ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.17: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಸೆ.17: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

7.00: ಚಿನ್ನದ ದರ ಕಳೆದ ಮೂರು ತಿಂಗಳಲ್ಲೇ ಅಧಿಕ ಎನ್ನುವಂತೆ ಇಳಿಕೆಯಾಗಿದೆ. ಚಿನ್ನದ ದರ ಪ್ರತಿ ಗ್ರಾಂಗೆ 115 ರು ಕಳೆದುಕೊಂಡಿದೆ. ಅಪರಂಜಿ ಚಿನ್ನ ಗ್ರಾಂಗೆ 2700 ರು ನಷ್ಟಿದೆ.

2.45: ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಲಲಿತಾ ಕುಮಾರಮಂಗಲಂ ನೇಮಕ.

Golg

2.10: ಕಾಶ್ಮೀರದ ಸಂತ್ರಸ್ತರ ನೆರವು ಕಾರ್ಯಕ್ಕೆ ಅಡ್ಡಿಪಡಿಸಿಲ್ಲ. ಒಂದು ವೇಳೆ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಯಾಸಿನ್ ಮಲಿಕ್ ಹೇಳಿಕೆ.
1.45: ದೆಹಲಿಯ ಚೀನಾದ ರಾಯಭಾರಿ ಕಚೇರಿ ಎದುರು ಟಿಬೇಟಿಯನ್ನರು ಪ್ರತಿಭಟನೆ ನಡೆಸಿದ್ದಾರೆ. ಚೀನಾದ ಅಧ್ಯಕ್ಷ ಭಾರತಕ್ಕೆ ಬರುವುದನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

12.40: ಭಾರತೀಯ ಬಾಕ್ಸರ್ ಮನೋಜ್ ಕುಮಾರ್ ಅವರಿಗೆ ಅರ್ಜುನ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

9.50: ಏಷ್ಯನ್ ಗೇಮ್ಸ್ ತರಬೇತಿ ಸಂದರ್ಭದಲ್ಲಿ ಜಿಮ್ನಾಸ್ಟಿಕ್ ಕೋಚ್ ಮನೋಜ್ ರಾಣಾ ಹಾಗೂ ಜಿಮ್ ಪಟು ಚಂದನ್ ಪಟು ಅವರು ಮಹಿಳಾ ಕ್ರೀಡಾಪಟುವಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
9.40: ಜಪಾನ್ ನಂತರ ಚೀನಾ ದೇಶ ಭಾರತದಲ್ಲಿ ಬುಲೆಟ್ ರೈಲು ಓಡಿಸಲು ಉತ್ಸುಕವಾಗಿದೆ. 100 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಚೀನಾ ಹಾಗೂ ಭಾರತ ಒಪ್ಪಂದ ಮಾಡಿಕೊಳ್ಳಲಿದೆ.
9.30: ನೇಪಾಳ ಪ್ರಧಾನಿ ಸುಶೀಲ್ ಕೊಯಿರಾಲ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭ ಹಾರೈಕೆ ಸಲ್ಲಿಸಿದ್ದಾರೆ.

Updates India, International News in Brief Sept 17

9.15: ಕೋಲ್ಕತ್ತಾದ ಜಾಧವ್ ಪುರ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಿರತ 35 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಕಳೆದ ತಿಂಗಳು ವಿವಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ಕಿರುಕುಳ ನಡೆದಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿತ್ತು.
9.00: ಕರ್ನಾಟಕಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪ್ರಥಮ ಬಾರಿಗೆ ಆಗಮಿಸಲಿದ್ದು, ಬೀದರ್ ಸಮೀಪದ ಗೊರಟಾ ಗ್ರಾಮದಲ್ಲಿ ಹೈದರಾಬಾದ್- ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

English summary
Top news in brief for the day: Asian Games coach Manoj Rana, gymnast Chandan Pathak accused of harassing girl in training camp and many more news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X