ಅ.29: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್
ಬೆಂಗಳೂರು, ಅ.29: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
15.30: ಏರ್ ಸೆಲ್ -ಮ್ಯಾಕ್ಸಿಡ್ ಡೀಲ್ ಹಗರಣ: ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಗೆ ಕೋರ್ಟಿನಿಂದ ಸಮನ್ಸ್
15.10: ಹುಡ್ ಹುಡ್ ಚಂಡಮಾರುತದಿಂದ ವಿಶಾಖಪಟ್ಟಣ ಶೇ 80 ರಷ್ಟು ಹಾನಿಯಾಗಿದ್ದರೆ ಒಟ್ಟಾರೆ ಆಂಧ್ರಪ್ರದೇಶದಲ್ಲಿ ನಷ್ಟದ ಪ್ರಮಾಣ 14,840 ಕೋಟಿ ರು ದಾಟಿದೆ. ಈ ನಡುವೆ ಫೇಸ್ ಬುಕ್ ನಲ್ಲಿ I love u hudhud ಎಂಬ ಕಾಮೆಂಟ್ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿರುವ ಸುದ್ದಿ ಬಂದಿದೆ.

14.50: ಶ್ರೀಲಂಕಾದ ಭೂಕುಸಿತದಿಂದಾಗಿ 10 ಜನ ಸಾವನ್ನಪ್ಪಿದ್ದು, 250ಕ್ಕೂ ಅಧಿಕ ಮಂದಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
12.15: ಕಪ್ಪು ಹಣಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ವಿಶೇಷ ತನಿಖಾ ದಳಕ್ಕೆ ಒಪ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
11.25: ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಮೂರು ಮುಚ್ಚಿದ ಲಕೋಟೆಗಳನ್ನು ತೆರೆಯುವ ಅಧಿಕಾರವನ್ನು ವಿಶೇಷ ತನಿಖಾ ದಳಕ್ಕೆ ನೀಡಲಾಗಿದೆ.
11.20: ಸುಪ್ರೀಂಕೋರ್ಟಿಗೆ ಸಲ್ಲಿಸಲಾದ 627 ಹೆಸರುಗಳು ಈ ಹಿಂದೆ ಎಚ್ ಎಸ್ ಬಿಸಿ ನೀಡಿದ್ದ ಹೆಸರುಗಳೇ ಆಗಿವೆ ಎಂದು ಆಮ್ ಆದ್ಮಿ ಪಕ್ಷ ಪರ ವಕೀಲ ಪ್ರಶಾಂತ್ ಭೂಷಣ್ ಹೇಳಿಕೆ
11.15: ಸುಪ್ರೀಂಕೋರ್ಟಿಗೆ ಖಾತೆದಾರರ ಹೆಸರುಗಳನ್ನು ಸಲ್ಲಿಸುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ: ಸಂತೋಷ್ ಹೆಗ್ಡೆ
Don’t think Govt had a choice, they had to comply with Court’s order: Santosh Hegde on Govt submits names to SC pic.twitter.com/yMDbWaxjWF
— ANI (@ANI_news) October 29, 2014 11.00: ಒಟ್ಟು 627 ಹೆಸರುಗಳುಳ್ಳ ಮೂರು ಲಕೋಟೆಯನ್ನು ಸುಪ್ರೀಂಕೋರ್ಟಿಗೆ ಅಟರ್ನಿ ಜನರಲ್ ಮುಕುಲ್ ರೊಹ್ಟಗಿ ಅವರು ಸಲ್ಲಿಸಿದ್ದಾರೆ.
The documents include 627 names & status report of their investigation in these cases
— ANI (@ANI_news) October 29, 2014 10.05: ಕಪ್ಪು ಹಣ ಕೇಸ್: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಸುಮಾರು 600 ಜನರ ಹೆಸರನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಲು ಸಿದ್ದವಾಗಿದೆ.

9.50: ದೇಶದ ಜನತೆಗೆ ಪ್ರಧಾನಿ ಮೋದಿ ಅವರು ಛಾತ್ ಪೂಜೆಯ ಶುಭ ಹಾರೈಕೆ ಕೋರಿದ್ದಾರೆ.
My greetings on auspicious occasion of Chhath Puja. May blessings of the Sun God brighten our lives with joy, peace & prosperity: PM tweets
— ANI (@ANI_news) October 29, 2014 9.30: ವಿದೇಶದಲ್ಲಿ ದುರಂತ ಸಾವನ್ನಪ್ಪಿದ ಸವಿತಾ ಹಾಲಪ್ಪನವರ್ ಅವರ 2ನೇ ಪುಣ್ಯತಿಥಿ ಅಂಗವಾಗಿ ಬೆಂಗಳೂರಿನ ಟೌನ್ ಹಾಲ್ ಎದುರು ಮೌನ ಪ್ರತಿಭಟನೆ ನಡೆಸಲಾಗಿದೆ.
Bangalore : Protest to mark Sarita Halappanavar's 2nd death anniversary pic.twitter.com/tqwf1gCbeE
— ANI (@ANI_news) October 28, 2014 9.15: ಕೃಷ್ಣಮೃಗ ಬೇಟೆ ಪ್ರಕರಣ: ನಟಿ ಸೋನಾಲಿ ಬೇಂದ್ರೆ, ತಬು ಹಾಗೂ ನೀಲಂರನ್ನು ಗುರುತಿಸಿದ ಸಾಕ್ಷಿದಾರರು.












Click it and Unblock the Notifications