• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅ. 30: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ

By Mahesh
|

ಬೆಂಗಳೂರು, ಅ.30: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

17.40: ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಅವರು ನ. 7 ರಂದು ತಮ್ಮ ಸ್ವಕ್ಷೇತ್ರ ವಾರಣಾಸಿಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಸಂಸದ್ ಆದರ್ಶ್ ಗ್ರಾಮ ಯೋಜನೆಯಡಿಯಲ್ಲಿ ಒಂದು ಗ್ರಾಮವನ್ನು ದತ್ತು ಪಡೆಯುವ ಸಾಧ್ಯತೆಯಿದೆ.

17.30: 1984ರ ಸಿಖ್ ಹತ್ಯಾಕಾಂಡದ ಸಂತ್ರಸ್ತ ಕುಟುಂಬಗಳಿಗೆ ಮೋದಿ ಸರ್ಕಾರ ತಲಾ 5 ಲಕ್ಷ ರು ಘೋಷಿಸಿದೆ.

17.00: ಕಾಶ್ಮೀರದಲ್ಲಿ ಯಾಸಿನ್ ಮಲೀಕ್ ಬಂಧನದಿಂದ ಉಂಟಾಗಿದ್ದ ಪ್ರಕ್ಷುಬ್ಧ ಪರಿಸ್ಥಿತಿ ಈಗ ನಿಯಂತ್ರಣಕ್ಕೆ ಬಂದಿದೆ.

16.30: ಮಾದಕ ದ್ರವ್ಯ ಹೊಂದಿದ್ದ ಆರೋಪದ ಮೇಲೆ ಮರಣದಂಡನೆ ಶಿಕ್ಷೆ ಪಡೆದಿರುವ ಭಾರತೀಯ ಮೂಲದ ತಮಿಳು ಮೀನುಗಾರರಿಗೆ ನ.14ರ ತನಕ ಮೇಲ್ಮನವಿ ಸಲ್ಲಿಸುವ ಅವಕಾಶ ನೀಡಲಾಗಿದೆ.

15.30: ಎಂಎನ್ಎಸ್ ಮುಖಂಡ ರಾಜ್ ಠಾಕ್ರೆ ಅವರು ದೇವೇಂದ್ರ ಫಡ್ನವೀಸ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರು ಹಾಜರಾಗಲಿದ್ದಾರೆ.

14.00: ದೆಹಲಿ -ಆಗ್ರಾ ನಡುವಿನ ಮೊಟ್ಟ ಮೊದಲ ಹೈಸ್ಪೀಡ್ ರೈಲು ನವೆಂಬರ್ 10 ಕ್ಕೆ ಚಲಿಸಲಿದೆಯಂತೆ. [ಏನಿದು ಹೈಸ್ಪೀಡ್ ರೈಲು]

13.45: ಅ.31ರಂದು ಮಹಾರಾಷ್ಟ್ರ ಸಿಎಂ ಆಗಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ದೇವೇಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕರಿಸಲಿದ್ದು ಸುಮಾರು 200ಕ್ಕೂ ಅಧಿಕ ವಿವಿಐಪಿಗಳಿಗೆ ಆಹ್ವಾನ ಕಳಿಸಲಾಗಿದೆ.

13.15: ಗೋವಾ ಕಡಲಿನಲ್ಲಿ ಮೋಟರ್ ಸ್ಪೋರ್ಟ್ ನಲ್ಲಿ ತೊಡಗಿದ್ದ ಮೂವರು ರಷ್ಯನ್ ಮಹಿಳೆಯರು ಮೃತಪಟ್ಟ ಹಿನ್ನೆಲೆಯಲ್ಲಿ ಎಲ್ಲಾ ರೀತಿ ಜಲಕ್ರೀಡೆಗಳ ಮೇಲೆ ಬಿಜೆಪಿ ಸರ್ಕಾರ ನಿಷೇಧ ಹೇರಿದೆ. [ವಿವರ ಇಲ್ಲಿದೆ]

11.50: ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಕಪ್ಪು ಹಣ ಹೊಂದಿರುವ ಖಾತೆದಾರರ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ' ಬಿಜೆಪಿಯ ಯಾವೊಬ್ಬ ನಾಯಕರು ಕಪ್ಪು ಹಣ ಹೊಂದಿಲ್ಲ, ತೆರಿಗೆ ವಂಚಿಸಿ ವಿದೇಶದ ಬ್ಯಾಂಕ್ ಗಳಲ್ಲಿ ಹಣ ಇಟ್ಟಿಲ್ಲ' ಎಂದಿದ್ದಾರೆ.

11.40: ನೊಬೆಲ್ ಶಾಂತಿ ಪಾರಿತೋಷಕ ವಿಜೇತೆ ಮಲಾಲ ಯುಸಫ್ಜಾಯಿ ಅವರು ಗಾಜಾದಲ್ಲಿರುವ ವಿಶ್ವಸಂಸ್ಥೆ ಶಾಲೆಗೆ 50,000 ಯುಎಸ್ ಡಾಲರ್ ದೇಣಿಗೆ ನೀಡಿದ್ದಾರೆ.

11.30: ಮುಂಬೈನ ಕಲ್ಯಾಣ್ ಬಳಿ ಅಮರಾವತಿ ಎಕ್ಸ್ ಪ್ರೆಸ್ ಹಳಿ ತಪ್ಪಿದ್ದು ಸಂಚಾರ ವ್ಯತ್ಯಯಗೊಂಡಿದೆ.

11.20: ತಮಿಳುನಾಡಿನ ಮುಖಂಡ ವೈಕೋ ಅವರು ಡಿಎಂಕೆ ಸೇರುವ ಸಾಧ್ಯತೆ ಹೆಚ್ಚಿದೆ. ವೈಕೋ ಪರ ಮೆಚ್ಚುಗೆ ಸೂಚಿಸಿ ಎಂ ಕರುಣಾನಿಧಿ ಹೇಳಿಕೆ ನೀಡಿದ್ದಾರೆ.

11.15: ದೆಹಲಿಯಲ್ಲಿ ಸರ್ಕಾರ ರಚನೆ ಸರ್ಕಸ್ ಮುಂದುವರೆದಿದ್ದು, ಲೆ. ಜನರಲ್ ನಸೀಬ್ ಜಂಗ್ ಅವರು ಸರ್ವ ಪಕ್ಷಗಳ ಸಭೆ ಕರೆಯುವ ಸಾಧ್ಯತೆಯಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Top News of the today : The first high-speed train between Delhi and Agra with a speed of 160 km per hour is expected to run on November 10 as Kapurthala Rail Coach Factory is all set to roll out the first rake of fourteen coaches of the train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more