UPSC ಸಿವಿಎಲ್ ಪೂರ್ವಭಾವಿ ಪರೀಕ್ಷೆ ಫಲಿತಾಂಶ ಪ್ರಕಟ

ನವದೆಹಲಿ, ಅ.24: ಕೇಂದ್ರ ನಾಗರಿಕ ಸೇವಾ ಆಯೋಗ (UPSC) 2020 ಸಿವಿಎಲ್ ಸೇವೆಗಳ ಪೂರ್ವಭಾವಿ ಪರೀಕ್ಷೆ ಫಲಿತಾಂಶವನ್ನು ಶುಕ್ರವಾರ ತಡ ರಾತ್ರಿ ಪ್ರಕಟಿಸಲಾಗಿದೆ. ಫಲಿತಾಂಶವನ್ನು ಅಧಿಕೃತ ವೆಬ್ ತಾಣ(upsc.gov.in)ದಲ್ಲಿ ವೀಕ್ಷಿಸಬಹುದು.

ಕೇಂದ್ರ ನಾಗರಿಕ ಸೇವಾ ಆಯೋಗದ ಸಿವಿಎಲ್ ಪೂರ್ವಭಾರಿ ಪರೀಕ್ಷೆಗಳನ್ನು ಬರೆದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದುಕೊಳ್ಳುತ್ತಾರೆ. ಈ ಕುರಿತಂತೆ ವಿಸ್ತೃತವಾದ ಅರ್ಜಿ(ಡಿಎಎಫ್)ಯನ್ನು ಅಕ್ಟೋಬರ್ 28 ರಿಂದ ನವೆಂಬರ್ 11ರ ಸಂಜೆ 6ರೊಳಗೆ ಆನ್ ಲೈನ್ ನಲ್ಲಿ ಸಲ್ಲಿಸಬಹುದು. ಮುಖ್ಯ ಪರೀಕ್ಷೆ ಜನವರಿ 8, 2021ರಂದು ನಿಗದಿಯಾಗಿದೆ.

ಮುಖ್ಯಪರೀಕ್ಷೆ ಫಲಿತಾಂಶ ಹಾಗೂ ಮೆರಿಟ್ ಆಧಾರದ ಮೇಲೆ ಆಯ್ಕೆ ಪಟ್ಟಿ ಮಾಡಲಾಗಿದೆ. ಈ ಪಟ್ಟಿಯನ್ನು ಆಧರಿಸಿ ಮುಂದಿನ ಉದ್ಯೋಗ ನೇಮಕಾತಿ ಪ್ರಕ್ರಿಯೆಗೆ ಶಿಫಾರಸ್ಸು ಕಳುಹಿಸಲಾಗುತ್ತದೆ.

UPSC civil services prelims results 2020 announced

ಯುಪಿಎಸ್ ಸಿ ನಾಗರಿಕ ಸೇವಾ ಪರೀಕ್ಷೆ-2020ರ ಫಲಿತಾಂಶವನ್ನು ವೀಕ್ಷಣೆಗೆ ಈ ನಿಯಮಗಳನ್ನು ಅನುಸರಿಸಿ:

1. ಯುಪಿಎಸ್ ಸಿಯ ಅಧಿಕೃತ ವೆಬ್ ಸೈಟ್ upsc.gov.in ತೆರೆಯಿರಿ
2. 2020ರ ಫಲಿತಾಂಶಗಳನ್ನು ಘೋಷಿಸಿರುವ ಇತ್ತೀಚಿನ ವಿಭಾಗಕ್ಕೆ ಹೋಗಿ,
3. ಸಿವಿಎಲ್ ಹಾಗೂ ಐಎಫ್ಎಸ್ ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಿಡಿಎಫ್ ನಲ್ಲಿ ವೀಕ್ಷಿಸಿ
4. ನಿಮ್ಮ ಯುಪಿಎಸ್ಸಿ ನಾಗರಿಕ ಸೇವೆಗಳ ಸಿವಿಎಲ್ ಪರೀಕ್ಷೆ 2020 ಫಲಿತಾಂಶವನ್ನು ಡೌನ್ ಲೋಡ್ ಮಾಡಿಕೊಳ್ಳಿ
5. ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ವಿಸ್ತೃತವಾದ ಅರ್ಜಿ(ಡಿಎಎಫ್) ಸಲ್ಲಿಸಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+