ನ.7: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ
ಬೆಂಗಳೂರು, ನ.7: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
12.00: ಇಸ್ರೇಲ್ ಪ್ರವಾಸದಲ್ಲಿರುವ ಭಾರತದ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಇಸ್ರೇಲ್ ಗಡಿ ಭಾಗದಲ್ಲಿ ಇಸ್ರೇಲಿ ಮಹಿಳಾ ಯೋಧರ ಜೊತೆ ಗ್ರೂಪ್ ಫೋಟೋ ಟ್ವೀಟ್( @HMOIndia) ಮಾಡಿದ್ದಾರೆ.
The HM visited the Israeli border outpost and met the female soldiers who keep a vigil at the international border. pic.twitter.com/1TUXOzBSUt
— HMO India (@HMOIndia) November 7, 2014 
11.25: ಬನಾರಾಸ್ ಸೀರೆಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಈ ಸೀರೆಗಳಿಗೆ ಪರಂಪರೆಯಿದೆ. ತಾಯಿ ತನ್ನ ಮಗಳ ಮದುವೆ ಸಂದರ್ಭದಲ್ಲಿ ಬನಾರಾಸಿ ಸೀರೆ ತಪ್ಪದೇ ನೀಡುತ್ತಿದ್ದಳು ಎಂದು ಮೋದಿ ಹೇಳಿದ್ದಾರೆ.
11.20: ಕೃಷಿ ನಂತರ ಜವಳಿ ಉದ್ಯಮ ಅತ್ಯಂತ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಮೂಲಕ ದೇಶದ ಪ್ರಮುಖ ಕ್ಷೇತ್ರ ಎನಿಸಿದೆ: ಮೋದಿ
11.15 : ನಾನು ವಾರಣಾಸಿ ಸಂಸದನಲ್ಲ, ನಿಮ್ಮ ಸೇವಕ ಎಂದಿದ್ದಾರೆ. ನೂತನ ಕೈಮಗ್ಗ ಕೇಂದ್ರವನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು.
PM Narendra Modi inaugurates Powerloom service centre
— Doordarshan News (@DDNewsLive) November 7, 2014 10.10: ಗೋವಾ ಸಿಎಂ ಸ್ಥಾನಕ್ಕೆ ಮನೋಹರ್ ಪಾರಿಕ್ಕಾರ್ ಅವರು ಶುಕ್ರವಾರ ರಾಜಜೀಮೆ ನೀಡಲಿದ್ದಾರೆ. ಕೇಂದ್ರದಲ್ಲಿ ಸಚಿವ ಸ್ಥಾನ ಸಿಗುವುದು ಖಾತ್ರಿಯಾಗಿದೆ. ಗೋವಾ ಶಾಸಕಾಂಗ ಸಭೆ ನಡೆಯಲಿದು ನೂತನ ಸಿಎಂ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದೆ.

9.50: ವಾರಣಾಸಿಗೆ ಪ್ರಧಾನಿ ಮೋದಿ ಅವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ 2 ದಿನಗಳ ಕಾಲ ಸ್ವಕ್ಷೇತ್ರದಲ್ಲಿ ಉಳಿಯಲಿದ್ದಾರೆ.
9.40: ಭಾರತೀಯ ಜಲಸೇನೆ ಸೇರಿದ ಹಡಗೊಂಡು ವಿಶಾಖಪಟ್ಟಣಂನಲ್ಲಿ ಮುಳುಗಡೆಯಾಗಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
Navy ship sinks in Visakhapatnam: Search and rescue operations still on pic.twitter.com/x5o5zDgYRG
— ANI (@ANI_news) November 7, 2014 9.30: ಪ್ರಧಾನಿ ಮೋದಿ ಆಗಮನಕ್ಕೂ ಮುನ್ನ ವಾರಣಾಸಿಯ ಜಯಪುರದಲ್ಲಿ ಹೋಮ ಹವನಗಳನ್ನು ಮಾಡಲಾಗುತ್ತಿದೆ.
Jayapur (Varanasi) : 'Hawan' being performed ahead of PM Modi's visit #PMInVaranasi pic.twitter.com/va4U2fJwZw
— ANI (@ANI_news) November 7, 2014 











Click it and Unblock the Notifications