ನಕಲಿ ದಾಖಲೆಗಳು: ಇಬ್ಬರು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕ್ರಮ ತೆಗೆದುಕೊಳ್ಳಲಿರುವ ಯುಪಿಎಸ್‌ಸಿ!
ನವದೆಹಲಿ, ಮೇ. 26: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದೇವೆ ಎಂದು ತಪ್ಪಿ ತಪ್ಪಾಗಿ ಘೋಷಿಸಿದ್ದ ಇಬ್ಬರು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮತ್ತು ಶಿಸ್ತಿನ ಕ್ರಮವನ್ನು ಪರಿಗಣಿಸುತ್ತಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಮಂಗಳವಾರ ಯುಪಿಎಸ್‌ಸಿ 2022 ರ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.
ಮಧ್ಯಪ್ರದೇಶದಿಂದ ಆಯಶಾ ಮಕ್ರಾನಿ ಮತ್ತು ಬಿಹಾರದ ತುಷಾರ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗುತ್ತಿದೆ. ಕೇಂದ್ರ ಲೋಕಸೇವಾ ಆಯೋಗವು 2022 ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ನಿಜವಾಗಿ ಆಯ್ಕೆಯಾಗಿದ್ದ ಇಬ್ಬರು ಅಭ್ಯರ್ಥಿಗಳ ಎರಡು ರೋಲ್ ಸಂಖ್ಯೆ, ಸ್ಥಾನಗಳನ್ನು ಮೋಸದಿಂದ ಬಳಸಿದ್ದಾರೆ ಎಂದು ಆಯೋಗ ಹೇಳಿದೆ.

"ಇಬ್ಬರೂ ವ್ಯಕ್ತಿಗಳ ಹಕ್ಕುಗಳು ನಕಲಿಯಾಗಿದೆ. ಅವರು ತಮ್ಮ ಹಕ್ಕುಗಳನ್ನು ಸಮರ್ಥಿಸಲು ತಮ್ಮ ಪರವಾಗಿ ಎಲ್ಲಾ ದಾಖಲೆಗಳನ್ನು ನಕಲಿ ಮಾಡಿದ್ದಾರೆ" ಎಂದು ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. ಹೀಗೆ ಮೋಸ ಮಾಡಿ ನಕಲಿ ದಾಖಲೆ ತಯಾರಿಸುವ ಮೂಲಕ, ಆಯಾಶಾ ಮಕ್ರಾನಿ ಮತ್ತು ತುಷಾರ್ ಇಬ್ಬರೂ ಭಾರತ ಸರ್ಕಾರ (ಸಿಬ್ಬಂದಿ ಮತ್ತು ತರಬೇತಿ ಇಲಾಖೆ) ಸೂಚಿಸಿರುವ ನಾಗರಿಕ ಸೇವಾ ಪರೀಕ್ಷೆಯ ನಿಯಮಗಳು, 2022 ರ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಆಯೋಗವು ಆರೋಪಿಸಿದೆ.
ಆದ್ದರಿಂದ, ಪರೀಕ್ಷಾ ನಿಯಮಗಳ ನಿಬಂಧನೆಗಳಿಗೆ ಅನುಸಾರವಾಗಿ, ಕೇಂದ್ರ ಲೋಕಸೇವಾ ಆಯೋಗವು ಇಬ್ಬರು ಅಭ್ಯರ್ಥಿಗಳ ವಿರುದ್ಧ ಅವರ ಮೋಸದ ಕೃತ್ಯಗಳಿಗಾಗಿ ಕ್ರಿಮಿನಲ್ ಮತ್ತು ಶಿಸ್ತಿನ ಕ್ರಮವನ್ನು ಆಲೋಚಿಸುತ್ತಿದೆ ಎಂದು ಹೇಳಿಕೆ ತಿಳಿಸಿದೆ.

" ಕೇಂದ್ರ ಲೋಕಸೇವಾ ಆಯೋಗವುದ ವ್ಯವಸ್ಥೆಯು ದೃಢವಾದ ಮತ್ತು ತಪ್ಪುಮಾಡಲು ಆಸ್ಪದವಿಲ್ಲದ ವ್ಯವಸ್ತೆಯಾಗಿದ್ದು, ಇಂತಹ ದೋಷಗಳು ಸಾಧ್ಯವಿಲ್ಲ" ಎಂದು ಹೇಳಿದೆ.
ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಇತ್ಯಾದಿಗಳ ಆಯ್ಕೆಗಾಗಿ ಅಧಿಕಾರಿಗಳಿಗೆ ಪೂರ್ವಭಾವಿ, ಮುಖ್ಯ ಮತ್ತು ಸಂದರ್ಶನವನ್ನು ಮೂರು ಹಂತಗಳಲ್ಲಿ ಯುಪಿಎಸ್‌ಸಿ ವಾರ್ಷಿಕವಾಗಿ ನಾಗರಿಕ ಸೇವೆಗಳ ಪರೀಕ್ಷೆಯನ್ನು ನಡೆಸುತ್ತದೆ.











Click it and Unblock the Notifications