ಆ.7: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್
ಬೆಂಗಳೂರು, ಆ.7: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
11.10: ಮಾರಕ ವೈರಾಣು ಎಬೋಲಾ ದಾಳಿಗೆ ಸಿಲುಕಿ ಸಾವನ್ನಪ್ಪಿರುವವರ ಸಂಖ್ಯೆ 932ಕ್ಕೇರಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
11.00: ಲಿಬಿಯಾದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಅಧ್ಯಕ್ಷ ಎಲ್ಲೆನ್ ಜಾನ್ಸನ್ ಅವರು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
Delhi : Indian workers and nurses return from Libya,earlier today pic.twitter.com/o2fDPFtvqN
— ANI (@ANI_news) August 7, 2014 10.45: ಲಿಬಿಯಾದಲ್ಲಿದ್ದ ಭಾರತೀಯ ಮೂಲದ ನರ್ಸ್ ಗಳು ಭಾರತಕ್ಕೆ ಹಿಂತಿರುಗುತ್ತಿದ್ದಾರೆ.[ಅಮೆರಿಕಕ್ಕೆ ಆತಂಕ ತಂದಿರುವ ಡೆಡ್ಲಿ 'ವೈರಸ್']

10.30: ಬಾಲಾಪರಾಧಿ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದ್ದು, ಕಾಂಗ್ರೆಸ್ ಈ ಬಗ್ಗೆ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದೆ.
9.30: ಮಿಜೋರಾಂ ಗವರ್ನರ್ ಕಮಲಾ ಬೇನಿವಾಲ್ ಅವರನ್ನು ರಾಜ್ಯಪಾಲ ಹುದ್ದೆಯಿಂದ ವಜಾಗೊಳಿಸಿರುವುದನ್ನು ಸಚಿವ ವೆಂಕಯ್ಯ ನಾಯ್ಡು ಸಮರ್ಥಿಸಿಕೊಂಡಿದ್ದಾರೆ.












Click it and Unblock the Notifications