ನ.27: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ
ಬೆಂಗಳೂರು, ನ.27: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
14.50: 15 ವರ್ಷ ಮೇಲ್ಪಟ್ಟ ವಾಹನಗಳಿಗೆ ದೆಹಲಿಯ ರಸ್ತೆಯಲ್ಲಿ ಪ್ರಯಾಣಿಸಲು ಅನುಮತಿ ಇಲ್ಲ ಎಂದು ರಾಷ್ಟ್ರೀಯ ಹಸಿರು ಪೀಠ ಮಹತ್ವದ ಆದೇಶ ನೀಡಿದೆ. ಹಸಿರು ಪೀಠದ ಅಧ್ಯಕ್ಷ ಜಸ್ಟೀಸ್ ಸ್ವತಂತ್ರ ಕುಮಾರ್ ಅವರು ನೀಡಿದ ಆದೇಶದಿಂದ ಹಳೆ ವಾಹನಗಳಿಗೆ ನೋ ಎಂಟ್ರಿ ಬೋರ್ಡ್ ತೋರಿಸಬೇಕಾಗಿದೆ.

12.45: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ನಲ್ಲಿ ತೊಡಗಿಕೊಂಡಿರುವ ಮೇಯಪ್ಪನ್ ಅವರ ಸಹ ಮಾಲೀಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಏಕೆ ಅನರ್ಹಗೊಳಿಸಬಾರದು ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. [ಪ್ರಶ್ನೆಗಳ ಸುರಿಮಳೆ ಇಲ್ಲಿದೆ]
11.00: ಆಸ್ಟ್ರೇಲಿಯಾದ ಕ್ರಿಕೆಟರ್ ಫಿಲ್ ಹ್ಯೂಸ್ ಅಕಾಲಿಕ ಮರಣಕ್ಕೆ ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ. ಟೀಂ ಇಂಡಿಯಾದ ಅಟಗಾರರು ಸೇರಿದಂತೆ ಅನೇಕ ಜನ ಹಾಲಿ, ಮಾಜಿ ಕ್ರಿಕೆಟರ್ ಗಳು ಸಂತಾಪ ವ್ಯಕ್ತಪಡಿಸಿದ್ದಾರೆ.[ ಟ್ವೀಟ್ ಕಂಬನಿ ಓದಿ]
10.30: ಬ್ರೇಕಿಂಗ್ ನ್ಯೂಸ್: ಆಸ್ಟ್ರೇಲಿಯಾದ ಕ್ರಿಕೆಟರ್ ಫಿಲ್ ಹ್ಯೂಸ್ ಗುರುವಾರ ಬೆಳಗ್ಗೆ ನಿಧನ.
10.25: ಎಂಡಿಎಂಕೆ ಮುಖ್ಯಸ್ಥ ವೈಕೋ ಅವರು ಈರೋಡಿನಲ್ಲಿ ಎಲ್ಟಿಟಿಇ ಮುಖ್ಯಸ್ಥ ಪ್ರಭಾಕರನ್ ಅವರ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಅಲ್ಲದೆ, ಪ್ರಭಾಕರನ್ ಅವರನ್ನು ಹೊಗಳುವ ಭರದಲ್ಲಿ ಶ್ರೀಲಂಕಾದ ಅಧ್ಯಕ್ಷ ರಾಜಪಕ್ಸೆ ಕೈಕುಲುಕಿದ ಪ್ರಧಾನಿ ಮೋದಿ ಅವರನ್ನು ವೈಕೋ ತೆಗಳಿದ್ದಾರೆ.

10.10: ಇಂಡೋನೇಷಿಯಾದಲ್ಲಿ ಪ್ರಬಲವಾದ ಭೂಕಂಪ ಸಾಗರದ ಆಳದಲ್ಲಿ ಸಂಭವಿಸಿದೆ.
10.00: ಭಾರತದ ಮೂಲದ ಮಹಮ್ಮದ್ ಆಮೀರ್ ಎಂಬುವರು ಲಿಬೇರಿಯಾದಲ್ಲಿ ಎಬೋಲಾ ಸೋಂಕಿಗೆ ಬಲಿಯಾಗಿದ್ದಾರೆ.
9.30: ಶಾರದಾ ಚಿಟ್ ಫಂಡ್ ಹಗರಣದ ಆರೋಪಿ ತೃಣಮೂಲ ಕಾಂಗ್ರೆಸ್ ನ ಶ್ರೀನ್ಜೋಯ್ ಬೋಸ್ ಅವರನ್ನು ಇನ್ನೂ ಮೂರು ದಿನಗಳವರೆಗೆ ಸಿಬಿಐ ಕಸ್ಟಡಿಗೆ ನೀಡಲಾಗಿದೆ.












Click it and Unblock the Notifications