ಮೇ.30: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್
ಬೆಂಗಳೂರು, ಮೇ.30: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
10.45: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ದಿನಾಂಕ ನಿಗದಿಯಾಗಿದೆ. ಜೂ.3 ರಂದು ದೆಹಲಿ ಪ್ರವಾಸ ಕೈಗೊಳ್ಳಲಿರುವ ಜಯಲಲಿತಾ ಅವರು ಮೋದಿ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಲಿದ್ದಾರೆ.
10.30 : ರಕ್ಷಣಾ ಇಲಾಖೆಯಲ್ಲಿ ಎಫ್ ಡಿಐ ಪ್ರಮಾಣವನ್ನು ಶೇ 100ರಷ್ಟಕ್ಕೆ ಏರಿಸುವ ಸಚಿವ ಸಂಪುಟ ನಿರ್ಣಯಕ್ಕೆ ವಾಣಿಜ್ಯ ಸಚಿವಾಲಯದ ಒಪ್ಪಿಗೆ ಸಿಕ್ಕಿರುವ ಸುದ್ದಿ ಬಂದಿದೆ.

10.25 : ಜೀವಂತ ವ್ಯಕ್ತಿಗಳ ಸಾಧನೆಗಳನ್ನು ಪಾಠವಾಗಿ ಮಕ್ಕಳಿಗೆ ಕಲಿಸುವ ಅವಶ್ಯಕತೆ ಇಲ್ಲ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಮಧ್ಯಪ್ರದೇಶ ಸರ್ಕಾರ ಮೋದಿ ಕುರಿತಂತೆ ಪಾಠವನ್ನೊಂದು ಪಠ್ಯಕ್ರಮಕ್ಕೆ ಸೇರಿಸುವ ಚಿಂತನೆ ನಡೆಸಿದೆ.
I firmly believe that the life story of living individuals should not be included as a part of the school curriculum.
— Narendra Modi (@narendramodi) May 30, 2014 10.15 : ಚೀನಾ-ಮ್ಯಾನ್ಮಾರ್ ಗಡಿ ಭಾಗದಲ್ಲಿ ಶುಕ್ರವಾರ ಬೆಳಗ್ಗೆ ಭೂಕಂಪ ಉಂಟಾಗಿದೆ.
10.00 : ರಾಹುಲ್ ಗಾಂಧಿಯನ್ನು ಜೋಕರ್ ಎಂದ ಕೇರಳ ಕಾಂಗ್ರೆಸ್ ನಾಯಕನನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
9.45: ಪ್ರಪ್ರಥಮ ವಾಣಿಜ್ಯ ವಿಮಾನ ಜಂಬೋ ಎ380 ವಿಮಾನ ದೆಹಲಿಯಲ್ಲಿ ಇಂದು ಕಾರ್ಯಾರಂಭ ಮಾಡಲಿದೆ.
9.00: ಮೋದಿ ಸರ್ಕಾರದ ಬಗ್ಗೆ ಮೊದಲ ಬಾರಿಗೆ ಅಣ್ಣಾ ಹಜಾರೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.












Click it and Unblock the Notifications