಗ ದೊರಕಿಸಿಕೊಡುವ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

UPSC ಪರೀಕ್ಷೆ 2021: ವಯೋಮಿತಿ ಮೀರಿದವರಿಗೆ ಅವಕಾಶವಿಲ್ಲUPSC ಪರೀಕ್ಷೆ 2021: ವಯೋಮಿತಿ ಮೀರಿದವರಿಗೆ ಅವಕಾಶವಿಲ್ಲ

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಈ ಅಭ್ಯರ್ಥಿಗಳು ಮಾಡಿರುವ ಸಾಧನೆಯ ಆಧಾರದಲ್ಲಿ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಅವರನ್ನು ನೇಮಕ ಮಾಡಿಕೊಳ್ಳಳು ಅನುಮತಿ ನೀಡಲಾಗಿದೆ.

UPSC Main 2020 Result Declared

ಯುಪಿಎಸ್‌ಸಿ ವೆಬ್‌ಸೈಟ್ ನಲ್ಲಿ ಪರಿಶೀಲಿಸಬಹುದಾಗಿದೆ. ಈ ಪರೀಕ್ಷೆಗಳನ್ನು 2021ರ ಜನವರಿ 8 ರಿಂದ 17ರವರೆಗೆ ನಡೆಸಲಾಗಿತ್ತು.

ಈ ಹಿಂದೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾಗುವುದನ್ನು ಕೂದಲೆಳೆಯಲ್ಲಿ ತಪ್ಪಿಸಿಕೊಂಡ ಪ್ರತಿಭಾವಂತ ಸ್ಪರ್ಧಾರ್ಥಿಗಳಿಗೆ ಅಮತಹ ಉದ್ಯೋಗಾವಕಾಶವೇನೂ ಇರಲಿಲ್ಲ. ಆದರೆ ಸಂದರ್ಶನದ ಹಂತದವರೆಗೆ ಹೋಗಿ ವಿಫಲರಾದವರ ಅಂಕಗಳು ಹಾಗೂ ಇತರೆ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ ಇತರೆ ಉದ್ಯೋಗದಾತರಿಗೆ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರದ ಈ ಅನುಮೋದನೆ ಅನುವು ಮಾಡಿಕೊಟ್ಟಿದೆ.

ಸಂದರ್ಶನದ ಹಂತದವರೆಗೆ ಹೋಗಿ ವಿಫಲರಾದವರ ಈ ವಿವರಗಳನ್ನು ನ್ಯಾಷನಲ್ ಇನ್‌ಫಾರ್ಮಾಟಿಕ್ಸ್ ಕೇಂದ್ರ ಅಭಿವೃದ್ಧಿಪಡಿಸಿದ ಇಂಟಿಗ್ರೇಟೆಡ್ ಇನ್‌ಫಾರ್ಮೇಷನ್ ಸಿಸ್ಟಂಗೆ ಸಂಪರ್ಕಿಸಲಾಗುತ್ತದೆ.

ಸೇನೆ, ಕೇಂದ್ರ ಕೈಗಾರಿಕೆ ಭದ್ರತಾ ಪಡೆ ಮೊದಲಾದ ಪರೀಕ್ಷೆಗಳನ್ನು ಬರೆಯುವ ಸ್ಪರ್ಧಾರ್ಥಿಗಳಿಗೆ ಈ ಅವಕಾಶ ನೀಡಿಲ್ಲ ಎಂದು ಲೋಕಸೇವಾ ಆಯೋಗ ಸ್ಪಷ್ಟಪಡಿಸಿದೆ.

English summary
The Union Public Service Commission (UPSC) on Tuesday, March 23 announced the civil services main 2020 results. The UPSC main examination was held from January 8-17, 2021. Candidates who have taken the examination can check their results on the official site of UPSC at upsc.gov.in.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X